ಫೆ.2ರ ಅಭಿನಂದನಾ ಸಮಾರಂಭಕ್ಕೂ ಬ್ರಾಹ್ಮಣ ಮಹಾಸಭಾಕ್ಕೂ ಸಂಬಂಧವಿಲ್ಲ ಮೈಸೂರು ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸ್ಪಷ್ಟನೆ
ಮೈಸೂರು

ಫೆ.2ರ ಅಭಿನಂದನಾ ಸಮಾರಂಭಕ್ಕೂ ಬ್ರಾಹ್ಮಣ ಮಹಾಸಭಾಕ್ಕೂ ಸಂಬಂಧವಿಲ್ಲ ಮೈಸೂರು ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸ್ಪಷ್ಟನೆ

January 20, 2019

ಮೈಸೂರು: ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಿರುವುದನ್ನು ಸ್ವಾಗತಿಸಿ ಫೆ.2ರಂದು ನಡೆಸಲು ಉದ್ದೇಶಿರುವ ಅಭಿನಂದನಾ ಸಮಾರಂಭಕ್ಕೂ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲÉೀ ಬಿ.ವಿ.ಮಂಜುನಾಥ್ ಅವರು ಪ್ರಸ್ತುತ ಅವಧಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿಲ್ಲ ಹಾಗೂ ಡಾ.ಬಿ.ಆರ್.ನಟರಾಜ ಜೋಯಿಸ್ ಅವರು ಮಹಾಸಭಾದ ವಲಯ ಉಪಾಧ್ಯಕ್ಷರಾಗಿರುವುದಿಲ್ಲ. ಅವರಿಗೂ, ಮಹಾಸಭಾಕ್ಕೂ ಯಾವುದೇ ಸಂಬಂಧ ವಿಲ್ಲ ಎಂದು ಮಹಾಸಭಾ ಸ್ಪಷ್ಟನೆ ನೀಡಿದೆ. ಆದರೂ ಅವರು ಮಹಾಸಭಾದ ಹೆಸರು ಮತ್ತು ವೇದಿಕೆ ಹೆಸರನ್ನು ದುರುಪಯೋಗಪಡಿಸಿಕೊಂಡು ಸುದ್ದಿಗೋಷ್ಠಿ ನಡೆಸಿರುವುದು ಕಾನೂನು ಬಾಹಿರ. ಮುಂಬರುವ ದಿನಗಳಲ್ಲಿ ಮಹಾಸಭಾದ ಚುನಾವಣೆ ನಡೆಯ ಲಿದ್ದು, ಅದರ ಉಪಯೋಗ ಪಡೆಯುವ ಹಿನ್ನೆಲೆಯಲ್ಲಿ ದುರುದ್ದೇಶದಿಂದ ಈ ಇಬ್ಬರು ಮಹಾಸಭಾದ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಒಂದು ವೇಳೆ ಮಹಾ ಸಭಾದ ಹೆಸರಲ್ಲಿ ಅಭಿನಂದನೆ ಸಮಾರಂಭ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವು ದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಮುಖಂಡರಾದ ಅಪೂರ್ವ ಸುರೇಶ್, ಜ್ಯೋತಿ, ಜಯಸಿಂಹ, ಸೌಭಾಗ್ಯ ಮೂರ್ತಿ, ಗೋಪಾಲ ಇದ್ದರು.

Translate »