ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಪರಿಸರ ಹಾಳು: ಪೌರಾಯುಕ್ತ ಪರಮೇಶ್ವರಪ್ಪ ಆತಂಕ
ಹಾಸನ

ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಪರಿಸರ ಹಾಳು: ಪೌರಾಯುಕ್ತ ಪರಮೇಶ್ವರಪ್ಪ ಆತಂಕ

December 28, 2018

ಅರಸೀಕೆರೆ:  ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಸ್ವಚ್ಛ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇದನ್ನು ತಡೆಗಟ್ಟದಿ ದ್ದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿ ಸುವುದಿಲ್ಲ ಎಂದು ಪೌರಾಯುಕ್ತ ಪರಮೇ ಶ್ವರಪ್ಪ ಆತಂಕ ವ್ಯಕ್ತಪಡಿಸಿದರು.

ನಗರದ ಶ್ರೀನಿವಾಸನಗರ ಬಡಾವಣೆ ಯಲ್ಲಿರುವ ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳು ಸೈಕಲ್ ಜಾಥಾ ಮೂಲಕ ನಗರದಾದ್ಯಂತ ಪರಿಸರ ಜಾಗೃತಿ ಮೂಡಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಗಳಂತಹ ಗಂಭೀರ ಬೆಳವಣಿಗೆಗಳಿಗೆ ಎಲ್ಲರೂ ಪರೋಕ್ಷವಾಗಿ ಭಾಗಿಯಾಗುತ್ತಿ ದ್ದೇವೆ. ಪರಿಸರ ಜಾಗೃತಿ ಮೂಡಬೇಕೆಂದರೆ ಮೊದಲು ಶಿಕ್ಷಣ ಕ್ಷೇತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಇಂದಿನಿಂದಲೇ ನಾವುಗಳು ಎಚ್ಚೆತ್ತು ಇಂಧನ ಬಳಕೆ ವಾಹನಗಳನ್ನು ಉಪ ಯೋಗಿಸುವುದನ್ನು ಕಾಲ ಕ್ರಮೇಣ ಕಡಿಮೆ ಮಾಡುವುದರ ಮೂಲಕ ಬೈಸಿ ಕಲ್‍ಗಳಂತಹ ಪರಿಸರ ಪ್ರೇಮಿ ವಾಹನ ಗಳನ್ನು ಬಳಸಲು ಪ್ರೇರೇಪಿಸಬೇಕು. ಮಾಲಿನ್ಯ ರಹಿತ ಪರಿಸರ ನಮ್ಮದಾಗ ಬೇಕಾದರೆ ಮೊದಲು ನಮ್ಮ ನಮ್ಮ ಮನೆಗಳಿಂದಲೇ ಪ್ರಯತ್ನಗಳು ನಡೆಯ ಬೇಕು ಎಂದರು.

ಪ್ರಕೃತಿ ಸಮತೋಲನ ಎಂಬುದು ಭೂಮಿ ಹುಟ್ಟಿದಾಗಿನಿಂದ ಬಂದಿದೆ. ಈ ಸಮತೋಲನಕ್ಕೆ ನಾವು ಅಡ್ಡಿಪಡಿಸಿದಲ್ಲಿ ಮುಂದೊಂದು ದಿನ ಮನುಷ್ಯನೇ ಇಲ್ಲ ದಂತಹ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ. ಭೂಮಿಯ ಮೇಲೆ ಸಕಲ ಜೀವ ಜಲಚರ ಗಳಿಗೂ ಬದುಕುವ ಹಕ್ಕಿದೆ. ಆ ಬದು ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇರುವುದಿಲ್ಲ. ಶಾಲಾ ಕಾಲೇಜುಗಳ ಆವ ರಣಗಳು ಸೇರಿದಂತೆ ಮನೆಗಳ ಅಕ್ಕಪಕ್ಕ ದಲ್ಲಿ ಹೆಚ್ಚೆಚ್ಚು ಮರ ಗಿಡಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಪ್ರತಿಯೊ ಬ್ಬರೂ ಕಾಯ್ದುಕೊಳ್ಳಬೇಕು. ಇಂದು ಶಾಲೆ ವತಿಯಿಂದ ಸಾಮೂಹಿಕವಾಗಿ ವಿದ್ಯಾರ್ಥಿಗಳು ನಗರದಾದ್ಯಂತ ಪರಿ ಸರ ಜಾಗೃತಿಯನ್ನು ಸೈಕಲ್ ಜಾಥಾದ ಮೂಲಕ ಮಾಡುತ್ತಿರುವುದು ಮಾದರಿ ಯಾಗಿದೆ ಎಂದು ಶ್ಲಾಘಿಸಿದರು.

