ಧಾರ್ಮಿಕ ಸಮಾರಂಭದಲ್ಲಿ ಸಮಾರೋಪ
ಮೈಸೂರು

ಧಾರ್ಮಿಕ ಸಮಾರಂಭದಲ್ಲಿ ಸಮಾರೋಪ

February 7, 2019

ಸುತ್ತೂರು: ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯ ಅಂತಿಮ ದಿನವಾದ ಬುಧವಾರ ನಡೆದ ಧಾರ್ಮಿಕ ಸಮಾರಂಭದಲ್ಲಿಯೇ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನದ ಸಮಾರೋಪವೂ ಜರುಗಿತು.

ಸಮಾರಂಭದಲ್ಲಿ ಬೆಂಗಳೂರಿನ ಪ್ರಾದೇಶಿಕ ಜನಸಂಪರ್ಕ ಕಾರ್ಯಾ ಲಯದ ಹೆಚ್ಚುವರಿ ಮಹಾನಿರ್ದೇಶಕ ಎಂ.ನಾಗೇಂದ್ರಸ್ವಾಮಿ ಮಾತನಾಡಿ, ಸುತ್ತೂರು ಜಾತ್ರೆಯು ಮಹಾ ಕಾರ್ಯಾ ಗಾರವಾಗಿ ಪರಿವರ್ತನೆಗೊಂಡು ಸಮಾಜದ ಅಭಿವೃದ್ಧಿಗೆ ಕಾರಣವಾಗು ತ್ತಿದೆ ಎಂದು ಬಣ್ಣಿಸಿದರು.

ಮುಂದಿನ ವರ್ಷದಿಂದ ಬಾಹ್ಯಾ ಕಾಶ ಸಂಸ್ಥೆ ಇಸ್ರೋ ಕೂಡ ಇಂತಹ ಸಮಾರಂಭದಲ್ಲಿ ಭಾಗವಹಿಸಲಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ವ್ಯವಸ್ಥೆಯನ್ನು ನಮ್ಮ ಇಲಾಖೆ ಮಾಡಲಿದೆ ಎಂದರು.

ರಾಜ್ಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, ರಾಕ್ಷಸಿ ಮನೋಭಾವವಿರುವ ಸರ್ಕಾರಿ ಯೋಜ ನೆಗಳಿಂದ ಜನ ಸಾಮಾನ್ಯರಿಗೆ ಪ್ರಯೋ ಜನವಾಗುವುದಿಲ್ಲ. ಅನ್ನ, ಆರೋಗ್ಯದ ವಸ್ತುಗಳಿಗೆ ಜಿಎಸ್‍ಟಿಯಿಂದ ವಿನಾಯಿತಿ ಇರಬೇಕು. ಜನಸಾಮಾನ್ಯರಿಗೆ ಅನುಕೂಲ ವಾಗುವ `ಯಶಸ್ವಿನಿ ಯೋಜನೆ’ ಮತ್ತೆ ಜಾರಿಗೆ ತರಬೇಕು. ಸರ್ಕಾರಗಳು ಸುತ್ತೂರು ಮಠದಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಯಾವ ರೀತಿ ನಿರ್ವಹಣೆ ಮಾಡಬೇಕೆಂಬುದನ್ನು ಕಲಿಯಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಐಪಿಎಸ್ ಅಧಿಕಾರಿ ಡಾ.ವೇದಮೂರ್ತಿ ಮಾತನಾಡಿ, ಇಲ್ಲಿ ಶರಣರು ನೆಲೆಸಿರುವುದರಿಂದಲೇ ಬೇರೆ ರಾಷ್ಟ್ರಗಳು, ಪ್ರಾಂತ್ಯಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ, ವ್ಯವಸ್ಥೆ ಅಚ್ಚುಕಟ್ಟಾಗಿದೆ. ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಕೋರಿದರು.

ಮಹಾ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ ಸೂರಮಠ ಮಾತನಾಡಿದರು. ಸಮಾ ರಂಭದ ಸಾನಿಧÀ್ಯ ವಹಿಸಿದ್ದ ರಾಮಕೃಷ್ಣ ಮಠದಸ್ವಾಮಿ ಆತ್ಮಜ್ಞಾನಂದ ಮಹಾ ರಾಜ್, ಯಡಿಯೂರು ಮಠದ ಡಾ.ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿ ಗಳು ಆಶೀರ್ವಚನ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ದಿ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಟಿ.ಸಿ ಪೂರ್ಣಿಮಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಸಭೆಯಲ್ಲಿ ಕೃಷಿ ಮೇಳ, ವಸ್ತು ಪ್ರದರ್ಶನ ಮುಂತಾದ ವುಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ, ಫಲಕಗಳನ್ನು ವಿತರಿಸಲಾಯಿತು.

Translate »