ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಪ್ರೊ.ಕೃಷ್ಣೇಗೌಡ
ಹಾಸನ

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಪ್ರೊ.ಕೃಷ್ಣೇಗೌಡ

March 31, 2019

ಅರಸೀಕೆರೆ: ಬಾಲ್ಯಾವಸ್ಥೆಯಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಕಡೆ ಹೆಚ್ಚಿನ ಆಸಕ್ತಿವಹಿಸಿದಲ್ಲಿ ಅವರು ಈ ದೇಶದ ಮಹಾನ್ ಪುರುಷರಾಗುವುದರ ಮೂಲಕ ಸಮಾಜಕ್ಕೆ ಉತ್ತಮ ಆಸ್ತಿಯಾಗಿ ಮಾದರಿಯಾಗ ಬಲ್ಲರು ಎಂದು ಸಾಹಿತಿ ಪ್ರೊ.ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹೊರ ವಲಯದಲ್ಲಿರುವ ಕಸ್ತೂರಬಾ ಆಶ್ರಮದ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿ ವಿದ್ಯಾಭ್ಯಾಸ ಮಾಡು ತ್ತಿರುವ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಎನ್ನುವ ಹೆಸರೇ ಒಂದು ಮಂತ್ರದಂಡ ವಾಗಿದೆ. ಅವರಲ್ಲಿ ಅಡಗಿದ್ದ ಅಪ್ರತಿಮ ದೇಶ ಪ್ರೇಮ ಮತ್ತು ಸತ್ಯಮೇವ ಜಯತೆ ಎನ್ನುವ ಅವರ ಅಚಲ ನಂಬಿಕೆಗಳ ಪ್ರಭಾವ ದಿಂದ ಕೋಟ್ಯಾಂತರ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದ್ದರು ಎಂಬುದು ಈಗ ಇತಿಹಾಸ ಎಂದರು.

ಗಾಂಧೀಜಿಯವರ ತತ್ವ ಆದರ್ಶಗಳನ್ನು ಇಂದು ಮಕ್ಕಳಲ್ಲಿ ಪರಿಚಯ ಮಾಡಿ ಕೊಡದೇ ವಿಕೃತಿ ಮನೋಭಾವನೆಗಳಿಗೆ ಆಸ್ಪದ ಕೊಡುವ ಶಿಕ್ಷಣ ಪ್ರವೃತ್ತಿಗೆ ನಾವು ಗಳು ಪ್ರೇರೇಪಿಸುತ್ತಿದ್ದೇವೆ. ಇದರಿಂದ ಪೋಷಕರು ಅರಿವಿಲ್ಲದಂತೆ ಅವರನ್ನು ವಾಸ್ತಾವಾಂಶದಿಂದ ದೂರ ಮಾಡಿ ನೈಜ ಕತೆ ವಾತಾವರಣಕ್ಕೆ ಅನುವು ಮಾಡಿ ಕೊಡುತ್ತಿದ್ದಾರೆ. ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಪೋಷಕರು ಕೊಡಿಸಬೇಕು. ಇಂದು ಜೈನ ಮುನಿಗಳು ಅವರ ಶಾಸ್ತ್ರ ಬದ್ಧವಾದ ಮತ್ತು ನಂಬಿಕೆಯುಳ್ಳ ಆಚಾರ ವಿಚಾರಗಳು ನಮಗೆ ಮುಜುಗರ ಅನಿಸಿದರೂ ಇತಿಹಾಸದಲ್ಲಿ ಅದನ್ನು ಒಪ್ಪಿ ಪ್ರೋತ್ಸಾಹಿಸಿದ ಭೂಮಿ ನಮ್ಮ ಭಾರತ. ದೇಹದ ಹೊರಗಿನ ಅಲಂಕಾರ ಕ್ಕಿಂತ ದೇಹದ ಒಳಗಿರುವ ಆತ್ಮದ ಅಲಂ ಕಾರದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದ ಬೇಕು. ಬದುಕನ್ನು ರೂಪಿಸಕೊಳ್ಳಬೇಕಾ ದರೆ ಇಲ್ಲಿಯ ಗಾಂಧಿ ದಾನಕ್ಕೆ ಭೇಟಿ ನೀಡಿ ದಲ್ಲಿ ಸಮಾಜಕ್ಕೆ ಭಾರವಾಗಿರುವ ವ್ಯಕ್ತಿ ಕೂಡ ಬದಲಾಗಿ ಸಮಾಜದ ಆರೋಗ್ಯ ಕರ ವಾಹಿನಿಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ವಿದ್ಯಾಭ್ಯಾಸದ ಜೀವನದಲ್ಲಿ ಮಕ್ಕಳು ಬರೀ ಶಿಕ್ಷಣದೊಂದಿಗೆ ಕಾಲಹರಣ ಮಾಡದೇ ಈ ದೇಶಕ್ಕಾಗಿ ದುಡಿದ ಮತ್ತು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ಸಂದೇಶ ಗಳನ್ನು ನೀಡಿದ ಮಹನೀಯರ ಜೀವನ ಚರಿತ್ರೆಯನ್ನು ಅಧ್ಯಯನವನ್ನು ಮಾಡಲು ಮುಂದಾಗಬೇಕು. ದಕ್ಷಿಣ ಭಾರತದಲ್ಲಿ ಮತ್ತೊಂದು ಗಾಂಧಿಧಾಮ ಇದೆಯೆಂದು ಕೇಳಲ್ಪಟ್ಟಿದ್ದೆ ಆದರೆ ಆ ಧಾಮವು ಅರಸೀ ಕೆರೆ ತಾಲೂಕಿನಲ್ಲಿ ಇದೆಯೆಂದು ತಿಳಿ ದಾಗ ಇಂದು ಭೇಟಿ ನೀಡಿದ್ದು ನನಗೆ ಅತ್ಯಂತ ನೆಮ್ಮದಿಯನ್ನು ತಂದಿದೆ. ಇಲ್ಲಿ ಇರುವ ಗಾಂಧಿ ಚಿತಾ ಭಸ್ಮವು ಕರ್ನಾ ಟಕಕ್ಕೆ ಹೆಸರನ್ನು ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಸ್ಮಾರಕವನ್ನು ಉಳಿಸಿ ಬೆಳಸಬೇಕಾದ ಜವಾ ಬ್ದಾರಿ ಪ್ರತಿ ನಾಗರಿಕರ ಮೇಲಿದೆ ಎಂದರು.

ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ನೋಡಿದಾಗ ಗ್ರಾಮೀಣ ಸೊಗ ಡಿನ ಅರಿವು ನನಗಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೆಚ್ಚಾಗಿ ನಮ್ಮ ನಾಡಿನ ವಿವಿಧ ಮಾದರಿ ಸಂಸ್ಕಾರಗಳು ಮನೆ ಮಾಡಿರುತ್ತವೆ. ಅವರಲ್ಲಿರುವ ಪ್ರತಿಭೆಗಳನ್ನು ನಾವು ಗುರುತಿಸಿ ಪ್ರೋತ್ಸಾಹಿಸ ಬೇಕು. ಅಂದು ಗಾಂಧೀಜಿ ಅವರು ಭಾರತ ಏನಾದರೂ ಅಭಿವೃದ್ಧಿಯಾಗಬೇಕಾದರೆ ಅದು ಬಹು ಸಂಖ್ಯಾತ ಹಳ್ಳಿಗಳಿಂದ ಮಾತ್ರ ಸಾಧ್ಯ. ಅದನ್ನು ಇಂತಹ ವಾತಾವರಣ ದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಂದ ನಿರೀಕ್ಷಣೆ ಮಾಡಬಹುದು ಎಂದರು.

ಸಂವಾದಲ್ಲಿ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 40ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಮತ್ತು ಚನ್ನರಾಯಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಗಾಂಧಿ ಪ್ರತಿ ಷ್ಠಾನ ಕಾರ್ಯದರ್ಶಿ ಶಿವರಾಜ್, ಆಶ್ರಮ ಮೇಲ್ವಿಚಾರಕಿ ಮೇರಿ, ತಿಪಟೂರು ಗುರು ಕುಲಾನಂದಾಶ್ರಮ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹರಿಪ್ರಸಾದ್, ತಾಲೂಕು ಕಸಾಪ ಕಾರ್ಯದರ್ಶಿ ಮಂಜುನಾಥ್, ರೋಟರಿ ಶಾಲೆಯ ಮುಖ್ಯೋಪಾ ಧ್ಯಾಯ ಅರುಣ್‍ಕುಮಾರ್, ಮುಖಂಡ ರಾದ ಕೊಟ್ರೇಶ್ ತಂಬ್ರಳ್ಳಿ, ಮಮತಾ ಅರಸೀಕೆರೆ ಇನ್ನಿತರರು ಇದ್ದರು.

Translate »