ಗುಂಡ್ಲುಪೇಟೆಯಲ್ಲಿ ಜಿಟಿ ಜಿಟಿ ಮಳೆ: ಕೆಸರು ಗದ್ದೆಯಾದ ರಸ್ತೆಗಳು
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಜಿಟಿ ಜಿಟಿ ಮಳೆ: ಕೆಸರು ಗದ್ದೆಯಾದ ರಸ್ತೆಗಳು

June 15, 2018

ಗುಂಡ್ಲುಪೇಟೆ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಬೀಳುತ್ತಿರುವ ಜಿಟಿ ಜಿಟಿ ಮಳೆಗೆ ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳು ಕೆಸರು ಗದ್ದೆ ಯಂತಾಗಿದ್ದು, ವಾಹನ ಮತ್ತು ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಸಮರ್ಪಕವಾದ ರಸ್ತೆಗಳಿಲ್ಲದ ಹಿನ್ನೆಲೆ ಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಯಾಗಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ದ.ರಾ.ಬೇಂದ್ರೆ ನಗರ, ಕೆ.ಎಸ್. ನಾಗರತ್ನಮ್ಮ ಬಡಾವಣೆ, ಹೊಸೂರು ಬಡಾ ವಣೆ, ಅಶ್ವಿನಿ ಬಡಾವಣೆ, ಜನತಾ ಕಾಲೋನಿ ಮುಂತಾದ ಬಡಾವಣೆಗಳಲ್ಲಿ ಇನ್ನೂ ಸಮರ್ಪಕ ಚರಂಡಿ ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಹಳೆಯ ಮಣ್ಣಿನ ರಸ್ತೆಯಲ್ಲಿ ಕಲ್ಲುಗಳು ಎದ್ದು ಗುಂಡಿ ಗಳಾಗಿವೆ. ಇತ್ತೀಚೆಗೆ ಬೀಳುತ್ತಿರುವ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಮಡುಗಟ್ಟಿ ನಿಲ್ಲುತ್ತಿದ್ದು, ಬಹುತೇಕ ರಸ್ತೆಗಳು ಕೆಸರು ಗದ್ದೆಗಳಾಗಿವೆ.

ಇದರಿಂದ ಬಡಾವಣೆಯ ನಿವಾಸಿಗಳು, ಪಾದಚಾರಿಗಳು ಹಾಗೂ ವಾಹನ ಸವಾರರು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ.
ಎಲ್ಲಾ ರಸ್ತೆಗಳಲ್ಲಿಯೂ ಶಾಲಾ ವಾಹನಗಳು ಸಂಚರಿಸುತ್ತಿದ್ದು, ಕೆಸರಿ ನಿಂದ ಕೂಡಿದ ರಸ್ತೆಯಲ್ಲಿ ವಾಹನದ ಚಕ್ರಗಳು ಜಾರುತ್ತಿದೆ. ಇದರಿಂದಾಗಿ ಪಾಲ ಕರು ತಮ್ಮ ಮಕ್ಕಳನ್ನು ಮುಖ್ಯ ರಸ್ತೆ ಬಳಿಗೆ ಕರೆದೊಯ್ದ ಶಾಲಾ ವಾಹನಕ್ಕೆ ಕಳು ಹಿಸಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟ ವರು ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಸಿದ್ದಾರೆ.

Translate »