ಇಂದು ರಾಮನಾಥಪುರಕ್ಕೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ
ಹಾಸನ

February 26, 2019

1,335 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ
ರಾಮನಾಥಪುರ: ಇಲ್ಲಿಯ ಪಟ್ಟಾಭಿರಾಮ ಪ್ರೌಢಶಾಲೆಯ ಆವರಣ ದಲ್ಲಿ ಫೆ.26ರಂದು ಬೆಳಿಗ್ಗೆ 10.35 ಗಂಟೆಗೆ 1,335 ಕೋಟಿ ರೂ. ವೆಚ್ಚದ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲು ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸೇರಿ ದಂತೆ ಮಂತ್ರಿ ಮಹೋದಯರು ಸಮಾ ರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ರಾಮನಾಥಪುರದ ಬಸವೇಶ್ವರ ವೃತ್ತ ದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳು ಗಳಲ್ಲಿ ಇಷ್ಟು ದೊಡ್ಡ ಮೊತ್ತದ ಕಾಮಗಾರಿ ಗಳಿಗೆ ಮಂಜೂರಾತಿ ನೀಡುವ ಮೂಲಕ ತಾಲೂಕಿನ ಜನತೆಯ ಬಹು ಅಪೇಕ್ಷಿತ ಬೇಡಿಕೆಯಾಗಿದ್ದ ರಾಮನಾಥಪುರ-ಕೊಣನೂರು ಮಾರ್ಗದ ರಸ್ತೆಗೆ 145 ಕೋಟಿ ವೆಚ್ಚದ 34 ಕಿ.ಮೀ. ಹಾದು ಹೋಗಿ ರುವ ಮಾಗಡಿ ಹುಲಿಯೂರು ದುರ್ಗ-ನಾಗಮಂಗಲ- ಕೆ.ಅರ್.ಪೇಟೆ-ರಾಮ ನಾಥಪುರ-ಸೋಮವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ರಾಮನಾಥಪುರದಲ್ಲಿ ನಡೆಯಲಿದೆ.

ಕ್ಷೇತ್ರದ 200 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 190 ಕೋಟಿ ರೂ. ವೆಚ್ಚದ ಕಟ್ಟೇಪುರ ಏತ ನೀರಾವರಿ ಯೋಜನೆಗೆ 380 ಕೋಟಿ, ಹೇಮಾವತಿ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ 302 ಕೋಟಿ, ಇದೇ ನಾಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿ 116 ಕೋಟಿ ರೂ. ವೆಚ್ಚದ ಹಾರಂಗಿ ನಾಲಾ ಅಭಿವೃದ್ಧಿ ಕಾಮ ಗಾರಿ, 76 ಕೋಟಿ ರೂ. ವೆಚ್ಚದ ಲೋಕೋ ಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿ, 19 ಕೋಟಿ ವೆಚ್ಚದ ಕಣಿಯಾರು ವಿದ್ಯುತ್ ಕೇಂದ್ರ, 75 ಕೋಟಿ ವೆಚ್ಚದ ಪಶು ಆಹಾರ ಘಟಕ, 2 ಕೋಟಿ ರೂ ವೆಚ್ಚದ ಪಾಲಿಕ್ಲಿನಿಕ್, ರಾಮನಾಥಪುರ ರೇಷ್ಮೆ ತರಬೇತಿ ಸಂಸ್ಥೆ ಕಟ್ಟಡ ಶಂಕುಸ್ಥಾಪನೆ ಆಗಲಿದೆ ಎಂದು ಶಾಸಕ ರಾಮಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಮಗ್ಗೆ ರಂಗಸ್ವಾಮಿ, ಸಾಧಿಕ್‍ಸಾಬ್, ಬಿ.ಅರ್.ನಾರಾಯಣಸ್ವಾಮಿ, ಎಂ.ಎಚ್. ಕೃಷ್ಣಮೂರ್ತಿ, ಮಂಜುನಾಥ್, ಉಪ್ಪಾರಿಕೇ ಗೌಡ ಮುಂತಾದವರಿದ್ದರು.

Translate »