ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೇವಲ ಚುನಾವಣಾ ಗಿಮಿಕ್
ಹಾಸನ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೇವಲ ಚುನಾವಣಾ ಗಿಮಿಕ್

February 26, 2019

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಕೆ.ಸುರೇಶ್
ಬೇಲೂರು: ಬಜೆಟ್‍ನಲ್ಲಿ ರಣ ಘಟ್ಟ ಯೋಜನೆಗೆ 100 ಕೋಟಿ ಹೊರತು ಪಡಿಸಿದರೆ ಇನ್ನುಳಿದ 400 ಕೋಟಿ ರೂ.ಗಳ ಕಾಮಗಾರಿಗಳು ಯಾವುದು ಎಂದು ಶಾಸಕರು ಸ್ಪಷ್ಟನೆ ನೀಡದೆ, ಮುಖ್ಯಮಂತ್ರಿ ಗಳನ್ನು ಕರೆಸಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿಸುತ್ತಿರುವುದು ಮುಂದಿನ ಲೋಕಸಭಾ ಚುನಾವಣೆಯ ಗಿಮಿಕ್ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಕೆ.ಸುರೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರು ತಾಲೂಕಿನ ಹಳೇಬೀಡಿ ನಲ್ಲಿ 500 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸ್ವಾಗತಾರ್ಹ ವಾಗಿದೆ. ಆದರೆ ಶಾಸಕ ಲಿಂಗೇಶ್‍ರವರು ಮೊನ್ನೆಯ ಸುದ್ದಿಗೋಷ್ಠಿಯಲ್ಲಿ ಯಗಚಿ ಉದ್ಯಾನವನಕ್ಕೆ 200 ಕೋಟಿ, ರಸ್ತೆ ಕಾಮ ಗಾರಿಗೆ 150 ಕೋಟಿ, ಪ್ರವಾಸೋದ್ಯಮ ಅಭಿವೃದ್ಧಿಗೆಂದು ಹಣದ ಪ್ರಸ್ತಾಪ ಮಾಡಿ ದ್ದಾರೆ. ಆದರೆ ಇದನ್ನು ಬಜೆಟ್‍ನಲ್ಲಿ ಏಕೆ ಸೇರಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಬೇಲೂರು-ಹಳೇಬೀಡು ಅಭಿವೃದ್ಧಿಗೆ 24 ಕೋಟಿ ಎಂದು ಹೇಳಿ, ಕೇವಲ 4 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದು ಎಷ್ಟು ಸರಿ. ಬೇಲೂರು ಚನ್ನಕೇಶವಸ್ವಾಮಿ ದೇಗುಲಕ್ಕೆ 900 ವರ್ಷಾರಣೆ, ಹೊಯ್ಸಳ ಮಹೋತ್ಸವ, ಬೇಲೂರು ಪುರಸಭೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಹಣ ಬಿಡುಗಡೆ ಮಾಡದಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಬೇಲೂರು ತಾಲೂಕಿನ ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುವುದಕ್ಕೆ ಬಿಜೆಪಿ ಮಹತ್ತರವಾದ ಕೊಡುಗೆ ನೀಡಿದೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಮಾಡಿದ ಪಾದಯಾತ್ರೆ ರಣಘಟ್ಟ ಯೋಜನೆಗೆ ಮುನ್ನುಡಿ ಬರೆದಿದೆ. ತಾಲೂಕಿನಲ್ಲಿ 45ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿ ಸುತ್ತಿದ್ದಾರೆ. ಆದರೆ ಶಾಸಕರು ಹಾಗೂ ಅಧಿ ಕಾರಿಗಳು ಮಾತ್ರ ಬಹುಗ್ರಾಮ ಯೋಜನೆ ಯಲ್ಲಿ ನೀರು ಕೊಡುತ್ತೇವೆ ಎಂದು ಹೇಳು ತ್ತಿದ್ದಾರೆ ವಿನಃ ಇನ್ನೂ ಕ್ರಮ ಕೈಗೊಂಡಿಲ್ಲ. ತಕ್ಷಣ ನೀರು ಕೊಡುವುದಕ್ಕೆ ಮುಂದಾಗ ಬೇಕು, ಇಲ್ಲದಿದ್ದಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಚಾಲಕ ರೇಣೂಕುಮಾರ್, ತಾಪಂ ಸದಸ್ಯ ಶಶಿಕುಮಾರ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾಗಣೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಲೋಕೇಶ್, ಮುಖಂಡ ಅರುಣ್‍ಕುಮಾರ್ ಇದ್ದರು.

Translate »