ರೈತರ ಸಾಲ ಮನ್ನಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಹಾಸನ

ರೈತರ ಸಾಲ ಮನ್ನಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

December 11, 2018

ಹಾಸನ: ಜಿಲ್ಲೆಯ ಎಲ್ಲಾ ಸಹ ಕಾರಿ ಮತ್ತು ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಸಾಲದ ತೀರುವಳಿ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣ ಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸಹ ಕಾರ ಇಲಾಖೆ, ಸಹಕಾರಿ ಬ್ಯಾಂಕ್‍ಗಳು ಹಾಗೂ ಲೀಡ್ ಬ್ಯಾಂಕ್ ಮತ್ತು ಇತರ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‍ಗಳ ಅಧಿ ಕಾರಿಗಳೊಂದಿಗೆ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ ಪ್ರಗತಿ ಕುರಿತು ಪರಿ ಶೀಲನಾ ಸಭೆ ನಡೆಸಿದ ಅವರು ಮುಖ್ಯ ಮಂತ್ರಿಯವರ ಮಹಾತ್ವಕಾಂಕ್ಷಿ ಯೋಜನೆ ಇದಾಗಿದ್ದು, ನಿರ್ಲಕ್ಷ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಮಾಡಲಾಗುವುದು ಎಂದರು.

ಸಾಲಮನ್ನಾ ಪ್ರಕ್ರಿಯೆ ಸಂಬಂಧಿಸಿ ದಂತೆ ಡಿ. 7ರ ಒಳಗಾಗಿ ಮಾಹಿತಿ ಸಂಗ್ರ ಹಿಸಿ ವರದಿ ಮಾಡಲು ಕಾಲಮಿತಿ ನೀಡ ಲಾಗಿತ್ತಾದರೂ ಇನ್ನೂ ಕೆಲವು ರಾಷ್ಟ್ರೀಕೃತ ಬ್ಯಾಂಕ್‍ಗಳು ಪೂರ್ಣ ಪ್ರಮಾಣದಲ್ಲಿ ದಾಖಲೆ ಸಲ್ಲಿಸಿಲ್ಲ. ಈ ಪ್ರವೃತ್ತಿ ಸಹಿಸ ಲಾಗದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು.
ಸಹಕಾರ ಸಂಘಗಳು ಕೂಡ ಸಾಲ ಮನ್ನಾ ಪ್ರಕ್ರಿಯೆ ಮುಗಿಸಿ ರೈತರಿಗೆ ಜನ ವರಿ ಮೊದಲ ವಾರದೊಳಗೆ ತೀರುವಳಿ ಪತ್ರ ನೀಡುವಂತಾಗಬೇಕು. ಈಗಾಗಲೇ ನವೆಂಬರ್‍ವರೆಗಿನ ಸಾಲ ಕಂತು ಪೂರ್ಣ ಗೊಂಡಿದ್ದರೂ ಸಂಪೂರ್ಣ ಹಣ ಸಂದಾ ಯದ ಬಗ್ಗೆ ಸಾಲಗಾರರಿಗೆ ಖಾತರಿಪಡಿ ಸಬೇಕು ಎಂದು ಅವರು ಹೇಳಿದರು.
ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಎಲ್ಲೆಲ್ಲಿ ಸಿಬ್ಬಂದಿ ಕೊರತೆ ಇದೆಯೋ ಅಲ್ಲಿಗೆ ವಿಭಾಗೀಯ ಶಾಖೆ ಅಥವಾ ಈಗಾ ಗಲೇ ಪ್ರಕ್ರಿಯೆ ಮುಗಿದಿರುವ ಇತರ ಕಡೆ ಗಳಿಂದ ನಿಯೋಜನೆ ಮಾಡಿ ತಕ್ಷಣವೇ ಸಂಪೂರ್ಣ ನಿಖರ ದಾಖಲೆಗಳೊಂದಿಗೆ ವರದಿ ಮಾಡಬೇಕು ಎಂದು ಜಿಲ್ಲಾಧಿ ಕಾರಿ ಸೂಚನೆ ನೀಡಿದರು.
ಸಹಕಾರಿ ಸಂಘಗಳ ಉಪನಿಬಂಧಕರು, ಸಹಾಯಕ ನಿಬಂಧಕರು ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹೆಚ್ಚಿನ ಜವಾ ಬ್ದಾರಿ ವಹಿಸಿ ನಿರಂತರವಾಗಿ ಮೇಲ್ವಿ ಚಾರಣೆ ನಡೆಸಬೇಕು ಎಂದು ರೋಹಿಣಿ ಸಿಂಧೂರಿ ತಿಳಿಸಿದರು. ಈಗಾಗಲೇ ಅನೇಕ ಜಿಲ್ಲೆಗಳು ಶೇ 100 ರಷ್ಟು ಗುರಿ ಸಾಧನೆ ಮಾಡಿದೆ ಹಾಸನದಲ್ಲಿಯೂ ಇದು ಬೇಗನೆ ಸಾಧ್ಯವಾಗಬೇಕು ಎಂದು ಅವರು ಹೇಳಿದರು.

ಸಹಕಾರ ಸಂಘಗಳ ಉಪ ನಿಬಂಧಕ ರಾದ ನಂಜುಡೇಗೌಡ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಮಂಜು ನಾಥ್ ಅವರು ಈ ವರಗಿನ ಪ್ರಗತಿಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಅಪರ ಜಿಲ್ಲಾಧಿ ಕಾರಿ ವೈಶಾಲಿ ಮತ್ತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಸಭೆಯಲ್ಲಿ ಹಾಜರಿದ್ದರು.

Translate »