ಸಿದ್ದರಾಮಯ್ಯಗೆ ದುಬಾರಿ  ಬೆಂಜ್ ಕಾರು ಗಿಫ್ಟ್ ಕೊಟ್ಟ ಶಾಸಕ…!
ಮೈಸೂರು

ಸಿದ್ದರಾಮಯ್ಯಗೆ ದುಬಾರಿ ಬೆಂಜ್ ಕಾರು ಗಿಫ್ಟ್ ಕೊಟ್ಟ ಶಾಸಕ…!

January 20, 2019

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಸಂಕಷ್ಟದಲ್ಲಿರುವಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರೊಬ್ಬರು ದುಬಾರಿ ಬೆಲೆಯ ಬೆಂಜ್ ಕಾರೊಂದನ್ನು ಗಿಫ್ಟ್ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ದುಬಾರಿ ಬೆಲೆಯ ವಾಚು ಗಿಫ್ಟ್ ಪಡೆದು ವಿವಾದಕ್ಕಿಡಾಗಿದ್ದ ಸಿದ್ದರಾಮಯ್ಯ ಅವರಿಗೆ ಈಗ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರು ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಕಪ್ಪು ಬಣ್ಣದ ಬೆಂಜ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಹೆಸರಿನಲ್ಲಿ ಈ ಕಾರು ನೋಂದಣಿ ಆಗಿದ್ದು, ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಕಾರನ್ನು ಮಾಜಿ ಸಿಎಂಗೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.

ಇನ್ನು ಈ ದುಬಾರಿ ಕಾರು ಗಿಫ್ಟ್ ಬಗ್ಗೆ ಪ್ರತಿಕ್ರಿಯಿಸಿದ ಬಿ.ಎಸ್. ಯಡಿಯೂರಪ್ಪ, ನಾನು ಸಿದ್ದರಾಮಯ್ಯರ ವಾಚ್, ಕನ್ನಡಕ, ಕಾರಿನ ಬಗ್ಗೆ ಮಾತನಾಡೋದಿಲ್ಲ. ಈ ವಿಚಾ ರದ ಬಗ್ಗೆ ಮಾತನಾಡಲು ಸಾಕಷ್ಟು ಜನರು, ಮಾಧ್ಯಮಗಳಿವೆ. ಬೇರೆಯವರಿಗೆ ತತ್ವ ಸಿದ್ಧಾಂತಗಳನ್ನು ಹೇಳೋರು ಹೇಗೆ ನಡೆದು ಕೊಳ್ತಾರೆ ಅನ್ನೋದು ಮುಖ್ಯ. ಜನ ಎಲ್ಲವನ್ನೂ ನೋಡುತ್ತ ಇರುತ್ತಾರೆ ಎಂದರು.

Translate »