ಪರಿಹಾರಕ್ಕೆ ಆಗ್ರಹಿಸಿ ರೈತರ ಹೋರಾಟ ಸಮಿತಿ ಪ್ರತಿಭಟನೆ
ಹಾಸನ

ಪರಿಹಾರಕ್ಕೆ ಆಗ್ರಹಿಸಿ ರೈತರ ಹೋರಾಟ ಸಮಿತಿ ಪ್ರತಿಭಟನೆ

July 10, 2018

ಹಾಸನ: ನಾಲೆಗಳ ನಿರ್ಮಾಣ ಹಂತದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೇಮಾವತಿ ಮತ್ತು ಯಗಚಿ ನಾಲೆಗಾಗಿ ಜಮೀನು ಕಳೆದುಕೊಂಡ ರೈತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್. ವೃತ್ತದ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾ ಯಿಸಿದರು. ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಹಾಸನ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ನಾಲೆ ನಿರ್ಮಾಣ ಹಂತದಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ಥರು 20 ವರ್ಷಗಳಿಂದ ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದರೂ ವಿಶೇಷ ಭೂಸ್ವಾಧೀನಾ ಧಿಕಾರಿ ಬಿ.ಎ.ಜಗದೀಶ್ ಅವರು ಪರಿಹಾರ ವಿತರಿಸದೆ ಸತಾಯಿಸುತ್ತಿದ್ದಾರೆ. ಇದರಿಂದ ಸಂತ್ರಸ್ಥ ರೈತರಿಗೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ರೈತರ ಬೇಡಿಕೆಯನ್ನು ನಿರ್ಲಕ್ಷಿಸಿ ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಪರಿಹಾರಕ್ಕಾಗಿ ಭೂಸ್ವಾಧೀನಾಧಿ ಕಾರಿ ಕಚೇರಿಗೆ ತೆರಳಿದರೆ, ಗೌರವ ನೀಡದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಬಗ್ಗೆ ಸಚಿವ ರೇವಣ್ಣ ಅವರ ಗಮನಕ್ಕೆ ತಂದ್ದರಿಂದ ಜಿಪಂ ಪ್ರಗತಿ ಪರಿಶೀಲನಾ ಸಭೆ ವೇಳೆಯಲ್ಲಿ ಜಗದೀಶರನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಪರಿಹಾರ ನೀಡು ವಂತೆ ಸೂಚಿಸಿದ್ದರು. ಆದರೂ ಇದುವರೆಗೂ ಗಮನ ಹರಿಸದೆ ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದರು. ಭೂಮಿಯ ಪರಿಹಾರ ಸಂಬಂಧ ನ್ಯಾಯಾಲಯ ಆದೇಶ ಕೂಡ ಪಾಲಿಸದೆ ಸರ್ಕಾರದಿಂದ ಬಂದ 10 ಕೋಟಿ ರೂ.ಗಳನ್ನು ಹಾಗೆಯೇ ಇಟ್ಟು ಕೊಂಡು ರೈತರಿಗೆ ವಂಚಿಸಿದ್ದರು. ಇವರನ್ನು ಚುನಾವಣೆ ಸಂದರ್ಭದಲ್ಲಿ ವರ್ಗಾಯಿಸಿ ಅವರ ಸ್ಥಾನಕ್ಕೆ ರವಿಚಂದ್ರನಾಯ್ಕರನ್ನು ನಿಯುಕ್ತಿಗೊಳಿಸಲಾಗಿತ್ತು. ಇವರು ಪ್ರಾಮಾಣಿಕವಾಗಿ 10 ಕೋಟಿ ರೂ.ಗಳನ್ನು ನ್ಯಾಯಾಲಯಕ್ಕೆ ಠೇವಣಿ ಇಟ್ಟು ಸಹಕಾರ ನೀಡಿದರು. ಚುನಾವಣೆಯ ನಂತರ ಮತ್ತೆ ಇಲ್ಲಿಗೆ ಮರು ವರ್ಗಾವಣೆಗೊಂಡು ಬಂದ ರೈತರ ಬಗ್ಗೆ ಕಾಳಜಿ ಇಲ್ಲದ ಜಗದೀಶ್ ಭೂ ಪರಿಹಾರ ವಿತರಿಸುವಲ್ಲಿ ವಿಫಲ ರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಳಹಂತದ ನ್ಯಾಯಾಲಯದ ಆದೇಶ ದಂತೆ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿ ರೈತರಿಗೆ ಸಕಾಲದಲ್ಲಿ ಪರಿಹಾರ ದೊರಕಿಸಿಕೊಡುವ ಜವಾಬ್ದಾರಿ ನಿರ್ವ ಹಿಸದೆ ಜಗದೀಶ್ ರೈತರಿಗೆ ಪರಿಹಾರ ಸಿಗದ ರೀತಿಯಲ್ಲಿ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ರೈತರ ವಿರುದ್ಧ ಹಗೆತನ ಸಾಧಿಸುವ ಹಠಮಾರಿ ಧೋರಣೆ ತೋರಿದ್ದಾರೆ. ನ್ಯಾಯಾ ಲಯಕ್ಕೂ ಸರಿಯಾಗಿ ಹಾಜರಾಗದೆ ಹಲವು ನಿಂದನೆ ಪ್ರಕರಣಗಳಿಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಸರ್ಕಾರ, ನ್ಯಾಯಾಲಯ ಹಾಗೂ ಸಚಿವರು ಸೂಚನೆ ನೀಡಿದರೂ ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಿ ರುವ ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧ ಕ್ರಮ ಕೈಗೊಂಡು ತಕ್ಷಣ ಬೇರೆಡೆಗೆ ವರ್ಗಾ ಯಿಸಿ, ರೈತರ ಬಾಕಿ ಪರಿಹಾರ ಹಣವನ್ನು ಕೂಡಲೇ ವಿತರಿಸಲು ಡಿಸಿ ಮುಂದಾಗಬೇಕು. ಹೇಮಾವತಿ ಜಲಾಶಯ ಯೋಜನೆಯ ಕಚೇರಿಯಲ್ಲಿ ಭೂ ಮಂಜೂರಾತಿ ಮತ್ತು ಪರಿಹಾರ ವಿತರಣೆಯಲ್ಲಿನ ಭ್ರಷ್ಟಾಚಾರ ಹೆಚ್ಚಿದ್ದು, ಶೀಘ್ರವೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಮಯಪ್ಪ ಗೌಡ, ಸಮಿತಿ ಸದಸ್ಯರು ಬಸವರಾಜು, ಪುಟ್ಟಸ್ವಾಮಿ, ಧರ್ಮಣ್ಣ, ನಿಂಗೇಗೌಡ, ಪ್ರಕಾಶ್ ಇತರರಿದ್ದರು.

Translate »