ರೊಚ್ಚಿಗೆದ್ದ ರೈತರು
ಮೈಸೂರು

ರೊಚ್ಚಿಗೆದ್ದ ರೈತರು

November 20, 2018

ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಭತ್ತ ಖರೀದಿ ಕೇಂದ್ರ ತೆರೆಯ ಬೇಕು, ಕೃಷಿ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಧರಣಿ ಮತ್ತು ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಅಷ್ಟೇ ಅಲ್ಲ, ರೈತ ಮಹಿಳೆ ಬಗ್ಗೆ ನೀಡಿದ ಹೇಳಿಕೆಗೆ ತಕ್ಷಣವೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಇಲ್ಲವೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾ ಗುತ್ತದೆ ಎಂದು ಮುಷ್ಕರ ನಿರತರು ಎಚ್ಚರಿ ಸಿದ್ದಾರೆ. ರೈತರ ಎಚ್ಚರಿಕೆಗೆ ಮಣಿದ ಮುಖ್ಯ ಮಂತ್ರಿ, ಸುದೀರ್ಘ ಪತ್ರಿಕಾ ಹೇಳಿಕೆ ನೀಡಿ ನನ್ನ ಸರ್ಕಾರ ಅನ್ನದಾತನ ಪರ ಎಂದಿದ್ದಾರೆ. ಹೇಳಿಕೆ ನೀಡುವುದಕ್ಕೂ ಮುನ್ನ ಕೆಲವು ರೈತ ಮುಖಂಡರನ್ನು ತಮ್ಮಲ್ಲಿಗೆ ಕರೆಸಿಕೊಂಡು ಸಮಾಲೋಚನೆ ಸಹ ನಡೆಸಿದ್ದಾರೆ. ಆದರೆ, ಮುಖ್ಯಮಂತ್ರಿ ಅವರ ಹೇಳಿಕೆಗೆ ರೈತರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತ ವಾಗಿಲ್ಲ. ರಾಜ್ಯದ ವಿವಿಧ ಮೂಲೆಗಳಿಂದ ವಿಧಾನಸೌಧ ಮುತ್ತಿಗೆ ಹಾಕಿ ತಮ್ಮ ಬೇಡಿಕೆ ಗಳನ್ನು ಈಡೇರಿಸಿಕೊಳ್ಳಲು ಬಂದ ರೈತ ಸಮುದಾಯವನ್ನು ಪೊಲೀಸರು ಫ್ರೀಡಂ ಪಾರ್ಕ್ ಬಳಿಯೇ ತಡೆದು ನಿಲ್ಲಿಸಿದರು.

ಸರ್ಕಾರದ ಈ ಕ್ರಮದಿಂದ ಆಕ್ರೋಶ ಗೊಂಡ ರೈತರು ರಸ್ತೆಯಲ್ಲೇ ಮಲಗಿ ಧರಣಿ ನಡೆಸಲು ಮುಂದಾದಾಗ, ಸಾರ್ವಜನಿಕ ಹಿತದೃಷ್ಟಿಯಿಂದ ಸಂಚಾರಕ್ಕೆ ಅಡ್ಡಿಪಡಿಸಬೇಡಿ ಎಂಬ ಪೊಲೀಸರ ಮನವಿಗೆ ಸ್ಪಂದಿಸಿದ ರೈತರು ಉರಿಬಿಸಿಲಿನಲ್ಲೇ ಪಾದಚಾರಿ ಮಾರ್ಗ ದಲ್ಲಿ ಧರಣಿ ಮುಂದುವರೆಸಿದರು. ಫ್ರೀಡಂ ಪಾರ್ಕ್‍ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿ ತಮ್ಮ ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಧರಣಿ ನಿರತ ರೈತರ ಬೇಡಿಕೆ ಆಲಿಸಲು ಹಾಗೂ ಅವರ ಮನವೊಲಿಸಲು ಆಗಮಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸಚಿವ ಕಾಶೆಂಪೂರ್ ತೆರಳಿದ ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ನಮ್ಮ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಇಲ್ಲಿಗೆ ಬರಲೇಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಅವರ ಜೊತೆ ಮಾತನಾಡಲು ಅವಕಾಶ ನೀಡದಿರುವುದು ಬ್ರಿಟಿಷ್ ಆಡಳಿತದಂತಿದೆ ಎಂದು ಪ್ರತಿಭಟನಾಕಾರರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಾವು ಒಂದು ತಿಂಗಳ ಹಿಂದೆಯೇ ಮನವಿ ಮಾಡಿದ್ದೆವು, ಆದರೆ ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿಲ್ಲ.

