ಚುನಾವಣಾ ವೀಕ್ಷಕರಿಂದ ಮತ ಎಣಿಕೆ ಕೇಂದ್ರಕ್ಕೆ ಭೇಟಿ, ಪರಿಶೀಲನೆ
ಹಾಸನ

ಚುನಾವಣಾ ವೀಕ್ಷಕರಿಂದ ಮತ ಎಣಿಕೆ ಕೇಂದ್ರಕ್ಕೆ ಭೇಟಿ, ಪರಿಶೀಲನೆ

March 31, 2019

ಹಾಸನ, ಮಾ.30- ಚುನಾವಣಾ ವೀಕ್ಷಕ ರಾದ ಶಶಿಭೂಷಣ್ ಕುಮಾರ್ ಮತ್ತು ಮಂಜಿತ್ ಸಿಂಗ್ ಬ್ರಾರ್ ಅವರು ಗುರು ವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರವಾಗಿರುವ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾ ವಣಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ. ಎಲ್.ವೈಶಾಲಿ ಅವರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ವೀಕ್ಷಕರು ಭದ್ರತಾ ಕೊಠಡಿಗಳು ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಗೆ ಗುರುತಿಸಲಾಗಿರುವ ಕೊಠಡಿ ಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ಅಕ್ರಂಪಾಷ ಮತ ಎಣಿಕೆಗೆ ಮಾಡಿಕೊಂಡಿರುವ ಪ್ರಾಥಮಿಕ ಹಂತದ ಸಿದ್ಧತೆಗಳು, ಸಿಬ್ಬಂದಿ ನಿಯೋಜನೆ, ಪಾರ್ಕಿಂಗ್ ವ್ಯವಸ್ಥೆ, ಇವಿಎಂ, ವಿ.ವಿ.ಪ್ಯಾಟ್‍ಗಳ ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

Translate »