ನಿಷೇಧಗೊಂಡ ಹಳೇ ನೋಟುಗಳ ನೆನಪು
ಮೈಸೂರು

ನಿಷೇಧಗೊಂಡ ಹಳೇ ನೋಟುಗಳ ನೆನಪು

November 9, 2018

ಮೈಸೂರು: ಹಳೇ ನೋಟುಗಳು ನಿಷೇಧವಾಗಿ ಇಂದಿಗೆ ಎರಡು ವರ್ಷಗಳಾಯಿತು. ಅದರ ಅಂಗವಾಗಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ನಗರದ ಅಗ್ರ ಹಾರದ ಮಾಧವರಾವ್ ವೃತ್ತದಲ್ಲಿ ಹಳೇ ನೋಟುಗಳ ಚಿತ್ರವನ್ನಿಟ್ಟು ಅದಕ್ಕೆ ಪುಷ್ಪಾರ್ಚನೆಗೈದು ಸ್ಮರಣೆ ಮಾಡ ಲಾಯಿತು. ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ರಾದ ಕಡಕೊಳ ಜಗದೀಶ್ ಮಾತನಾಡಿ, ಪ್ರಾಚೀನ ಕಾಲ ದಲ್ಲಿ ನಿತ್ಯಬಳಕೆಯ ಆಹಾರ ಧಾನ್ಯಗಳನ್ನು ಪರಸ್ಪರ ಹಂಚಿ ಕೊಳ್ಳುವ ಮೂಲಕ ಪ್ರಾರಂಭವಾಗಿ ಇಂದು ಅಂತಾ ರಾಷ್ಟ್ರೀಯ ಮಟ್ಟದ ವ್ಯವಹಾರಗಳ ಕಾಲಘಟ್ಟದಲ್ಲಿ ನಾವಿದ್ದೇವೆ. ಬೇರೆ ಬೇರೆ ರಾಜ-ಮಹಾರಾಜರುಗಳ ಆಳ್ವಿಕೆಯ ಕಾಲದ ನಾಣ್ಯಗಳು ಇಂದು ವಸ್ತು ಸಂಗ್ರಹಾಲಯಗಳ ಪ್ರದರ್ಶ ನದ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಹಾಗಾಗಿ ನಾಣ್ಯ-ನೋಟುಗಳು ನಿಷೇಧವಾದರೂ ಜನರೊಂದಿಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಕಪ್ಪು ಹಣ, ಕಳ್ಳ ನೋಟು ಗಳ ಹಾವಳಿಯಿಂದ ಮತ್ತು ದೊಡ್ಡ ಮೊತ್ತ ವಿನಿಯೋಗದ ಅನಿವಾರ್ಯತೆಯಿಂದ ನೋಟುಗಳ ರೂಪ ಬದ ಲಾದರೂ ಮೌಲ್ಯ ಇದ್ದೇ ಇರುತ್ತದೆ ಎಂದು ತಿಳಿಸಿದರು.

ನಮ್ಮ ಜೀವನದ ಪ್ರಮುಖ ಘಟ್ಟಗಳಾದ ಮದುವೆ-ಮುಂಜಿ, ಸಾವು-ನೋವುಗಳಲ್ಲಿ ಎಟಿಎಂ ಇಲ್ಲದ ಸಮಯದಲ್ಲಿ ಬ್ಯಾಂಕ್‍ನಲ್ಲಿ ಸರತಿ ನಿಂತು ಪಡೆಯುತ್ತಿದ್ದ 500, 1000 ರೂ.ಗಳ ನೋಟುಗಳನ್ನು ಇಂದು ಭಾವಪೂರ್ಣವಾಗಿ ನೆನೆಯಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ವಿಕ್ರಮ್ ಐಯ್ಯಂಗಾರ್, ಜಯಸಿಂಹ, ಹರೀಶ್ ನಾಯ್ಡು, ಕುಮಾರಗೌಡ, ರಂಗನಾಥ, ಶ್ರೀಕಾಂತ್ ಕಶ್ಯಪ್ ಸೇರಿದಂತೆ ಇತರರು ಹಾಜರಿದ್ದರು.

Translate »