ಚಾಮರಾಜನಗರ: ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ ಜನಪರವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ದರೆ. ಈ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ ಎಂದು ಆರೋಪಿಸಿ ರೈತರು ನಗರ ದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಸಂಭ್ರಮ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾ ರದ ಬಜೆಟ್ ಜನಪರವಾಗಿದೆ. ರೈತರು ಹಾಗೂ ಬಡವರ ಪರವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯ ಕರ್ತರು ಸಂಭ್ರಮಾಚರಣೆ ಮಾಡಿದರು.
ಇಲ್ಲಿನ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ಪಟಾಕಿ ಸಿಡಿಸಿದರು. ನಂತರ ಸಿಹಿ ವಿತರಿಸಿ ಸಂಭ್ರಮ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ಎಲ್ಲಾ ವರ್ಗದ ಜನ ರಿಗೆ ಅನುಕೂಲ ಕಲ್ಪಿಸಿದೆ. ಸೈನಿಕರಿಗೆ, ರೈತ ರಿಗೆ, ಬಡವರಿಗೆ ಹಾಗೂ ಎಲ್ಲರಿಗೂ ಅನು ಕೂಲ ಕಲ್ಪಿಸುವ ಬಜೆಟ್ ಇದಾಗಿದೆ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ನಾಗೇಂದ್ರಸ್ವಾಮಿ, ಪುಟ್ಟರಸು, ಕಾರ್ಯದರ್ಶಿ ಎಂ.ಎಸ್.ಪೃಥ್ವಿರಾಜ್, ನಗರ ಸಭಾ ಸದಸ್ಯ ರಾಘವೇಂದ್ರ, ಮುಖಂಡ ರಾದ ನಾಗೇಶ್ ನಾಯಕ, ಚಂದ್ರಶೇಖರ್, ಪುರುಷೋತ್ತಮ್, ಪ್ರಶಾಂತ್, ಮಹೇಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರೈತರ ಪ್ರತಿಭಟನೆ: ಕೇಂದ್ರ ಸರ್ಕಾರ ಮಂಡಿ ಸಿದ ಬಜೆಟ್ ರೈತ ವಿರೋಧಿ ಹಾಗೂ ಬಡ ವರ ವಿರೋಧಿ ಬಜೆಟ್ ಆಗಿದೆ ಎಂದು ಆರೋಪಿಸಿ ರೈತ ಸಂಘ ಈ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಭುವ ನೇಶ್ವರಿ ವೃತ್ತದವರೆಗೆ ಪ್ರತಿಭಟನೆ ನಡೆಸಿದ ರೈತರು, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆಗ ಳನ್ನು ಕೂಗಿದರು. ಕಸ ಸಾಗಿಸುವ ಟ್ರಿಲ್ಲರ್ ನಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರ ಇರಿಸುವ ಮೂಲಕ ಕೇಂದ್ರ ಸರ್ಕಾರದ ಬಜೆಟ್ ಕಸಕ್ಕೆ ಸಮಾನ ಎಂದು ಘೋಷಣೆ ಕೂಗಿ ಆಕ್ರೋಶ್ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಸಣ್ಣ ಹಿಡುವಳಿ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡಲಾಗುವುದು ಎಂದು ಘೋಷಿ ಸಿದೆ. ಈ ಪ್ರಕಾರ ರೈತರಿಗೆ ತಿಂಗಳಿಗೆ 500 ರೂ. ದಿನಕ್ಕೆ 17 ರೂ. ಬಂದಾಂ ತಾಯಿತು. ಇದು ರೈತರಿಗೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆ ಎಂದು ವ್ಯಂಗ್ಯವಾಡಿದರು. ರೈತರಿಗೆ ಅನುಕೂಲ ಆಗಲಿರುವ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕಾಗಿತ್ತು. ಬೆಳೆಗಳಿಗೆ ವಿಮಾ ನೀತಿಯನ್ನು ಜಾರಿಗೊಳಿಸಬೇಕಾಗಿತ್ತು. ರೈತರು ಕಷ್ಟಪಟ್ಟು ಬೆಳೆಯುತ್ತಿರುವ ಬೆಳೆ ಗಳಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳಿಸ ಬೇಕಾಗಿತ್ತು. ಇದ್ಯಾವುದನ್ನೂ ಮಾಡದ ಕೇಂದ್ರ ಸರ್ಕಾರ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್ ಮಂಡಿ ಸಿದೆ ಎಂದು ಆಪಾದಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಡಾ.ಗುರು ಪ್ರಸಾದ್, ಮುಖಂಡರಾದ ಮಾಡ್ರಹಳ್ಳಿ ಮಹದೇವಪ್ಪ, ಅಂಬಳೆ ಶಿವಕುಮಾರ್, ಮಹದೇವು, ಗುರು, ಮಹೇಶ್, ಪುಟ್ಟ ಮಾದು, ಸಿದ್ದಶೆಟ್ಟಿ, ಮಹದೇವಮ್ಮ ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.