ವಿವಿಧ ಸಂಘಟನೆಯಿಂದ ಪ್ರತಿಭಟನೆ
ಹಾಸನ

ವಿವಿಧ ಸಂಘಟನೆಯಿಂದ ಪ್ರತಿಭಟನೆ

July 27, 2018

ಹಾಸನ:  ಬಿಹಾರದ ಪುನರ್ ವಸತಿ ಬಾಲಕಿಯರ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ನಗರದಲ್ಲಿ ಗುರುವಾರ ಸೇವಾ ಸಂಗಮ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಸ್ಪಂದನ ಸಿರಿ ವೇದಿಕೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಪ್ರತಿಭಟನೆ ನಡೆಯಿತು.

ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಮೆರವಣಿಗೆ ಆರಂಭಿಸಿದ ಪ್ರತಿ ಭಟನಾಕಾರರು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಘೋಷಣೆ ಕೂಗಿದರು.

ಬಿಹಾರ ಸೇವಾ ಸಂಕಲ್ಪ ವಿಕಾಸ ಸಮಿತಿಯಲ್ಲಿ ಎನ್.ಜಿ.ಒ. ಎಂಬ ಸಂಸ್ಥೆ ಸರ್ಕಾರದ ಅನುದಾನದ ಮುಜಪ್ಫರ್ ಪುರದಲ್ಲಿ ನಡೆಸಲಾಗುತ್ತಿದ್ದ ಬಾಲಿಕಾ ಗೃಹದಲ್ಲಿ ಆಶ್ರಯ ಪಡೆಯಲಾಗಿದ್ದ ಬಾಲಕಿ ಯರ ಮೇಲೆ ವ್ಯವಸ್ಥಿತವಾಗಿ ಲೈಂಗಿಕ ಶೋಷಣೆ, ಅತ್ಯಾಚಾರವನ್ನು ಎಸಗುವುದ ರೊಂದಿಗೆ ಘೋರ ಅಪರಾಧ ಮಾಡ ಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೌರ್ಜನ್ಯ ಎಸಗಿದವರ ಮೇಲೆ ಕ್ರಮವನ್ನು ಕೈಗೊಂಡು ಶಿಕ್ಷೆ ವಿಧಿಸಬೇಕು. ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಪಂದನ ಸಿರಿ ವೇದಿಕೆ ಅಧ್ಯಕ್ಷೆ ಜಿ.ಎಸ್. ಕಲಾವತಿ ಮಧು ಸೂದನ್, ನವೀನ್ ಪಾಲ್ಗೊಂಡಿದ್ದರು.

Translate »