ಅರಸೀಕೆರೆಯಲ್ಲಿ ಇನ್ನಷ್ಟು ಆಧಾರ್ ಕೇಂದ್ರ ಆರಂಭಿಸಿರೈತ ಸಂಘ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ
ಹಾಸನ

ಅರಸೀಕೆರೆಯಲ್ಲಿ ಇನ್ನಷ್ಟು ಆಧಾರ್ ಕೇಂದ್ರ ಆರಂಭಿಸಿರೈತ ಸಂಘ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ

July 17, 2019

ಅರಸೀಕೆರೆ, ಜು.16- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಸಾಮಾ ಜಿಕ ಭದ್ರತಾ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅನಿ ವಾರ್ಯವಾಗಿದೆ. ಹಾಗಾಗಿ, ತಾಲೂಕಿನ ಜನರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು, ತಿದ್ದುಪಡಿ ಮಾಡಿಸಲು ಆಧಾರ್ ಸೇವಾ ಕೇಂದ್ರಗಳೆದುರು ಈಗಲೂ ಸಾಲುಗಟ್ಟಿ ನಿಲ್ಲುವುದು ಮುಂದುವರಿದಿದೆ.

ತಾಲೂಕು ಆಡಳಿತವು ಪಡಸಾಲೆಯಲ್ಲಿ ಒಂದೇ ಕೌಂಟರ್ ಇರುವುದರಿಂದ ನಿತ್ಯವೂ ನೂರಾರು ಜನರು ಪರದಾಡುವಂತಾ ಗಿದೆ. ಹೆಚ್ಚುವರಿ ಕೌಂಟರ್ ತೆರೆಯ ಬೇಕೆಂದು ತಾಲೂಕು ರೈತ ಸಂಘ ಆಗ್ರಹಿಸಿದೆ.

ರೈತ ಸಂಘದ ಜಿಲ್ಲಾ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಹೋಬಳಿಗಳಲ್ಲಿಯೂ ಆಧಾರ್ ಸೇವಾ ಕೇಂದ್ರಗಳನ್ನು ತೆರೆಯು ವಂತೆ ಒತ್ತಾಯಿಸಿದರು. ತಹಸಿಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.

ಸದ್ಯ ಬ್ಯಾಂಕ್ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ನಲ್ಲಿನ ಲೋಪಗಳ ತಿದ್ದುಪಡಿಗೆ, ವಿಳಾಸ ಬದಲಾವಣೆಗೆ ಅವಕಾಶ ಮಾಡಿಕೊಡ ಲಾಗಿದೆ. ಆದರೆ ಅಲ್ಲಿ ದಿನಕ್ಕೆ 50 ಆಧಾರ್ ಕಾರ್ಡ್ ತಿದ್ದುಪಡಿಗೆ ಸೀಮಿತ ಗೊಳಿಸಲಾಗಿದೆ. ಇದರಿಂದ ಸಾರ್ವಜನಿ ಕರು, ರೈತರು ತಮ್ಮ ಕೆಲಸಗಳನ್ನು ಬಿಟ್ಟು ಆಧಾರ್ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದು ತಹಸೀಲ್ದಾರ್ ಅವರಿಗೆ ಪರಿಸ್ಥಿತಿಯ ಚಿತ್ರಣ ನೀಡಿದರು.

ಭರವಸೆ: ಮನವಿ ಸ್ವೀಕರಿಸಿದ ತಹಸೀ ಲ್ದಾರ್ ಸಂತೋಷ್ ಕುಮಾರ್, ಈ ವಿಚಾರವಾಗಿ ಗಮನ ಹರಿಸಲಾಗುವುದು. ಬ್ಯಾಂಕ್ ಮತ್ತು ಅಂಚೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಜರುಗಿಸಲಾಗುವುದÀು. ಅವಶ್ಯಕತೆ ಕಂಡುಬಂದಲ್ಲಿ ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದು ಹೆಚ್ಚುವರಿ ಆಧಾರ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದರು. ರೈತ ಮುಖಂಡ ರಾದ ಮಂಜಪ್ಪ, ರಘು, ಜಗದೀಶ್, ಪ್ರದೀಪ್, ನೀಲಮ್ಮ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »