ಚುನಾವಣೆ ಕರ್ತವ್ಯ: ಕಾಡಾನೆ ಹಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ
ಕೊಡಗು

ಚುನಾವಣೆ ಕರ್ತವ್ಯ: ಕಾಡಾನೆ ಹಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

March 31, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಈ ಬಾರಿಯ ಲೋಕಸಭಾ ಚುನಾ ವಣೆಗೆ ರಾಜಕೀಯ ಪಕ್ಷಗಳ, ರಾಜಕಾರ ಣಿಗಳ ತಕರಾರು, ಸಂಘರ್ಷದ ಸ್ಥಿತಿ ಇಲ್ಲದೇ ಇದ್ದರೂ, ವನ್ಯಪ್ರಾಣಿಗಳಿಂದ ಕೆಲವೆಡೆ ಭೀತಿ ಎದುರಾಗಿದೆ. ಈ ಚಿಂತೆ ಜಿಲ್ಲಾಡಳಿತವನ್ನೂ ಬಾಧಿಸುತ್ತಿದೆ.

ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಮ್ಮ ಕಚೇರಿ ಯಲ್ಲಿ ಸಭಾಂಗಣದಲ್ಲಿ ಸಹಾಯಕ ಚುನಾ ವಣಾಧಿಕಾರಿಗಳು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಪರಿ ಹಾರೋಪಾಯಗಳ ಕುರಿತು ಚರ್ಚಿಸಿ ದರು. ಈ ಬಾರಿ ಲೋಕಸಭೆ ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯ ಅರಣ್ಯದಂಚು ಮತ್ತು ಕಾಡಾನೆ ಹಾವಳಿ ಪ್ರದೇಶದಲ್ಲಿನ ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಮತ್ತು ಮತಗಟ್ಟೆ ಸಿಬ್ಬಂದಿಗಳ ಕ್ಷೇಮದ ಬಗ್ಗೆ ಮುಂಜಾಗ ರೂಕತಾ ಕ್ರಮ ಕೈಗೊಳ್ಳಬೇಕಿದೆ ಎಂದರು.

ಮತಗಟ್ಟೆ ಸಿಬ್ಬಂದಿಗಳೆಲ್ಲರೂ ನಿಯೋಜಿತ ಮತ ಕೇಂದ್ರಗಳಿಗೆ ಮತ ದಾನದ ಹಿಂದಿನ ದಿನವೇ ತೆರಳು ತ್ತಾರೆ. ಒಂದು ರಾತ್ರಿ-ಒಂದು ಹಗಲು ಅಲ್ಲೇ ಇರುತ್ತಾರೆ. ಮರುದಿನ ಸಂಜೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಪಸಾಗುತ್ತಾರೆ. ಹಾಗಾಗಿ ಈ ಎರಡೂ ಸಂದರ್ಭಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗದಂತೆ, ಮುಖ್ಯವಾಗಿ ವನ್ಯ ಪ್ರಾಣಿಗಳಿಂದ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಚುನಾವಣೆ ಶಾಖೆ, ಅರಣ್ಯ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜಿಲ್ಲಾ ಧಿಕಾರಿ ನಿರ್ದೇಶನ ನೀಡಿದರು. ಕಾಡಾನೆ ಹಾವಳಿ ಇರುವ ಹಾಗೂ ಗಡಿಯಂಚಿನ ಪ್ರದೇಶಗಳಲ್ಲಿ ವನ್ಯಪ್ರಾಣಿಗಳಿಂದ ಯಾವುದೇ ರೀತಿಯ ಅನಾಹುತ ಎದುರಾಗದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಚುನಾವಣೆ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಸಮನ್ವಯ ದಿಂದ ಕೆಲಸ ಮಾಡÀಬೇಕಿದೆ ಎಂದರು.

ಈ ಸಂದರ್ಭ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 49 ಮತ್ತು ಮಡಿ ಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 85 ಮತಗಟ್ಟೆಗಳು ಕಾಡುಪ್ರಾಣಿಗಳ ಹಾವಳಿ ಕಂಡುಬರುವ ಪ್ರದೇಶಗಳಾಗಿವೆ ಎಂದು ಮಾಹಿತಿ ನೀಡಿದರು. ಈ ಎಲ್ಲ ಪ್ರದೇಶಗ ಳಲ್ಲಿಯೂ ಹೆಚ್ಚಿನ ಅರಣ್ಯ ಸಿಬ್ಬಂದಿ ನಿಯೋ ಜಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿರಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕುಂಡತ್ತಿಕಾನ ರಸ್ತೆ ಸರಿಪಡಿಸದಿದ್ದರೆ ಚುನಾವಣೆ ಬಹಿಷ್ಕಾರ
ಮಡಿಕೇರಿ: ಕರಿಕೆ ಗ್ರಾಮದ ಬಾಳೆಬಳಪು ಕುಂಡತ್ತಿಕಾನದ ಪರಿಶಿಷ್ಟರ ಕಾಲೋನಿ ರಸ್ತೆ ಸಮಸ್ಯೆಯಾಗಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಕಾಲೋನಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ರಸ್ತೆಗಡ್ಡಲಾಗಿ ಕೆಲವು ಪ್ರಭಾವಿಗಳು ಬೇಲಿ ಹಾಕಿದ್ದಾರೆ. ಗ್ರಾಮದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸಂಪರ್ಕ ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಬೇಲಿ ತೆರವು ಗೊಳಿಸಲು ಮನವಿ ಮಾಡಿದ್ದಕ್ಕೆ ಪ್ರಭಾವಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ಕಾಲೋನಿ ನಿವಾಸಿಗಳು ಕಂದಾಯ ಅಧಿಕಾರಿಗಳು ತಕ್ಷಣ ಸ್ಥಳ ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಜನರ ಸಂಚಾರಕ್ಕೆ ಯೋಗ್ಯ ರಸ್ತೆ ಕಲ್ಪಿಸಿಕೊಡಬೇಕು ಎಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಸ್ವೀಪ್ ಸಮಿತಿಗೆ ರಾಯಭಾರಿ ನೇಮಕ
ಲೋಕಸಭಾ ಚುನಾವಣೆಯ ಸ್ವೀಪ್ ಚಟುವಟಿಕೆಗೆ ಜಿಲ್ಲಾ ರಾಯಭಾರಿಯಾಗಿ ಹಿರಿಯ ನಾಗರಿಕರಾದ ಭಾಗೀರಥಿ ಹುಲಿತಾಳ ಮತ್ತು ವಿಶೇಷಚೇತನರಾದ ಎಸ್.ಕೆ.ಈಶ್ವರಿ ನೇಮಕವಾಗಿದ್ದಾರೆಂದು ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ರಾಯಭಾರಿಗಳು ಸ್ವೀಪ್ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನ, ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯೊಂದಿಗೆ ಸಹಕರಿಸಲಿದ್ದಾರೆ ಎಂದಿದ್ದಾರೆ.

Translate »