ವಿಧಾನಸೌಧಕ್ಕೆ ಶಿಸ್ತಾಗಿ ಬರುತ್ತೇವೆ, ಕರೆದುಕೊಂಡು ಹೋಗಿ, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ, ನಾವು ಇಲ್ಲಿಯೇ ಜಾಂಡ ಹೂಡುತ್ತೇವೆ. ಕಬ್ಬಿನ ಬಾಕಿ ಕೊಡಿಸದಿರುವ ಆಡಳಿತವನ್ನು ಸರ್ಕಾರ ಎನ್ನಲಾಗದು, ನಾವು ಇವರಿಗೆ ಗಡುವು ನೀಡದೆ, ಕೈಮುಗಿಯುತ್ತ ನಿಲ್ಲಬೇಕೆ ಎಂದು ಧರಣಿ ನಿರತ ರೈತರು ಪ್ರಶ್ನಿಸಿದರು. ರಾಜ್ಯದ ಪ್ರಜೆಗಳ ಪಾಲಿಗೆ ತಂದೆ ಸ್ಥಾನದಲ್ಲಿದ್ದುಕೊಂಡು ಮುಖ್ಯಮಂತ್ರಿ ಮಾತನಾಡಬೇಕು, ಆದರೆ, ಪ್ರತಿಭಟನೆ ನಡೆಸುತ್ತಿರುವ ರೈತ ಮಹಿಳೆ ಕುರಿತು ಎಲ್ಲಿ ಮಲಗಿದ್ರಿ ಎಂದು ಅವಹೇಳನಕಾರಿಯಾಗಿ ಮಾತನಾಡಿರುವುದು ದುಃಖಕರ ಸಂಗತಿ. ನಮ್ಮ 30 ಸಮಸ್ಯೆ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇದರ ಬಗ್ಗೆ ಆಲಿಸಲು ರೈತ ಮಕ್ಕಳು ಎನ್ನುವ ನಿಮ್ಮನ್ನು ಭೇಟಿ ಮಾಡಲು ಹಳ್ಳಿಗಳಿಂದ ನಗರಕ್ಕೆ ಬಂದಿದ್ದಾರೆ. ಅವರನ್ನು ಭೇಟಿ ಮಾಡಲು ಬಂದರೆ ನಿಮ್ಮ ಗೌರವ ಹೆಚ್ಚುತ್ತದೆ ಎಂದರು. ಅಷ್ಟೆ ಅಲ್ಲ, ರೈತ ಮಹಿಳೆ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ, ರೈತ ಮುಖಂಡರ ನಾಳಿನ ಸಭೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಸರ್ಕಾರಕ್ಕೆ 15 ದಿನ ಗಡುವು

ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ, ಕಬ್ಬಿನ ಬಾಕಿ ಬಿಡುಗಡೆ ಹಾಗೂ ಸಾಲ ಮನ್ನಾ ಸೇರಿದಂತೆ ತಮ್ಮ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ರೈತರು ಹಿಂಪಡೆದಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನ ಗಡುವು ನೀಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ಅವರಿಗೆ ನಮ್ಮ 30 ಬೇಡಿಕೆಗಳನ್ನು ತಿಳಿಸಿ ದ್ದೇವೆ. 15 ದಿನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದೇವೆ. ಈಡೇರಿಸದಿದ್ದರೆ ಮತ್ತೆ ಹೋರಾಟ ಮುಂದುವರೆ ಸುತ್ತೇವೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಬೀದಿಗಿಳಿದಿದ್ದ ರೈತರ ಹೋರಾಟ ಇಂದು ಶಕ್ತಿ ಕೇಂದ್ರ ವಿಧಾನಸೌಧಕ್ಕೂ ಬಂದು ತಲುಪಿತ್ತು. ನಗರದ ರೈಲು ನಿಲ್ದಾಣ ದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೆÇಲೀಸರು ರೈತರನ್ನು ಸ್ವಾತಂತ್ರ್ಯ ಉದ್ಯಾ ನವನದ ಬಳಿ0iÉುೀ ತಡೆ ಹಿಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದರಿಂದ ಶೇಷಾದ್ರಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಪೆÇಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರೈತರ ಪ್ರತಿಭಟನೆಯ ಬಿಸಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ತಟ್ಟಿದ್ದು, ನಾಳೆ ಮಧ್ಯಾಹ್ನ 12.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಮುಖಂಡರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ರೈತರು ತಾಳ್ಮೆ ಕಳೆದುಕೊಳ್ಳ ಬಾರದು. ಸಾಲ ಮನ್ನಾ ಜಾರಿಗೆ ಇನ್ನಷ್ಟು ಕಾಲಾವಕಾಶ ಬೇಕು. ಸಾಲ ಮನ್ನಾದಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುವುದಿಲ್ಲ. ಆದರೆ ಸಾಲ ಮುಕ್ತರಾಗುವುದರಿಂದ ಹೊಸತನ ಬರುತ್ತದೆ ಎಂದು ಸಿಎಂ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »