ಆಮೆ ವೇಗದಲ್ಲಿ ಸಾಗುತ್ತಿರುವ ಚಾಮರಾಜನಗರ ರಸ್ತೆ ಕಾಮಗಾರಿ ಅಭಿವೃದ್ಧಿ ಹಾದಿಯಲ್ಲಿ ನೂರೆಂಟು ಕಿರಿಕಿರಿ
ಚಾಮರಾಜನಗರ

ಆಮೆ ವೇಗದಲ್ಲಿ ಸಾಗುತ್ತಿರುವ ಚಾಮರಾಜನಗರ ರಸ್ತೆ ಕಾಮಗಾರಿ ಅಭಿವೃದ್ಧಿ ಹಾದಿಯಲ್ಲಿ ನೂರೆಂಟು ಕಿರಿಕಿರಿ

June 15, 2018

ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರ ಅಭಿ ವೃದ್ಧಿ ಹೊಂದುತ್ತಿದೆಯೇ ಎಂಬ ಪ್ರಶ್ನೆ ಯನ್ನು ನಗರದ ಜನತೆಯ ಮುಂದಿಟ್ಟರೆ ಹೌದು ಎಂದು ಪ್ರಶ್ನೆ ತಟ್ಟನೆ ಹಾಗೂ ಸಹಜವಾಗಿ ಬರುತ್ತದೆ.

ಇದಕ್ಕೆ ಕಾರಣ ಇಲ್ಲಿನ ಪ್ರಮುಖ ರಸ್ತೆ ಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ಇರುವುದು. ಆದರೆ ಈ ಕಾಮಗಾರಿಗಳು ನಿಯಮಾನುಸಾರ ಹಾಗೂ ಸಮರ್ಪಕ ರೀತಿಯಲ್ಲಿ ನಡೆಯದೇ ಇರುವುದರಿಂದ ನಾಗರಿಕರು ಮತ್ತು ಸವಾರರು ಯಮ ಯಾತನೆ ಅನುಭವಿಸುತ್ತಿದ್ದಾರೆ.

ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆ ಭುವನೇಶ್ವರಿ ವೃತ್ತದಿಂದ ರಾಮ ಸಮುದ್ರದ ನೀರು ಶುದ್ಧೀಕರಣ ಘಟಕ ದವರೆಗೆ ಕಾಂಕ್ರಿಟ್ ರಸ್ತೆಯಾಗಿ ನಿರ್ಮಾಣ ಆಗುತ್ತಿದೆ. ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯೂ ಸಹ ಗುಂಡ್ಲುಪೇಟೆ ವೃತ್ತದಿಂದ ಸಂತೇಮರಹಳ್ಳಿ ವೃತ್ತದವರೆಗೆ ಕಾಂಕ್ರಿಟ್ ರಸ್ತೆಯಾಗಿ ಪರಿವರ್ತನೆ ಆಗು ತ್ತಿದೆ. ಈ ಎರಡೂ ಕಾಮಗಾರಿಗಳೂ ಸಹ ಪ್ರಗತಿಯಲ್ಲಿ ಇದೆ. ಆದರೆ ಕಾಮಗಾರಿ ನಡೆಯುವಾಗ ಅನುಸರಿಸಬೇಕಾದ ನಿಯ ಮಗಳನ್ನು ಗುತ್ತಿಗೆದಾರರು ಪಾಲಿಸುತ್ತಿಲ್ಲ. ಹೀಗಾಗಿ ವಾಹನ ಸವಾರರು, ಪಾದಚಾರಿ ಗಳು, ವರ್ತಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಅಕ್ಷರಶಃ ಕಂಗೆಟ್ಟಿದ್ದಾರೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಗುತ್ತಿಗೆ ದಾರರಿಗೆ ಜನರು ಈ ರಸ್ತೆಯಲ್ಲಿ ಶಾಪ ಹಾಕುತ್ತ ಹೆಜ್ಜೆ ಹಾಕುವುದು ಸರ್ವೇ ಸಾಮಾನ್ಯವಾಗಿದೆ.

ಜೋಡಿರಸ್ತೆ: ಚಾಮರಾಜನಗರದಲ್ಲಿ ಜೋಡಿರಸ್ತೆ ಇರುವುದು ಒಂದೇ, ಅದು ಭುವನೇಶ್ವರಿ ವೃತ್ತದಿಂದ ರಾಮಸಮುದ್ರ ದವರೆಗಿನ 3.1 ಕಿಲೋ ಮೀಟರ್ ಉದ್ದದ ರಸ್ತೆ, ಈ ರಸ್ತೆಗೆ ಈಗಾಗಲೇ ಮಾಜಿ ರಾಜ್ಯ ಪಾಲರಾದ ಬಿ.ರಾಚಯ್ಯ ಅವರ ಹೆಸರನ್ನು ನಾಮಾಂಕಿತ ಮಾಡಲಾಗಿದೆ. ಈ ರಸ್ತೆ ಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸ ಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಆರಂಭಗೊಂಡು ಹಲವು ತಿಂಗಳುಗಳಾಗಿದ್ದರೂ ಸಹ ಜೋಡಿ ರಸ್ತೆಯ ಒಂದು ಬದಿಯ ರಸ್ತೆಯೂ ಸಹ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಕೇವಲ ಅರ್ಧದಷ್ಟು ರಸ್ತೆ ಮಾತ್ರ ಅಭಿವೃದ್ಧಿ ಆಗಿದ್ದು, ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗಿದೆ.

