ಮೈಸೂರಿನಲ್ಲಿ ಜನಾಕರ್ಷಿಸುತ್ತಿದೆ  ಗೆಡ್ಡೆ-ಗೆಣಸು ಮೇಳ
ಮೈಸೂರು

ಮೈಸೂರಿನಲ್ಲಿ ಜನಾಕರ್ಷಿಸುತ್ತಿದೆ ಗೆಡ್ಡೆ-ಗೆಣಸು ಮೇಳ

January 20, 2019

ಮೈಸೂರು: ಮೈಸೂ ರಿನ ಕರ್ಜನ್ ಪಾರ್ಕ್‍ನಲ್ಲಿ ಎರಡು ದಿನದ ಗೆಡ್ಡೆ-ಗೆಣಸು ಮೇಳ ಶನಿವಾರ ಆರಂಭವಾಗಿದ್ದು, 200ಕ್ಕೂ ಹೆಚ್ಚು ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕಿಟ್ಟು ಅರಿವು ಮೂಡಿಸಲಾಗುತ್ತಿದೆ.

ತೋಟಗಾರಿಕಾ ಇಲಾಖೆ, ಸಹಜ ಸಮೃದ್ಧ ಸಂಸ್ಥೆ, ಬಾಗಲಕೋಟೆ ತೋಟ ಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಇನ್ನಿತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಕೇರಳದಿಂದ ಸುಮಾರು 30ಕ್ಕೂ ಹೆಚ್ಚು ಗೆಡ್ಡೆ, ಗೆಣಸು ಬೆಳೆಗಾರರು ಹಾಗೂ ಸಂರಕ್ಷಕರು ಪಾಲ್ಗೊಂಡು, ಅವುಗಳ ಮಹತ್ವವನ್ನು ವಿವರಿಸುತ್ತಿದ್ದಾರೆ. 200ಕ್ಕೂ ಹೆಚ್ಚು ಬಗೆಯ ಗೆಡ್ಡೆ, ಗೆಣಸು, ಬಗೆ ಬಗೆಯ ಸೊಪ್ಪು, ಹಣ್ಣು, ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಪ್ರದರ್ಶಿಸಲಾಗಿದ್ದು, ನಾಳೆ (ಜ.20) ಮಾರಾಟ ಮಾಡಲಾಗುತ್ತದೆ. ಪಾಶ್ವಿಮಾತ್ಯ ಆಹಾರ ಪದ್ಧತಿಯಿಂದ ಬೇಸತ್ತಿ ರುವವರಿಗೆ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲೊಂದಾದ ಗೆಡ್ಡೆ-ಗೆಣಸುಗಳ ಬಳಕೆ ಕುರಿತು ಪ್ರೇರಣೆ ನೀಡುವುದರೊಂ ದಿಗೆ ಗೆಡ್ಡೆ ಗೆಣಸು ಬೆಳೆಯುವ ರೈತರಿಗೆ ಪ್ರೋತ್ಸಾಹ, ವೈಜ್ಞಾನಿಕ ಸಂಶೋಧನೆ ಮತ್ತು ವೌಲ್ಯವರ್ಧನೆಗೆ ವೇದಿಕೆ ಕಲ್ಪಿಸಲು ಮೇಳ ಹಮ್ಮಿಕೊಳ್ಳಲಾಗಿದೆ.

220 ವೈವಿಧ್ಯಮಯ ಗೆಡ್ಡೆ,ಗೆಣಸುಗಳ ಸಂರಕ್ಷಿಸಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಾದ ಕೇರಳದ ವೈಯ್ನಾಡು ನಿವಾಸಿ ಎನ್.ಎಂ.ಶಾಜಿ ಅವರು ಮುತ್ತೈದೆಯರ ಮಡಿಲಿಗೆ ಗೆಣಸು ಹಾಕುವ ಮೂಲಕ ಗೆಡ್ಡೆ-ಗೆಣಸು ಮೇಳವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅಕ್ಕಿ ಪರಿ ಚಯವಾಗುವುದಕ್ಕೂ ಮುನ್ನ ವಿವಿಧ ಬಗೆಯ ಗೆಡ್ಡೆ-ಗೆಣಸುಗಳನ್ನು ವ್ಯಾಪಕವಾಗಿ ಬಳಸ ಲಾಗುತ್ತಿತ್ತು. ಪ್ರೊಟೀನ್, ಲವಣಾಂಶವೂ ಒಳಗೊಂಡಂತೆ ವಿವಿಧ ರೋಗಗಳನ್ನು ತಡೆ ಗಟ್ಟುವ ಹಲವು ಔಷಧೀಯ ಅಂಶವನ್ನು ಗೆಡ್ಡೆ, ಗೆಣಸುಗಳು ಹೊಂದಿವೆ. ಗರ್ಭಿಣಿ ಯರು ಸಿಹಿ ಗೆಣಸನ್ನು ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ಸಹ ಕಾರಿಯಾಗು ತ್ತದೆ. ಡಯೋಸ್‍ಜನಿನ್ ಅಂಶವೂ ಇರುವು ದರಿಂದ ಕ್ಯಾನ್ಸರ್ ರೋಗಿಗಳಿಗೆ ವರದಾನ ವಾಗಿದೆ. ಪಾಶ್ಚಿಮಾತ್ಯ ಸಂಸ್ಕøತಿಗೆ ದಾಸರಾಗು ತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.

