ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ ಹಿಂಜರಿಕೆಯಿಂದ ನಷ್ಟ
ಹಾಸನ

ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ ಹಿಂಜರಿಕೆಯಿಂದ ನಷ್ಟ

May 28, 2019

ರಾಮನಾಥಪುರ: ಕೃಷಿ ಯಲ್ಲಿ ವೈಜ್ಞಾನಿಕತೆ ಬಳಸಿಕೊಳ್ಳುವಲ್ಲಿ ಮತ್ತು ತೊಡಗಿಸಿಕೊಳ್ಳುವಿಕೆಯಲ್ಲಿ ರೈತರು ಹಿಂಜ ರಿಯುತ್ತಿರುವುದರಿಂದ ಕೃಷಿಯಿಂದ ಲಾಭ ಗಳಿಸುವಿಕೆಯಲ್ಲಿ ಹಿನ್ನಡೆಗೆ ಕಾರಣ ವಾಗಿದೆ ಎಂದು ತಂಬಾಕು ಮಂಡಳಿಯ ಪ್ರಾಂತೀಯ ಅಧಿಕಾರಿ ಮಂಜು ರಾಜು ಅಭಿಪ್ರಾಯಪಟ್ಟರು.

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ವರ್ಜೀ ನಿಯಾ ತಂಬಾಕಿಗೆ ಪರ್ಯಾಯ ಬೆಳೆ ಕಾರ್ಯಾಗಾರದಲ್ಲಿ ರೈತರನ್ನು ಕುರಿತು ಮಾತನಾಡಿದ ಅವರು, ನಗರೀಕರಣ ದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಚಿಕ್ಕದಾಗುತ್ತಿದ್ದು, ಇರುವ ಭೂಮಿಯಲ್ಲೇ ಹೆಚ್ಚಿನ ಇಳುವರಿ ತೆಗೆದು ಹೆಚ್ಚು ಆದಾಯ ಗಳಿಸುವ ಕ್ರಮಗಳನ್ನು ರೈತರು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ರೈತರು ತಮ್ಮ ಜಮೀನಿಗೆ ಇರುವ ನೀರಿನ ಲಭ್ಯತೆ ಆಧರಿಸಿ ಬೆಳೆಗಳನ್ನು ಬೆಳೆಯುವುದರಿಂದ ನಷ್ಟ ಕಡಿಮೆ ಮಾಡಿಕೊಳ್ಳಬಹುದು. ತಮ್ಮ ಜಮೀನಿನಲ್ಲಿ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿಕೊಂಡು ಮಳೆ ಕೊರತೆಯಿರುವ ಸಂದರ್ಭ ಬೆಳೆಗಳಿಗೆ ಬಳಸುವುದಾದರೆ ಬೆಳೆಗಳಿಗೆ ನೀರಿನ ಕೊರತೆ ನೀಗಿಸಿದಂತಾ ಗುತ್ತದೆ. ಹೊಲಗಳಲ್ಲಿ ಖಾಲಿಯಿರುವ ಬದುಗಳಲ್ಲಿ ಹುಲ್ಲು ಮತ್ತು ಮರಗಳನ್ನು ಬೆಳೆಸುವುದರಿಂದ ಪಶುಗಳಿಗೆ ಮೇವು ದೊರೆತು ಬದುಗಳನ್ನು ಭದ್ರಗೊಳಿಸಿ ದಂತಾಗುತ್ತದೆ. ಬದುಗಳ ಪಕ್ಕದಲ್ಲಿ ಟ್ರಂಚ್ ಮಾಡುವ ವಿಧಾನದಿಂದ ಸಂಗ್ರಹವಾದ ಮಳೆಯ ನೀರು ಅಲ್ಲಿಯೇ ಇಂಗಿ ನಿಮ್ಮ ಅಂತರ್ಜಲ ಹೆಚ್ಚಲು ಸಾಧ್ಯ. ಎರೆಹುಳು ತೊಟ್ಟಿಗಳ ನಿರ್ಮಾಣದ ಮೂಲಕ ಜಮೀ ನಿಗೆ ಹೆಚ್ಚಿನ ಪೆÇೀಷಕಾಂಶ ನೀಡುವ ಗೊಬ್ಬರವನ್ನು ಉತ್ಪಾದಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಿ.ರಾಜೇಶ್ ಮಾತನಾಡಿ, ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಹೆಚ್ಚಿನ ಆದಾಯ ಗಳಿಸುವ ಕ್ರಮಗಳನ್ನು ರೈತರು ಅನುಸರಿಸ ಬೇಕು. ವಾಣಿಜ್ಯ ಬೆಳೆಗಳನ್ನು ಅವಲಂಬಿ ಸಿರುವ ರೈತರು ಪೆÇ್ರೀತ್ಸಾಹಧನ ಸಹಕಾರ ದೊಂದಿಗೆ ಬೆಳೆಯಬಹುದಾದ ತೋಟ ಗಾರಿಕಾ ಬೆಳೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆ ಗಳನ್ನು ಬೆಳೆಯಬೇಕು. ಪೆÇ್ರೀತ್ಸಾಹ ಧನ ವನ್ನಷ್ಟೇ ಕೇಳಿ ಪಡೆಯುವ ರೈತರು ವ್ಯವ ಸಾಯದ ಕ್ರಮಗಳನ್ನು ಕುರಿತು ಮಾಹಿತಿ ಪಡೆಯದಿರುವುದು ವಿಷಾದನೀಯ. ಹೊಗೆಸೊಪ್ಪು ಬೆಳೆಯನ್ನಷ್ಟೇ ಅವಲಂಬಿ ಸದೆ ಬೇಡಿಕೆಯಿರುವ ತೆಂಗು, ಬಾಳೆ, ಮಾವು, ಸೀತಾಫಲ, ಪಪ್ಪಾಯ, ನೇರಳೆ, ಹಲಸು ಮುಂತಾದ ಬೆಳೆಗಳನ್ನು ಹೊಗೆ ಸೊಪ್ಪು ಬೆಳೆಗೆ ಬದಲಾಗಿ ಅವಲಂಬಿಸ ಬೇಕು ಎಂದು ತಿಳಿಸಿದರು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೆ ೀಶಕ ಸೀತಾರಾಮಭಟ್ ಮಾತನಾಡಿ, ಕಡಿಮೆ ಖರ್ಚು, ನೀರು ಮತ್ತು ಶ್ರಮ ದಿಂದ ಹೆಚ್ಚು ಆದಾಯ ಕೊಡುವ ಬೆಳೆ ಗಳಲ್ಲಿ ರೇಷ್ಮೆ ಬೆಳೆಗೆ ಅಗ್ರಸ್ಥಾನವಿದೆ. ರೇಷ್ಮೆ ಕೃಷಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಇಲಾ ಖೆಯು ವಿವಿಧ ಉಚಿತ ತರಬೇತಿಗಳು, ಪ್ರವಾಸಗಳನ್ನು ಹಮ್ಮಿಕೊಳ್ಳುತ್ತಿದೆ. ರೇಷ್ಮೆ ಸಾಕಣೆಯ ಮನೆ ನಿರ್ಮಾಣಕ್ಕೆ ಮತ್ತು ಪರಿಕರಗಳನ್ನು ಕೊಳ್ಳಲು ಸರ್ಕಾರವು ಪೆÇ್ರೀತ್ಸಾಹ ಧನವನ್ನು ನಿರಂತರವಾಗಿ ನೀಡುತ್ತಿದೆ. ತಂಬಾಕಿಗೆ ಪರಾರ್ಯಯ ಬೆಳೆಯಾಗಿ ರೇಷ್ಮೆಯನ್ನು ಬೆಳೆಯುವುದು ಸೂಕ್ತವಾಗಿದೆ ಎಂದರು.

ಪಶುಪಾಲನಾ ಇಲಾಖೆಯ ಸಹಾ ಯಕ ನಿರ್ದೇಶಕ ದಿಲೀಪ್ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ಹಸಿರು ಮೇವನ್ನು ಬೆಳೆಸಿಕೊಳ್ಳುವ ಮೂಲಕ ಹೈನುಗಾರಿಕೆಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಹೈನುಗಾರಿಕೆಯು ವರ್ಷವಿಡೀ ಉದ್ಯೋಗ ಮತ್ತು ಆದಾಯವನ್ನು ನೀಡುತ್ತಿದ್ದು, ರೈತರ ನಿರಂತರ ಆದಾಯದ ಮೂಲವಾಗಿದೆ. ಹಸುಗಳ ಸಾಕಣೆಯ ಜೊತೆಗೆ ಕುರಿ, ಕೋಳಿ, ಹಂದಿ ಸಾಕಣೆಗಳಿಂದಲೂ ರೈತರು ವ್ಯವ ಸಾಯದ ಜೊತೆಗೆ ನಿರಂತರ ಆದಾಯ ಹೊಂದಬಹುದು ಎಂದು ಸಲಹೆ ನೀಡಿದರು.
ರಾಮನಮಾಥಪುರ ತಂಬಾಕು ಹರಾಕು ಮಾರುಕಟ್ಟೆಯ ಅಧೀಕ್ಷ ಕ ಅಮಲ್ ಡಿ ಸಾಮ್ ಮಾತನಾಡಿ, ಪ್ರತಿ ಹೊಗೆಸೊಪ್ಪು ಬೆಳೆಗಾರರಿಗೂ ತಂಬಾಕು ಮಂಡಳಿಯು ಉಚಿತವಾಗಿ 10 ಸಸಿಗಳನ್ನು ಒದಗಿಸು ತ್ತಿದ್ದು, ನೆಟ್ಟು ಬೆಳೆಸಬೇಕು. ಪ್ರತಿಯೊಬ್ಬ ಹೊಗೆಸೊಪ್ಪು ಬ್ಯಾರಲ್ ಲೈಸೆನ್ಸ್ ಹೊಂದಿ ರುವವರು ವಿಮೆ ನವೀಕರಿಸಿಕೊಂಡು ಆಕ ಸ್ಮಿಕವಾಗಿ ಆಗುವ ನಷ್ಟವನ್ನು ವಿಮೆಯಿಂದ ಪಡೆಯಿರಿ. ಹೊಗೆಸೊಪ್ಪು ಲೈಸೆನ್ಸ್ ಹೊಂದಿ ರುವ ಬೆಳೆಗಾರರು ಯಾವುದೇ ಕಾರಣ ದಿಂದಾದರೂ ಸಹ ಹೊಗೆಸೊಪ್ಪನ್ನು ಉತ್ಪಾದಿಸಲು ಆಗದಿದ್ದ ಪಕ್ಷದಲ್ಲಿ ಮಾರು ಕಟ್ಟೆಯ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿ ದಂಡಕಟ್ಟುವುದನ್ನು ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ತಾಲೂಕು ರೈತ ಸಂಘ ಘಟಕದ ಅಧ್ಯಕ್ಷ ಸೀಬಳ್ಳಿ ಯೋಗೇಶ್ ಮಾತನಾಡಿ, ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೆಳೆಗಾರರಿಗೆ ವಿತರಿಸುವ ರಸಗೊಬ್ಬರಕ್ಕೆ ಪ್ರತಿ ಮೂಟೆಗೆ 10 ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವುದು ನಿಲ್ಲಬೇಕು. ಕೆನರಾ ಬ್ಯಾಂಕಿನಲ್ಲಿ ಶೇ.10ರ ಬಡ್ಡಿ ದರದಲ್ಲಿ ಹೊಗೆಸೊಪ್ಪು ಬೆಳೆಸಾಲ ನೀಡುತ್ತಿದ್ದು, ಸಕಾಲಕ್ಕೆ ಪಾವತಿಸಿದಲ್ಲಿ ಶೇ.7ರಂತೆ ಬಡ್ಡಿ ಪರಿಗಣಿಸಬೇಕು ಎಂದು ಸರ್ಕಾರದ ಆದೇಶವಿದ್ದರೂ ಶೇ.10ರಂತೆ ಲೆಕ್ಕ ಹಾಕ ಲಾಗುತ್ತಿದೆ. ರೈತರಿಂದ ಹೆಚ್ಚಾಗಿ ಪಡೆದ ಶೇ.3ರಷ್ಟು ಹಣವನ್ನು ವಾಪಸ್ ಕೊಡಿಸ ಬೇಕು ಎಂದು ತಂಬಾಕು ಮಂಡಳಿಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕಾರ್ಯಾಗಾರದಲ್ಲಿ ರೈತಸಂಘದ ಮಲ್ಲೇಶ್, ಗಂಗೂರು ತುಳಸಿರಾಮೇ ಗೌಡ, ಮರೂರು ದೇವರಾಜು, ನಿಲುವಾ ಗಿಲು ಈರಣ್ಣ, ಮಲ್ಲಾಪುರ ಮಹೇಶ್, ಬನ್ನೂರು ಅಣ್ಣಯ್ಯ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

Translate »