ದುಗ್ಗಹಟ್ಟಿಯಲ್ಲಿ ವಿದ್ಯುತ್ ಅವಘಡ, ಇಬ್ಬರ ಸಾವು
ಚಾಮರಾಜನಗರ

ದುಗ್ಗಹಟ್ಟಿಯಲ್ಲಿ ವಿದ್ಯುತ್ ಅವಘಡ, ಇಬ್ಬರ ಸಾವು

June 15, 2018

ಯಳಂದೂರು:  ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಗುರುವಾರ ಸಂಭ ವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯ ಗೊಂಡಿರುವ ಘಟನೆ ಸಂಭವಿಸಿದೆ.

ಗ್ರಾಮದ ಬಸವರಾಜು (55) ಹಾಗೂ ಶ್ರೀನಿವಾಸ (46) ಎಂಬುವರೆ ಮೃತಪ ಟ್ಟಿದ್ದು, ಕಾಮರಾಜು ತೀವ್ರವಾಗಿ ಗಾಯ ಗೊಂಡ ವ್ಯಕ್ತಿಯಾಗಿದ್ದು, ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ದುಗ್ಗಹಟ್ಟಿ ಗ್ರಾಮದ ಬಸವರಾಜು ಎಂಬುವರ ಮನೆಯ ಬಳಿ ವಿದ್ಯುತ್ ತಂತಿ ಶ್ರೀನಿವಾಸ ಎಂಬುವರಿಗೆ ತಗುಲಿದೆ. ಇವರನ್ನು ರಕ್ಷಿಸಲು ಯತ್ನಿಸಿದ ಬಸವರಾಜು ಅವರಿಗೂ ವಿದ್ಯುತ್ ಸ್ಪರ್ಶಿ ಸಿದೆ. ಇದೇ ವೇಳೆ ಶ್ರೀನಿವಾಸ ಅವರ ಸಹೋದರ ಕಾಮರಾಜು ಇವರಿಬ್ಬರನ್ನೂ ರಕ್ಷಿಸಲು ಹೊರಟಿದ್ದಾರೆ. ಆದರೆ ಅವರಿಗೆ ವಿದ್ಯುತ್ ಪ್ರವಹಿಸಿ ತಗುಲಿ ತಕ್ಷಣ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ನೆರೆಹೊರೆಯವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಇವ ರನ್ನು ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರಗೆ ಸಾಗಿಸಿದ್ದಾರೆ. ಅಷ್ಟೊತ್ತಿಗಾಗಲೇ ಬಸವರಾಜು ಹಾಗೂ ಶ್ರೀನಿವಾಸ ರವರ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಕಾಮರಾಜು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮುಗಿಲು ಮುಟ್ಟಿದ ಆಕ್ರಂದನ: ಬಸವ ರಾಜು ಎಂಬುವರಿಗೆ ಹೆಂಡತಿ, ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾರೆ. ಶ್ರೀನಿ ವಾಸ ಎಂಬುವವರಿಗೆ ಹೆಂಡತಿ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆವರಣದಲ್ಲಿ ಸಂಬಂಧಿಕರ ರೋಧನ ಮನ ಕಲುಕುವಂತಿತ್ತು.

Translate »