ಇತ್ತೀಚೆಗೆ ಕೇರಳದ ತ್ರಿಚೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ 60ಕ್ಕೂ ಹೆಚ್ಚಿನ ತಳಿಯ ಭತ್ತದ ಬೆಳೆಯನ್ನು ಪ್ರದರ್ಶಿಸಲಾಗಿತ್ತು. ಮೇಳ ವೀಕ್ಷಿಸಲು ಬಂದ ವಿದ್ಯಾರ್ಥಿಗಳು ಭತ್ತದ ತಳಿಗಳನ್ನು ಕಂಡು, ಇದು ಮೆಂತ್ಯ ಅಥವಾ ಜೀರಿಗೆಯೇ? ಎಂದು ಪ್ರಶ್ನಿಸಿದ್ದರು. ಇದನ್ನು ಅವಲೋಕಿಸಿದರೆ ಬಹುತೇಕ ಯುವ ಸಮೂಹಕ್ಕೆ ಭತ್ತ ಮತ್ತು ಜೀರಿಗೆ ಯಾವುದು ಎಂಬ ವ್ಯತ್ಯಾಸ ತಿಳಿಯ ದಾಗಿದೆ. ಅಲ್ಲದೆ ಯಾವ ಬೆಳೆ ಭೂಮಿ ಒಳಗೆ, ಯಾವ ಬೆಳೆ ಗಿಡಗಳ ರೂಪದಲ್ಲಿ, ಇನ್ಯಾವ ಹಣ್ಣುಗಳು ಮರದಲ್ಲಿ ಬೆಳೆಯು ತ್ತವೆ ಎಂದು ಈಗಿನ ತಲೆಮಾರಿನವರಿಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೇರಳದ ವೈಯ್ನಾಡಿನಲ್ಲಿರುವ ಒಂದೂ ವರೆ ಎಕರೆ ಭೂಮಿಯಲ್ಲಿ ನಾನು ವಿವಿಧ ಬಗೆಯ ಗೆಡ್ಡೆ, ಗೆಣಸು ಬೆಳೆದಿದ್ದೇನೆ. ಇದ ರೊಂದಿಗೆ ಪಶು ಹಾಗೂ ಕೋಳಿ ಸಾಕಾ ಣಿಕೆ, ಸಾವಯವ ಕೃಷಿ ಪದ್ಧತಿಯಲ್ಲಿ ಹಣ್ಣು- ತರಕಾರಿ ಬೆಳೆಯುತ್ತಿದ್ದೇನೆ. ದೇಶದ ವಿವಿ ಧೆಡೆ ನಡೆದ ಮೇಳದಲ್ಲಿ ಪಾಲ್ಗೊಂಡಿದ್ದೇನೆ. ನಮ್ಮ ತೋಟಕ್ಕೆ ದಿನಕ್ಕೆ 200ರಿಂದ 300 ಮಂದಿ ಭೇಟಿ ನೀಡಿ ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವಿದೇಶಿ ಗರೂ ಬಂದು ಗೆಡ್ಡೆ, ಗೆಣಸುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋ ಧನಾ ನಿರ್ದೇಶಕ ಡಾ.ಎನ್.ಬಸವರಾಜು, `ಗೆಡ್ಡೆ ಗೆಣಸಿನ ಅದ್ಭುತ ಲೋಕ ಪುಸ್ತಕ ವನ್ನು ಬಿಡುಗಡೆ ಮಾಡಿ ಮಾತನಾಡಿ, ಗೆಡ್ಡೆ, ಗೆಣಸುಗಳ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿ ಸಬಹುದು. ಇದು ಅತ್ಯುತ್ತಮ ಆಹಾರ ಪದ್ಧತಿಯಾಗಿದೆ. ಇತ್ತೀಚೆಗೆ ಇವುಗಳ ಮಹತ್ವ ಅರಿತು ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಧಾರವಾಡದ ಅಖಿಲ ಭಾರತ ಗೆಡ್ಡೆ, ಗೆಣಸು ಸಂಶೋಧನಾ ಯೋಜನೆ ಮುಖ್ಯಸ್ಥ ಡಾ.ಕೆ.ರಾಮಚಂದ್ರನಾಯ್ಕ ಮಾತ ನಾಡಿ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಅಂಶವುಳ್ಳ ಏಕೈಕ ಆಹಾರ ಪದಾರ್ಥ ಗೆಡ್ಡೆ, ಗೆಣಸುಗಳಾಗಿವೆ. ರಾಮಾಯಣ ಕಾಲದಿಂದಲೂ ಗೆಡ್ಡೆ, ಗೆಣಸುಗಳನ್ನು ಆಹಾರವಾಗಿ ಉಪ ಯೋಗಿಸುತ್ತಿರುವುದನ್ನು ಕಾಣಬಹುದಾ ಗಿದೆ. ಕಾಡಿಗೆ ಹೋಗಿದ್ದಾಗ ಶ್ರೀರಾಮ ಹಾಗೂ ಸೀತೆಯೂ ಗೆಡ್ಡೆ, ಗೆಣಸನ್ನೇ ತಿಂದಿದ್ದರು. ನಮ್ಮಲ್ಲಿ 30ಕ್ಕೂ ಹೆಚ್ಚು ಗೆಣಸು ಸಿಕ್ಕುತ್ತವೆ ಎಂದು ತಿಳಿಸಿದರು.
ಮೈಸೂರು, ಬಾಗಲಕೋಟೆ, ಧಾರ ವಾಡ, ಮಹಾರಾಷ್ಟ್ರ ಹಾಗೂ ವಿವಿಧೆಡೆ ಯಿಂದ ಬಂದ 15ಕ್ಕೂ ಹೆಚ್ಚು ಗುಂಪಿನ ರೈತರು, ನೊರೆ ಗೆಣಸು, ನರ್ವ ಗೆಣಸು, ಸುವರ್ಣ ಗೆಡ್ಡೆ, ಮುಡೆಗೆಡ್ಡೆ, ಮಂಜು ನೊರೆ, ಕಾಚಾಲು, ಮರಗೆಣಸು, ಸಿಹಿ ಗೆಣಸು ಹಾಗೂ ಕಸವೆ ಗೆಣಸು ಸೇರಿ ದಂತೆ 200ಕ್ಕೂ ಹೆಚ್ಚು ಬಗೆಯ ಬಾರಿ ಗಾತ್ರದ ಗೆಣಸುಗಳನ್ನು ಪ್ರದರ್ಶಿಸಿದರು.

