ಸುತ್ತೂರು ಜಾತ್ರೆಗೆ ಭಕ್ತಿಪೂರ್ವಕ ತೆರೆ
ಮೈಸೂರು

ಸುತ್ತೂರು ಜಾತ್ರೆಗೆ ಭಕ್ತಿಪೂರ್ವಕ ತೆರೆ

February 7, 2019

ನಂಜನಗೂಡು: ಶ್ರೀಕ್ಷೇತ್ರದಲ್ಲಿ 6 ದಿನಗಳಿಂದ ಅದ್ಧೂರಿಯಾಗಿ ಜರುಗಿದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವ ಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಇಂದು ಭಕ್ತಿಪೂರ್ವಕವಾಗಿ ತೆರೆ ಬಿದ್ದಿತು.

ಫೆ.1ರಂದು ಪ್ರಾರಂಭಗೊಂಡ ವೈಭವದ ಜಾತ್ರಾ ಮಹೋತ್ಸವಕ್ಕೆ ಇಂದು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಹೊಸ ಗದ್ದುಗೆ ಯಿಂದ ಹಳೇ ಗದ್ದುಗೆಗೆ ಮೆರವಣಿಗೆ ಯಲ್ಲಿ ಕೊಂಡೊಯ್ಯುವ ಮೂಲಕ ತೆರೆ ಎಳೆಯಲಾಯಿತು. 6 ದಿನಗಳ ಕಾಲ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ನಾಡಿನ ಎಲ್ಲೆಡೆಯಿಂದ ಆಗಮಿಸಿದ್ದ ಮಠಾಧೀಶರು, ಹರಗುರು ಚರಮೂರ್ತಿ ಗಳು, ಜನಪ್ರತಿನಿಧಿಗಳು, ವಿವಿಧ ರಂಗಗಳ ಸಾಧಕರು, ಕಲಾವಿದರು ಸೇರಿದಂತೆ ಲಕ್ಷಾಂತರ ಮಂದಿ ಭಕ್ತರು ಸುತ್ತೂರು ಜಾತ್ರೆ ಸೊಬಗನ್ನು ಕಣ್ತುಂಬಿಕೊಂಡರು.

ಆದಿ ಚುಂಚನಗಿರಿಯ ಡಾ.ನಿರ್ಮಲಾ ನಂದನಾಥ ಶ್ರೀಗಳು ಜಾತ್ರೆ ಮೊದಲ ದಿನ ವಸ್ತು ಪ್ರದರ್ಶನ, ಕೃಷಿ ಹಾಗೂ ಸಾಂಸ್ಕøತಿಕ ಮೇಳಕ್ಕೆ ಚಾಲನೆ ನೀಡಿದರು. ಸಾಮೂಹಿಕ ವಿವಾಹಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇನ್‍ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ, ರಾಜ್ಯಮಟ್ಟದ ಭಜನಾಮೇಳ ಉದ್ಘಾ ಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ, ಗೃಹಸಚಿವ ಎಂ.ಬಿ.ಪಾಟೀಲ್, ಚಿತ್ರನಟ ದರ್ಶನ್ ತೂಗುದೀಪ, ರಥೋ ತ್ಸವಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಾಸಕ ಡಾ.ಶಾಮನೂರ್ ಶಿವ ಶಂಕರಪ್ಪ, ಭಜನಾ ಮೇಳ ಸಮಾರೋಪ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕ ಸಚಿವರು, ರಾಜಕೀಯ ಗಣ್ಯರು, ವಿವಿಧ ಮಠಾಧೀ ಶರು, ಸಾಹಿತಿಗಳು ಆಗಮಿಸಿ ಜಾತ್ರೆಯ ಯಶಸ್ವಿಗೆ ಕಾರಣರಾದರು. ಜಾತ್ರೆಯ ಅಂಗ ವಾಗಿ ಸುತ್ತೂರು ಕ್ಷೇತ್ರದಲ್ಲಿ ಜರುಗಿದ ಸಾಮೂ ಹಿಕ ವಿವಾಹ, ಕೃಷಿಮೇಳ, ಶೈಕ್ಷಣಿಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನ, ರಾಜ್ಯ ಮಟ್ಟದ ಭಜನಾ ಮೇಳ, ದೋಣಿ ವಿಹಾರ, ದೇಸಿ ಆಟಗಳು, ರಂಗೋಲಿ, ಸೋಬಾನೆ ಪದ, ಚಿತ್ರಕಲೆ ಹಾಗೂ ಗಾಳಿಪಟ ಸ್ಪರ್ಧೆ, ನಾಟಕ ಪ್ರದ ರ್ಶನ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಭಾರತದ ಸಾಂಸ್ಕøತಿಕ ಪರಂಪರೆಯನ್ನು ಪ್ರತಿಬಿಂಬಿಸಿದವು.

ಜಾತ್ರೆಗೆ ಆಗಮಿಸಿದ ಕಲಾವಿದರಿಗೆಲ್ಲಾ ದಾಸೋಹ, ಆಶ್ರಯ ಸೇರಿದಂತೆ ಬಹು ಮಾನ, ಪ್ರಯಾಣ ಭತ್ಯೆ ನೀಡಿ ಪ್ರೋತ್ಸಾಹಿ ಸಿದ್ದು ಶ್ರೀಮಠದ ಕಲಾಪ್ರೇಮಕ್ಕೆ ಸಾಕ್ಷಿಯಾ ಯಿತು. ಗ್ರಾಮೀಣ ಪ್ರದೇಶಗಳ ಕಲಾವಿದರಿ ಗಂತೂ ಸುಗ್ಗಿಯೋ ಸುಗ್ಗಿ. ತಮ್ಮ ಪ್ರತಿಭೆಯನ್ನು ಸಾದರ ಪಡಿಸಲು ಸೂಕ್ತ ವೇದಿಕೆ ದೊರೆತ ಸಂತಸ ಅವರ ಮುಖಗಳಲ್ಲಿ ಕಂಡುಬಂತು. ಕಲಾಸೇವೆಯ ಜೊತೆಗೆ ಗುರುಗಳ ಆಶೀರ್ವಾ ದಕ್ಕೆ ಪಾತ್ರವಾದ ತೃಪ್ತಿ ಅವರದಾಗಿತ್ತು.
ಎಲ್ಲಾ ಜನಾಂಗ, ಧರ್ಮದವರಿಗೂ ಆದ್ಯತೆ, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯ ಕ್ರಮ, ರೈತರ ಬಗ್ಗೆ ವಿಶೇಷ ಕಾಳಜಿ, ಜಾತ್ರೆಗೆ ಆಗಮಿಸಿದವರಿಗೆಲ್ಲಾ ಭೂರೀ ಭೋಜನ, ಉತ್ತಮ ವಸತಿ ವ್ಯವಸ್ಥೆ, ನೈರ್ಮಲ್ಯಕ್ಕೆ ಆದ್ಯತೆ, ಅದ್ಧೂರಿಯ ಜಾತ್ರೆ ನಡೆಸಿದ ಹೆಗ್ಗಳಿಕೆ ಸುತ್ತೂರು ಮಠದ್ದಾಗಿದೆ.

Translate »