ಪ್ರಾಂಶುಪಾಲ ಲಿಂಗರಾಜು ಮಾತನಾಡಿ, ನಗರದಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾದಂತೆ ವಾಯುಮಾಲಿನ್ಯವೂ ಹೆÀಚ್ಚಾ ಗುತ್ತಿದೆ. ಈ ಬೆಳವಣಿಗೆಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಇನ್ನಿ ತರೆ ರೋಗಗಳನ್ನು ನಾವುಗಳು ನಮಗೆ ಅರಿವಿಲ್ಲದಂತೆ ಅಪ್ಪಿಕೊಳ್ಳುತ್ತಿದ್ದೇವೆ. ದಿನ ದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗು ತ್ತಿದ್ದು ಇವುಗಳಿಂದ ಉತ್ಪತ್ತಿಯಾಗುವ ಮಾಲಿನ್ಯ, ಪರಿಸರದ ಮೇಲೆ ಕೆಟ್ಟ ಪರಿ ಣಾಮ ಬೀರುವುದರೊಂದಿಗೆ ಪರಿಸರವೂ ನಾಶವಾಗುತ್ತಿದೆ. ಇದರಿಂದಾಗಿ ಪ್ರಕೃತಿಯ ಮೇಲೆ ಅಡ್ಡ ಪರಿಣಾಮ ಬೀರುತ್ತಿದ್ದು, ಪ್ರತಿ ಕುಟುಂಬದಲ್ಲಿ ಮನೆಗೊಂದರಂತೆ ಅವಶ್ಯ ಕತೆಗೆ ತಕ್ಕನಾಗಿ ವಾಹನಗಳನ್ನು ಖರೀದಿ ಮಾಡಿ ಉಪಯೋಗಿಸಬೇಕು. ಆದರೆ ಕುಟುಂಬದಲ್ಲಿ ಇರುವವರೆಲ್ಲರೂ ಒಂದೊ ಂದು ವಾಹನಗಳನ್ನು ಖರೀದಿ ಮಾಡುವು ದರ ಮೂಲಕ ಪರಿಸರಕ್ಕೆ ದೊಡ್ಡ ಹೊರೆ ಯಾಗಿದ್ದಾರೆ. ಈ ಎಲ್ಲಾ ಅವಾಂತರ ಗಳಿಗೆ ಜಾಗೃತಿಯೇ ಮೂಲ ಮಂತ್ರವಾ ಗಿದ್ದು, ಸೈಕಲ್ ಜಾಥಾದಂತಹ ಕಾರ್ಯಕ್ರಮ ಗಳ ಮೂಲಕ ನಮ್ಮ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿ ಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ಎಎಸ್‍ಐ ಚಿದಾನಂದ್, ಹರೀಶ್, ನಗರಸಭೆಯ ಹಿರಿಯ ಆರೋಗ್ಯ ನಿರೀ ಕ್ಷಕ ರಮೇಶ್ ಹಾಗೂ ಆದಿಚುಂಚನಗಿರಿ ಶಾಲಾ ಕಾಲೇಜಿನ ಬೋಧಕ, ಬೋಧ ಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Translate »