ಬೆಳಗಾವಿಯ ಖಾನಾಪುರ ತಾಲೂಕಿನ ಭಾರತಿ ಪಿ.ಬಡಿಗೇರ ವಿವಿಧ ಗೆಡ್ಡೆ, ಗೆಣಸುಗಳಿಂದ ತಯಾರಿಸಿರುವ ತಿನಿಸು ಗಳ ಪ್ರದರ್ಶನ ಮತ್ತು ಮಾರಾಟ ಮಾಡು ತ್ತಿದ್ದಾರೆ. ಗೆಣಸಿನ ಉಪ್ಪಿನಕಾಯಿ, ಶಾವಿಗೆ, ಪೇಡ, ಕೇಕ್, ಮೈಸೂರು ಪಾಕ್, ಚಕ್ಕುಲಿ ಸೇರಿದಂತೆ ಸುಮಾರು 40 ಬಗೆಯ ತಿನಿಸನ್ನು ಮಾರಾಟ ಮಾಡುತ್ತಿ ದ್ದಾರೆ. ಬೇಕರಿಗಳಿಗೆ ಈ ತಿನಿಸುಗಳನ್ನು ಸರಬರಾಜು ಮಾಡುತ್ತಾ ಮಾರುಕಟ್ಟೆ ವಿಸ್ತರಿಸುತ್ತಿದ್ದಾರೆ. ಸಾಕಷ್ಟು ಮಂದಿ ದೂರ ವಾಣಿ ಮೂಲಕ ಆರ್ಡರ್ ಕೊಟ್ಟು ಮನೆಗೆ ಪಾರ್ಸೆಲ್ ತರಿಸಿಕೊಳ್ಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸಹಜ ಕೃಷಿಕ ಎ.ಪಿ.ಚಂದ್ರಶೇಖರ, ನಬಾರ್ಡ್‍ನ ಜಿಲ್ಲಾ ವಿಕಾಸ ವ್ಯವಸ್ಥಾಪಕ ಎಸ್.ಮಣಿ ಕಂಠನ್, ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯ ಪಿ.ಆಶಾಕುಮಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »