ಸರ್ಕಾರ ಪತನದ ಭೀತಿ: ನಾಳೆ ಮತ್ತೆ ಕಾಂಗ್ರೆಸ್ ಶಾಸಕಾಂಗ ಸಭೆ, ವ್ಹಿಪ್ ಜಾರಿ
ಮೈಸೂರು

ಸರ್ಕಾರ ಪತನದ ಭೀತಿ: ನಾಳೆ ಮತ್ತೆ ಕಾಂಗ್ರೆಸ್ ಶಾಸಕಾಂಗ ಸಭೆ, ವ್ಹಿಪ್ ಜಾರಿ

February 7, 2019

ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ, ದೋಸ್ತಿ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಫೆಬ್ರವರಿ 8ರಂದು ಮತ್ತೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಈಗಾಗಲೇ ಮೈತ್ರಿ ಸರ್ಕಾರದ ಜಂಟಿ ಅಧಿವೇಶನ ಮತ್ತು ಬಜೆಟ್ ಕಲಾಪಕ್ಕೆ ಹಾಜ ರಾಗುವಂತೆ ಕಾಂಗ್ರೆಸ್ ಶಾಸಕರಿಗೆ ಮುಖ್ಯ ಸಚೇತಕರು ವ್ಹಿಪ್ ಜಾರಿ ಗೊಳಿಸಿದ್ದರು. ಆದರೂ ಇಂದು ಕಾಂಗ್ರೆಸ್ ಪಕ್ಷದ 7 ಶಾಸಕರು ಸದನಕ್ಕೆ ಗೈರಾಗುವ ಮೂಲಕ ವ್ಹಿಪ್‍ನ್ನು ಉಲ್ಲಂಘಿಸಿದ್ದಾರೆ.

ಈ ನಡುವೆ ಮತ್ತೆ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಭೆಗೆ ಹಾಜರಾಗುವಂತೆ ಮತ್ತೆ ವ್ಹಿಪ್ ಜಾರಿ ಮಾಡಿದ್ದಾರೆ. ಫೆ.8ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಅಂದಿನ ಸಭೆಗೂ ಕಾಂಗ್ರೆಸ್ ಶಾಸಕರು ಗೈರಾದರೆ ಬಿಜೆಪಿ ಪ್ರತಿಭಟನೆ ಮುಂದುವರೆಸಿ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲವೆಂದು ಧರಣಿ ನಡೆಸಿ ಬಜೆಟ್ ಮಂಡನೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಅಂದು ಶಾಸಕಾಂಗ ಸಭೆ ಕರೆಯುವ ಮೂಲಕ ಎಲ್ಲಾ ಶಾಸಕರು ಸಭೆಯಲ್ಲಿ ಹಾಜರಾಗುವಂತೆ ನೋಡಿಕೊಳ್ಳುವ ತಂತ್ರವಾಗಿದೆ. ಆದರೆ ಜಂಟಿ ಅಧಿವೇಶನಕ್ಕೆ ಹಾಜರಾಗದ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

Translate »