ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ
ಹಾಸನ

ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ

March 31, 2019

ರಾಮನಾಥಪುರ: ಪುರಾಣ ಪ್ರಸಿದ್ಧ ಚಿಕ್ಕಬೊಮ್ಮನಹಳ್ಳಿ ಆದಿಚುಂಚನ ಗಿರಿ ಮಠದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮಹಾರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನೆರವೇರಿತು.

ರಥೋತ್ಸವದಲ್ಲಿ ಸುತ್ತಮುತ್ತಲ ಹತ್ತಾರು ಗ್ರಾಮದ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ ಯಿಂದಲೇ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸಂಜೆ ದೇವರ ಉತ್ಸವ ಮೂರ್ತಿಯನ್ನು ಹೊರ ತಂದು ದೇಗಲ ಸುತ್ತ ಪ್ರದಕ್ಷಿಣೆ ಹಾಕಿಸಿ ರಥಾರೋಹಣ ಮಾಡಲಾ ಯಿತು. ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಅವರು, ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಜಯ ಘೋಷಗಳೊಂದಿಗೆ ತೇರು ಎಳೆದರು.

ಮೇಳಿಯಮ್ಮ ಗುಡಿವರೆಗೆ ಸಾಗಿದ ತೇರು ಸ್ವಸ್ಥಾನಕ್ಕೆ ವಾಪಾಸ್ಸಾಯಿತು. ರಥ ಮುಂದೆ ಚಲಿಸುವಾಗ ಭಕ್ತರು ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವ ಕಣ್ತುಂಬಿ ಕೊಳ್ಳಲು ಮತ್ತು ಹರಕೆ ತೀರಿಸಲು ಸಾವಿರಾರು ಭಕ್ತರು ಕಾದು ಕುಳಿತಿದ್ದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು.

ಮೆರವಣಿಗೆ: ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಅವರನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.

Translate »