ಬೇಲೂರು-ಹಳೇಬೀಡು ಅಭಿವೃದ್ಧಿಗೆ ಆದ್ಯತೆ: ಪ್ರಜ್ವಲ್
ಹಾಸನ

ಬೇಲೂರು-ಹಳೇಬೀಡು ಅಭಿವೃದ್ಧಿಗೆ ಆದ್ಯತೆ: ಪ್ರಜ್ವಲ್

May 28, 2019

ಬೇಲೂರು: ವಿಶ್ವ ಪ್ರಸಿದ್ಧ ಪ್ರವಾಸಿ ಕೇಂದ್ರ ಬೇಲೂರು -ಹಳೇ ಬೀಡು ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿ ಸಲು ಹಾಗೂ ತಾಲೂಕಿಗೆ ಉತ್ತಮ ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.

ಇಲ್ಲಿನ ಶ್ರೀಚನ್ನಕೇಶವ ಸ್ವಾಮಿ ದೇವ ಸ್ಥಾನಕ್ಕೆ ಸಂಸದರಾದ ಬಳಿಕ ಮೊದಲ ಬಾರಿಗೆ ಸೋಮವಾರ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು.

ತಾಲೂಕಿಗೆ ಸಮಗ್ರವಾಗಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶಕ್ಕಾಗಿ ಯೋಜನೆಯೊಂದನ್ನು ತಯಾರು ಮಾಡ ಲಾಗುತ್ತಿದೆ. ವಿಶೇಷವಾಗಿ ರಣಘಟ್ಟ, ಎತ್ತಿನಹೊಳೆ ಮತ್ತು ಯಗಚಿ ಏತ ನೀರಾ ವರಿ ಯೋಜನೆಗಳ ಮೂಲಕ ಶಾಶ್ವತ ನೀರಾವರಿ ಕಲ್ಪಿಸಿಕೊಡಲು ತಾನು ಬದ್ಧ ನಾಗಿದ್ದೇನೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುದಾನಗಳನ್ನು ತರಲು ಪ್ರಯತ್ನ ಪಡುತ್ತೇನೆ ಎಂದರು.

ವಿಶ್ವ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೇಲೂರು ಹಳೇ ಬೀಡುಗಳ ಸಮಗ್ರ ಅಭಿವದ್ಧಿಗೆ ಈಗಾಗಲೇ ಸಚಿವ ಸಾ.ರಾ.ಮಹೇಶ್ ಅವರ ನೇತತ್ವ ದಲ್ಲಿ ನೀಲಿ ನಕ್ಷೆ ತಯಾರಾಗಿ, ಅನುದಾನ ಕೂಡ ಬಿಡುಗಡೆಗೊಂಡಿದೆ. ಈ ನೀಲಿ ನಕ್ಷೆಗಳ ಕಾಮಗಾರಿಗಳಿಗೆ ಸದ್ಯದಲ್ಲಿಯೇ ಶಂಕುಸ್ಥಾಪನೆ ಮಾಡಲಾಗುತ್ತದೆ. ಶ್ರೀಚನ್ನ ಕೇಶವ ಸ್ವಾಮಿ ದೇವಸ್ಥಾನ 900 ವರ್ಷದ ಸಂಭ್ರಮಾಚರಣೆ ಕುರಿತು ಶೀಘ್ರವೇ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ದೇಶದ ಒಂದು ದೊಡ್ಡಶಕ್ತಿ, ನಾಡು ನುಡಿ ಜಲಕ್ಕೆ ಅನ್ಯಾಯವಾಗುವಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸಮರ್ಥವಾಗಿ ನಿಂತು ಮಾತನಾಡುವ ಶಕ್ತಿ ಹೊಂದಿದವರು. ಅನಿ ವಾರ್ಯ ಕಾರಣಗಳಿಂದಾಗಿ ಸೋತಿದ್ದಾರೆ. ಅವರಿಗಾಗಿ ತಾನು ರಾಜೀನಾಮೆ ನೀಡುತ್ತೇನೆಂ ದಾಗ ಧೃÀತಿಗೆಡಬೇಡ ಎಂದು ಧೈರ್ಯ ತುಂಬಿದ್ದಾರೆ. ತಾನು ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಎಸ್. ಲಿಂಗೇಶ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್, ಜೆಡಿಎಸ್ ಪ್ರಮುಖ ರಾದ ಬಿ.ಡಿ.ಚಂದ್ರೇಗೌಡ, ಎಂ.ಎ.ನಾಗರಾಜು, ರವಿಕುಮಾರ್, ಲತಾಮಂಜೇಶ್ವರಿ, ಚೇತನ್ ಕುಮಾರ್ ಮತ್ತಿತರರು ಹಾಜರಿದ್ದರು.

Translate »