ಜೈನ ಮಹಿಳೆಯರ ಸಾಧನೆ ಶಾಸನಗಳಿಂದ ಸಾಬೀತಾಗಿದೆ
ಹಾಸನ

ಜೈನ ಮಹಿಳೆಯರ ಸಾಧನೆ ಶಾಸನಗಳಿಂದ ಸಾಬೀತಾಗಿದೆ

February 26, 2019

ಸಾಹಿತಿ, ನಾಡೋಜ ಡಾ.ಕಮಲಾ ಹಂಪನಾ
ಶ್ರವಣಬೆಳಗೊಳ: ಮೃದು ಮಾತು, ಸರಳ ವ್ಯಕ್ತಿತ್ವ ಆರ್ಯಿಕಾಶ್ರೀ ವಿಶಾಶ್ರೀ ಮಾತಾಜಿಯವರನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಖ್ಯಾತ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ಹೇಳಿದರು.

ಆರ್ಯಿಕಾ ಶ್ರೀ ವಿಶಾಶ್ರೀ ಮಾತಾಜಿ ಯವರ 25ನೇ ದೀಕ್ಷಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಜರು ಗಿದ ಮಹಿಳಾ ವಿದ್ವತ್ ಸಂಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿ, ವಿದ್ವತ್ಪೂರ್ಣ ಪ್ರವಚನಗಳಿಂದ ಸಾವಿ ರಾರು ಭಕ್ತರನ್ನು ಹೊಂದಿದ್ದಾರೆ ಎಂದರು.

ಕಳೆದ 3 ದಿನಗಳಿಂದ ನಡೆದ ವಿವಿಧ ಗೋಷ್ಠಿಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆ ಯರು ನೀಡಿರುವ ಕೊಡುಗೆಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ. ಜೈನ ಮಹಿಳೆಯರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂಬುದು ಬರೀ ನುಡಿ ಯಲ್ಲ, ಅದು ಶಾಸನಗಳಿಂದ ಸಾಬೀತಾ ಗಿದೆ ಎಂದÀು ತಿಳಿಸಿದರು.

ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಪದ್ಮಿನಿ ನಾಗ ರಾಜು ಮಾತನಾಡಿ, ಕೈಗಾರಿಕೆಗಳ ಹಾಗೂ ಆಧುನಿಕ ಕಾಲಘಟ್ಟದಲ್ಲಿ 14 ವರ್ಷಗಳ ಕಾಲ ಪ್ರಾಧ್ಯಾಪಕಿ ಆಗಿ ಉನ್ನತ ಹುದ್ದೆಯ ಲ್ಲಿದ್ದರೂ ಸಹ ಮೋಕ್ಷ ಮಾರ್ಗಕ್ಕೆ ಅವರು ಮಾಡಿರುವ ಸಾಧನೆ ಊಹೆಗೆ ನಿಲುಕದ್ದು, ಇಂದಿನ ಆಧುನಿಕ ಯುಗದಲ್ಲಿಯೂ ಇದೆಲ್ಲವೂ ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಕಠಿಣ ವ್ರತ ಮಾಡಲು ಧಾರ್ಮಿಕ ಮನೋ ಶಕ್ತಿಯಿಂದ ಮಾತ್ರ ಸಾಧ್ಯ, ಧಾರ್ಮಿಕ ಮನೋಭಾವದ ಹೊರತು ಇವೆಲ್ಲವೂ ಅಸಾಧ್ಯ. ಹೆಣ್ಣು, ಹೊನ್ನು, ಮಣ್ಣು ಇವಾವು ಮಾಯೆಯಲ್ಲ. ಆಸೆಯೇ ಮಾಯೆ. ಅವೆ ಲ್ಲವನ್ನೂ ತೊರೆದು ದೇವರ ಕಡೆಗೆ ಮನ ಸ್ಸನ್ನು ನೆಟ್ಟು ಸಾಧನೆ ಮಾಡುವುದು ಅಪ ರೂಪದ ವ್ಯಕ್ತಿತ್ವ ಹೊಂದಿದವರಿಂದ ಮಾತ್ರ ಸಾಧ್ಯ. ಹಸಿವು ಮತ್ತು ಕಾಮನೆಗಳನ್ನು ತೊರೆದು, ಸಹನೆ ಮತ್ತು ಸತ್ಯವನ್ನು ಪಡೆದುಕೊಳ್ಳು ವುದರ ಮೂಲಕ ಸಮಾಜವನ್ನು ಧರ್ಮದ ಕಡೆಗೆ ಕೊಂಡೊಯ್ಯು ತ್ತಿರುವ ಅವರ ಧೈರ್ಯವನ್ನು ಮೆಚ್ಚಬೇಕು ಎಂದರು.

ಜೈನ ಸಮಾಜದ ಎಲ್ಲರೂ ಉತ್ತಮ ಜೀವನ ನಡೆಸುತ್ತಿಲ್ಲ. ಮುನಿಗಳು, ಗಣನಿ ಮಾತಾಜಿಯವರು ಹಾಗೂ ಸ್ವಾಮೀಜಿ ಗಳು ಇದರ ಕಡೆ ಗಮನ ಹರಿಸಿ ಅವರಿಗೆ ಹೊಸ ಜೀವನ ಕಲ್ಪಿಸಿಕೊಂಡು ಉತ್ತಮ ಜೀವನ ನಡೆಸಲು ಸಹಾಯ ಮಾಡ ಬೇಕು ಎಂದು ಕೋರಿದರು.

ನಂತರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗಾಗಿ ನಾಡೋಜ ಡಾ.ಕಮಲಾ ಹಂಪನಾ ಅವರಿಗೆ ಶ್ರೀಕ್ಷೇತ್ರದ ವತಿಯಿಂದ ‘ಸ್ತ್ರೀಶಕ್ತಿ ನವಚೈತನ್ಯ ಚಿಂತಾಮಣಿ’ ಬಿರುದು ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾ ಯಿತು. ಉಪಾಧ್ಯಾಯ 108 ಊರ್ಜಯಂತ ಸಾಗರ ಮಹಾರಾಜರು, ಗಣನಿ ಶಿವಮತಿ ಮಾತಾಜಿ, ಗಣನಿ ಆರ್ಯಿಕಾ ವಿಶಾಶ್ರೀ ಮಾತಾಜಿ, ಗಣನಿ ಸುಯೋಗಮತಿ ಮಾತಾಜಿ ಮತ್ತು ಸಂಘಸ್ಥ ತ್ಯಾಗಿಗಳು, ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ಬಾಲಬ್ರಹ್ಮ ಚಾರಿಣಿ ವಿಮಲಾತಾಯಿ ಶಾಸ್ತ್ರಿ ಮೂರಾ ಬಟ್ಟೆ, ಪದ್ಮಾವತಿ ಖೇಮಲಾಪುರೆ, ಶೀಲಾ ಅನಂತರಾಜು, ಪದ್ಮಿನಿ ಪದ್ಮರಾಜು, ಬ್ರಹ್ಮ ಚಾರಿಣಿ ಜಲಜಾ ಜೈನ್, ಮಹಿಳಾ ವಿದ್ವಾಂಸರು ಇತರರಿದ್ದರು.

Translate »