ಜೋಡಿರಸ್ತೆಯ ಒಂದು ಬದಿಯಲ್ಲಿ ಕಾಮ ಗಾರಿ ಆರಂಭಿಸುವ ಮುನ್ನ ಮತ್ತೊಂದು ಬದಿಯ ರಸ್ತೆಯನ್ನು ಕನಿಷ್ಟ ಸಮತಟ್ಟು ಮಾಡುವ ಕೆಲಸವನ್ನೂ ಮಾಡದೇ ಇರು ವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹಳ್ಳ ಬಿದ್ದು ರಾಡಿ ಹಿಡಿದಿರುವ ರಸ್ತೆ ಯಲ್ಲೇ ಜೀವ ಭಯದಿಂದ ವಾಹನ ಸವಾರರು ಪ್ರಯಾಣಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತುಂತುರು ಮಳೆ ಬೀಳುತ್ತಿ ರುವ ಕಾರಣ ಇಡೀ ರಸ್ತೆ ಕೆಸರು ಗದ್ದೆ ಯಂತೆ ಕಾಣುತ್ತಿದೆ. ಮಳೆ ಬಿದ್ದರೆ ಕೆಸರು, ಮಳೆ ಇಲ್ಲದಿದ್ದರೆ ಧೂಳು ಆವರಿಸುತ್ತಿದ್ದು ಕೆಸರು ಮತ್ತು ಧೂಳಿನ ನಡುವೆ ನಾಗರಿ ಕರು ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಸಂಚರಿಸುವಂತಾಗಿದೆ. ಈ ಕಾಮ ಗಾರಿ ಯಾವಾಗ

ಮುಗಿದು ಸಮಸ್ಯೆಗ ಳಿಂದ ಮುಕ್ತಿ ದೊರೆಯುತ್ತದೇ ಎಂಬುದನ್ನು ನಾಗರೀಕರು ಎದುರು ನೋಡುತ್ತಿದ್ದಾರೆ.

ದೊಡ್ಡ, ಚಿಕ್ಕ ಅಂಗಡಿ ಬೀದಿ: ನಗರದ ವ್ಯಾಪಾರ ಕೇಂದ್ರ ಎಂದರೆ ದೊಡ್ಡ ಅಂಗಡಿ ಬೀದಿ ಮತ್ತು ಚಿಕ್ಕ ಅಂಗಡಿ ಬೀದಿ. ಈ ಎರಡೂ ಬೀದಿಗಳಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಜನ ಜಂಗುಳಿ ಇದ್ದೇ ಇದೆ. ಈ ರಸ್ತೆ ಯನ್ನು ಅಗಲೀಕರಣಗೊಳಿಸಿ ಅಭಿ ವೃದ್ಧಿಗೊಳಿಸಬೇಕು ಎಂದು ತೀರ್ಮಾನಿ ಸಿದ ಜಿಲ್ಲಾಡಳಿತ ಹಾಗೂ ನಗರಸಭೆ ಕಾಮ ಗಾರಿಯನ್ನು ಕೈಗೆತ್ತಿಕೊಂಡಿತು. ಗುಂಡ್ಲು ಪೇಟೆ ವೃತ್ತದಿಂದ ಸಂತೇಮರಹಳ್ಳಿ ವೃತ್ತದ ವರೆಗೆ ರಸ್ತೆಯನ್ನು 40 ಅಡಿ ರಸ್ತೆಯನ್ನಾಗಿ ಅಗಲೀಕರಣ ಗೊಳಿಸುವುದು. ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವ ಕಾಮ ಗಾರಿ ಪ್ರಗತಿಯಲ್ಲಿ ಇದೆ. ಈ ಕಾಮಗಾರಿ ಪ್ರಾರಂಭವಾಗಿ ಆರೇಳು ತಿಂಗಳಾಗಿದೆ. ಆದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಇದುವರೆವಿಗೆ ಕೇವಲ ಅರ್ಧದಷ್ಟು ಮಾತ್ರ ಕಾಮಗಾರಿ ಮುಗಿ ದಿದ್ದು, ಮಂದಗತಿಯಲ್ಲಿ ಸಾಗಿದೆ.

ಗುತ್ತಿಗೆದಾರ ಕಾಮಗಾರಿಯನ್ನು ನಿಯಮಾ ನುಸಾರ ನಡೆಸದೇ ಇರುವುದು ಕಿರಿಕಿರಿಗೆ ಕಾರಣವಾಗಿದೆ. ಯಾವುದೇ ರೀತಿಯ ಸೂಚನಾ ಫಲಕವನ್ನು ಹಾಕದೆ ಕಾಮ ಗಾರಿ ನಡೆಸುತ್ತಿರುವುದರಿಂದ ನಾಗರಿಕರು, ವರ್ತಕರು ಹಾಗೂ ಬೀದಿ ಬದಿ ವ್ಯಾಪಾರಿ ಗಳು ಕಂಗೆಟ್ಟಿದ್ದಾರೆ. ರಸ್ತೆ ಮಧ್ಯದಲ್ಲಿ ಇರುವ ಮ್ಯಾನ್‍ಹೋಲ್ ಗಳನ್ನು ಮುಚ್ಚದೇ ಇರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

ತುಂಬಾ ನಿಧಾನಗತಿಯಲ್ಲಿ ನಡೆಯು ತ್ತಿರುವ ಈ ಕಾಮಗಾರಿ ಯಾವಾಗ ಮುಗಿ ಯತ್ತದೋ, ತಾಪತ್ರಯದಿಂದ ನಾವೆಲ್ಲರೂ ಯಾವಾಗ ಹೊರ ಬರುತ್ತೇವೋ ಎಂಬು ದನ್ನು ಎದುರು ನೋಡುತ್ತಿದ್ದಾರೆ.

Translate »