ಮೈಸೂರು, ಸೆ.12(ಆರ್‍ಕೆ)- ಭ್ರಷ್ಟಾಚಾರದ ವಿರುದ್ಧ ಸಮಾಜ ಎಚ್ಚೆತ್ತು, ಭ್ರಷ್ಟಾಚಾರಿಗಳ ಬಹಿಷ್ಕರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇ ಮಠ್ ಅವರು ಇಂದಿಲ್ಲಿ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಇಂದು ನಡೆದ ಮೂಲ ಆದಿವಾಸಿಗಳ ಹಕ್ಕು ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಭ್ರಷ್ಟಾಚಾರದ ಪ್ರತಿರೂಪ ಎಂದು ಹೇಳಿದರು.
ಅಂತಹವರ ವಿರುದ್ಧ ಸಮಾಜ ಎಚ್ಚೆತ್ತು, ಅವರನ್ನು ಬಹಿಷ್ಕರಿಸಬೇಕೇ ಹೊರತು, ಪರವಾಗಿ ಪ್ರತಿಭಟನೆ ಮಾಡು ವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಕೆಫೆ ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ ಅವರ ಬಗ್ಗೆ ಬೇರೆ ಭಾವನೆ ಇತ್ತು. ಆದರೆ ಹಿಂದಿನ ಸತ್ಯಾಂಶವೇ ಬೇರೆಯಾಗಿದೆ. ಭ್ರಷ್ಟಾಚಾರಿಗಳು ಯಾರೇ ಇರಲಿ, ಕಾನೂನು ಮೂಲಕ ಶಿಕ್ಷೆಯಾಗಬೇಕು ಎಂದೂ ಹಿರೇಮಠ್ ತಿಳಿಸಿದರು.