ಬಾಕಿ ವೇತನ ಬಿಡುಗಡೆಗೆ ಆಗ್ರಹ
ಹಾಸನ

ಬಾಕಿ ವೇತನ ಬಿಡುಗಡೆಗೆ ಆಗ್ರಹ

May 28, 2019

ಜಿಪಂ ಕಚೇರಿ ಮುಂಭಾಗ ಗ್ರಾಪಂ ನೌಕರರ ಪ್ರತಿಭಟನೆ
ಹಾಸನ: ಹಲವು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಸಮಾವೇಶಗೊಂಡ ನೌಕ ರರು ಹಾಗೂ ಸಿಐಟಿಯು ಕಾರ್ಯ ಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಕನಿಷ್ಠ ವೇತನ ನೀಡುವುದು, ಬಾಕಿ ಉಳಿದಿರುವ ನೌಕರ ರನ್ನು ಇಎಫ್‍ಎಂಎಸ್‍ಗೆ ಸೇರಿಸುವುದು ಮತ್ತು ನೌಕರರ ವೇತನಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ನೌಕರರು ನಡೆಸಿದ ಹಲವು ವರ್ಷಗಳ ನಿರಂತರ ಹೋರಾಟದ ಫಲ ವಾಗಿ 2018ರ ಮಾರ್ಚ್ ತಿಂಗಳಿಂದ ನೌಕರರಿಗೆ ಸರ್ಕಾರದಿಂದಲೇ ನೇರವಾಗಿ ವೇತನ ಪಡೆಯಲು ಸಾಧ್ಯವಾಗಿದೆ. ರಾಜ್ಯದ ಗ್ರಾಪಂನ 61 ಸಾವಿರ ನೌಕರರಿಗೆ ಪ್ರಸ್ತುತ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಸೇರಿಸಿ ಪ್ರತಿ ತಿಂಗಳು ವೇತನ ನೀಡಲು ವರ್ಷಕ್ಕೆ 830 ರೂ. ಕೋಟಿ ಹಣ ಬೇಕಾಗುತ್ತದೆ. ಆದರೆ ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣದಲ್ಲಿ ರೈತರ ಸಾಲ ಮನ್ನಕ್ಕಾಗಿ 312ರೂ. ಕೋಟಿ ಬಳಸಿ ಕೊಂಡಿದ್ದರ ಪರಿಣಾಮವಾಗಿ ನೌಕರರಿಗೆ ಹಲವು ತಿಂಗಳ ವೇತನ ಬಿಡು ಗಡೆಯಾಗಿಲ್ಲ ಎಂದು ದೂರಿದರು.

ನೌಕರರ ವೇತನಕ್ಕಾಗಿ ಬೇಕಾಗುವ ಹೆಚ್ಚುವರಿ ಹಣಕ್ಕಾಗಿ ಈಗಾಗಲೇ ಸರ್ಕಾ ರಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅವರು ಹಣಕಾಸು ಇಲಾ ಖೆಗೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ನೌಕರರ ವೇತನಕ್ಕೆ ನಿಗದಿಯಾಗಿರುವ ಹಣ ಬರದೆ ಪಂಚಾಯಿತಿ ನೌಕರರ ವೇತನದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಲವತ್ತುಕೊಂಡರು.

ಬಾಕಿ ಉಳಿದಿರುವ 18 ಸಾವಿರ ಗ್ರಾಮ ಪಂಚಾಯಿತಿ ನೌಕರರ ಸೇವಾ ವಿವರ ಗಳನ್ನು ಇಎಫ್‍ಎಂಎಸ್‍ಗೆ ಸೇರಿಸಲು ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ. ಇದರಿಂದಾಗಿ ನೌಕರರಿಗೆ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಗಳೂ ಕೂಡ ವೇತನ ನೀಡುತ್ತಿಲ್ಲ. ನೌಕರರಿಗೆ ಗ್ರಾಮ ಪಂಚಾಯಿ ತಿಯ ತೆರಿಗೆ ವಸೂಲಾತಿ ಹಣದಲ್ಲೇ ಕನಿಷ್ಠ ವೇತನ ಪಾವತಿಸುವಂತೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅನ್ಯಾಯ ಮಾಡಲಾಗು ತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 34 ಸಾವಿರ ಪಂಪ್ ಆಪರೇ ಟರ್, ವಾಟರ್‍ಮನ್‍ಗಳು 75 ಸಾವಿರ ಕುಡಿಯುವ ನೀರಿನ ಸ್ಥಾವರಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಅನುಮೋದನೆ, ವೇತನ, ಬಡ್ತಿ ಮತ್ತಿತರೆ ಸೇವಾ ವಿಚಾರ ಗಳನ್ನು ಕಡೆಗಣಿಸಲಾಗುತ್ತಿದೆ. ಗ್ರಾಪಂ ಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚುವರಿ ಬಿಲ್‍ಕಲೆಕ್ಟರ್, ಹೆಚ್ಚುವರಿ ಕ್ಲರ್ಕ್, ಹೆಚ್ಚು ವರಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇ ಟರ್ ಹುದ್ದೆಗಳ ಅನುಮೋದನೆಗೆ ಕೂಡ ತುಂಬಾ ತೊಂದರೆಯಾಗಿದೆ ಎಂದರು.

ಅಲ್ಲದೇ 10 ಸಾವಿರಕ್ಕೂ ಹೆಚ್ಚು ಕಸಗುಡಿ ಸುವ ನೌಕರರಿದ್ದಾರೆ. ಗ್ರಾಮ ಪಂಚಾ ಯಿತಿಗಳಲ್ಲಿ 5 ಸಾವಿರ ಜನಸಂಖ್ಯೆಗೆ ಒಬ್ಬ ಕಸ ಗುಡಿಸುವವರು ಎನ್ನುವ ಲೆಕ್ಕಾಚಾರವೇ ಅವೈಜ್ಞಾನಿಕವಾಗಿದೆ. ಪುರಸಭೆ, ನಗರ ಸಭೆಗಳಲ್ಲಿ ಇರುವಂತೆ ಹಾಗೂ ಐ.ಪಿ.ಡಿ. ಸಾಲಪ್ಪ ವರದಿಯಂತೆ 700 ಜನಸಂಖ್ಯೆಗೆ ಒಬ್ಬ ಕಸಗುಡಿಸುವವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಕೂಡಲೇ 61 ಸಾವಿರ ಪಂಚಾ ಯಿತಿ ನೌಕರರ ವೇತನಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಪ್ರಕಾಶ್‍ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಖಜಾಂಚಿ ಕೆ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಹೊನ್ನೇ ಗೌಡ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯ ದರ್ಶಿ ಜಿ.ರಾಮಕೃಷ್ಣ ಹಾಜರಿದ್ದರು.

Translate »