ದಕ್ಷತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ
ಹಾಸನ

ದಕ್ಷತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ

March 31, 2019

ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚನೆ
ಹಾಸನ: ಲೋಕಸಭಾ ಚುನಾ ವಣೆಯಲ್ಲಿಯೂ ಪ್ರತಿಯೊಂದು ತಂಡವೂ ದಕ್ಷತೆ ಹಾಗೂ ಜಾಗ್ರತೆಯಿಂದ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸುವವರು ಕ್ರಮ ಎದುರಿಸಲು ಸಿದ್ಧರಿರಬೇಕು ಎಂದು ನೂತನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮುಖ್ಯ ಚುನಾವಣಾ ಆಯು ಕ್ತರ ಸಭೆಯ ನಂತರ ಅಧಿಕಾರಿಗಳ ಸಭೆ ನಡೆಸಿದ ಅವರು, ಈವರೆಗಿನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಚುನಾವಣಾ ಆಯೋಗ ನಿರ್ದೇಶನಗಳನ್ನು ನೀಡಿದೆ. ಹಾಗಾಗಿ, ಇನ್ನಷ್ಟು ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸಬೇಕು ಎಂದರು.

ಬ್ಯಾಂಕ್‍ಗಳಲ್ಲಿ 1 ಲಕ್ಷದಿಂದ 10 ಲಕ್ಷದ ವರೆಗಿನ ಹಣ ವರ್ಗಾವಣೆ ಬಗ್ಗೆ ಗಮನ ಹರಿಸಲು ಮತ್ತು ವರದಿ ಮಾಡಲು ಸಾಮಾ ಜಿಕ ಜಾಲತಾಣಗಳ ಪರಿಶೀಲನೆಗೂ ಪ್ರತ್ಯೇಕ ತಂಡಗಳ ರಚನೆ ಮಾಡಲಾಗು ವುದು ಎಂದು ಹೇಳಿದರು.

ಅಬಕಾರಿ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಶೀಲನೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡುವ ಬಾರ್, ವೈನ್‍ಶಾಪ್‍ಗಳ ಪರವಾನಗಿ ಅಮಾನತು ಗೊಳಿಸಬೇಕು. ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಸಾಗಾಟಕ್ಕೆ ಆಸ್ಪದ ನೀಡ ಬಾರದು ಈ ಬಗ್ಗೆ ಅಬಕಾರಿ ಅಧಿಕಾರಿ ಗಳು ವಿಶೇಷ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸರ್ವೇ ಲೆನ್ಸ್ ತಂಡಗಳ ತಾಲೂಕುವಾರು ವಾಟ್ಸಾಪ್ ಗ್ರೂಪ್ ಮಾಡಿ ಅದರ ಮೂಲಕ ನೀತಿ ಸಂಹಿತೆ ಜಾರಿ ಕ್ರಮಗಳ ಮೇಲೆ ನಿಗಾವಹಿಸಬೇಕು. ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಪಾಟಿಂಗ್ ತಂಡಗಳು ತಮ್ಮ ಗಸ್ತನ್ನು ಹೆಚ್ಚಿಸಬೇಕು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಸಿ.ವಿಜಿಲ್ ಆ್ಯಪ್ ಬಳಕೆ ಬಗ್ಗೆ ಸಾರ್ವ ಜನಿಕರಿಗೆ ಇನ್ನಪ್ಟು ಅರಿವು ಮೂಡಿಸ ಬೇಕು. ಅದನ್ನು ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಭಾಷಾಂತರಿಸಿ ಸಾರ್ವ ಜನಿಕರಿಗೆ ಜಾಗೃತಿ ಮೂಡಿಸಬೇಕು. ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾವಹಿಸ ಬೇಕು. ಒಟ್ಟಾರೆ ಆಯಾಯಾ ತಂಡಗಳು ಅಧಿಕಾರಿಗಳು ತಮಗೆ ವಹಿಸಿರುವ ಜವಾ ಬ್ದಾರಿಗಳನ್ನು ಅರಿತು ಅದನ್ನು ದಕ್ಷತೆ ಯಿಂದ ಅನುಷ್ಠಾನಕ್ಕೆ ತರಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಎ.ಎನ್ ಪ್ರಕಾಶ್‍ಗೌಡ, ಸಹಾ ಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Translate »