ಪೂರ್ವಭಾವಿ ಸಭೆಯಲ್ಲಿ ಅಸಮಾಧಾನ, ಭಿನ್ನಮತ
ಹಾಸನ

ಪೂರ್ವಭಾವಿ ಸಭೆಯಲ್ಲಿ ಅಸಮಾಧಾನ, ಭಿನ್ನಮತ

August 11, 2018

ಬೇಲೂರು:  ವಿವಿಧ ಮಹನೀ ಯರ ಜಯಂತಿ ಹಿನ್ನೆಲೆ ತಹಶೀಲ್ದಾರ್ ಕೆ.ರಾಜು ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅಧಿಕಾರಿಗಳ ಗೈರು ಸಭಿಕರನ್ನು ಅಸಮಾ ಧಾನಕ್ಕೊಳ ಗಾಗುವಂತೆ ಮಾಡಿದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸುವ ಕುರಿತು ವಿಶ್ವಕರ್ಮ ಸಮುದಾಯದವ ರಲ್ಲೇ ಭಿನ್ನಮತ ವ್ಯಕ್ತವಾಯಿತು.

ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಕೆ.ರಾಜು, ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿ ಗಳು ಹಾಗೂ ಸಂಘ ಸಂಸ್ಥೆ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸಿದ್ದೇವೆ. ಆದರೆ ಕೆಲ ಇಲಾ ಖಾಧಿಕಾರಿಗಳು ಗೈರಾಗಿದ್ದಾರೆ. ಇದು ಅವರಿಗೆ ಮಹನೀಯರ ಜಯಂತಿ ಬಗ್ಗೆ ಇರುವ ನಿರಾಸಕ್ತಿ ತೋರಿಸುತ್ತದೆ. ಗೈರಾದ ವರಿಗೆ ನೋಟೀಸ್ ನೀಡಿ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ತಮ್ಮಣ್ಣೇಗೌಡ, ನಾನು ಅಧ್ಯಕ್ಷನಾಗಿ ದ್ದಾಗಲೂ ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರೆದಿದೆ. ಇಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸ ಬೇಕು ಎಂದರು. ವೀರಕನ್ನಡಿಗ ಟಿಪ್ಪುಸೇನೆ ಅಧ್ಯಕ್ಷ ನೂರ್‍ ಅಹ್ಮದ್ ಮಾತನಾಡಿ, ತಾಲೂಕಿನ ದಂಡಾಧಿಕಾರಿಗಳ ಸೂಚನೆ ಯನ್ನೇ ಧಿಕ್ಕರಿಸುವ ಇಂತಹ ಅಧಿಕಾರಿ ಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಹೇಗೆ ಮಾಡಬಲ್ಲರು ಎಂಬುದನ್ನು ನೀವೇ ಗಮನಿಸಿ?. ಇಂತಹವರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಗೊಂದಲ: ಮಹನೀಯರ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಪಟ್ಟ ಸಮು ದಾಯದ ಪ್ರಮುಖರ ಹೆಸರನ್ನು ಅಚ್ಚು ಹಾಕಿಸುವ ವಿಷಯ ಪ್ರಸ್ತಾಪವಾಯಿತು. ಈ ವೇಳೆ ವಿಶ್ವಕರ್ಮ ಸಮುದಾಯದಲ್ಲಿ ಯಾರ ಹೆಸರು ಮುದ್ರಿಸಬೇಕೆಂಬ ಬಗ್ಗೆ ಗೊಂದಲು ಏರ್ಪಟ್ಟಿತು. ವಿಶ್ವಕರ್ಮ ಮಹಾ ಸಭಾದ ತಾಲೂಕು ಅಧ್ಯಕ್ಷ ಯೋಗಾಚಾರಿ ಹಾಗೂ ವಿಶ್ವಕರ್ಮ ಜನಾಂಗದ ತಾಲೂಕು ಅಧ್ಯಕ್ಷ ಪುರುಷೋತ್ತಮ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಇಬ್ಬರ ಅಭಿಪ್ರಾಯ ಆಲಿಸಿದ ತಹಶೀಲ್ದಾರ್ ಕೆ.ರಾಜು, ವಿಶ್ವಕರ್ಮ ಸಮುದಾಯದಲ್ಲಿ ಗೊಂದಲ ಇರುವುದರಿಂದ ಆಹ್ವಾನ ಪತ್ರಿಕೆ ಯಲ್ಲಿ ವಿಶ್ವಕರ್ಮ ಸಮುದಾಯದವರು ಎಂದು ಮುದ್ರಿಸಲಾಗುವುದು ಎಂದು ವಾಗ್ವಾದಕ್ಕೆ ತೆರೆ ಎಳೆದರು. ಜಯಂತಿಯಂದು ಸಂಬಂಧಪಟ್ಟ ಸಮುದಾಯದವರು ಆಗ ಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನೇತಾರ ಡಿ.ದೇವ ರಾಜ ಅರಸು ಜಯಂತಿಯನ್ನು ಆ.20 ರಂದು, ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆ.27, ಶ್ರೀಕೃಷ್ಣ ಜನ್ಮಾಷ್ಠಮಿ ಸೆ.2 ಹಾಗೂ ವಿಶ್ವಕರ್ಮ ಜಯಂತಿ ಸೆ.17 ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ತಾಪಂ ಸದಸ್ಯ ಮಂಜುನಾಥ್, ಶಶಿ ಕುಮಾರ್, ಪುರಸಭಾ ಸದಸ್ಯ ಶಾಂತಕುಮಾರ್, ಕೃಷ್ಣ ಜನ್ಮಾಷ್ಠಮಿ ಆಚರಣೆ ಸಮಿತಿ ಅಧ್ಯಕ್ಷ ರಮೇಶ್, ಮಂಜುನಾಥ್ ಇತರರು ಸಭೆಯಲ್ಲಿದ್ದರು.

Translate »