ಶೀಘ್ರವೇ ಕಾಚೀಗೂಡ-ಬೆಂಗಳೂರು ರೈಲು ಮೈಸೂರಿಗೆ ವಿಸ್ತರಣೆ
ಮೈಸೂರು

ಶೀಘ್ರವೇ ಕಾಚೀಗೂಡ-ಬೆಂಗಳೂರು ರೈಲು ಮೈಸೂರಿಗೆ ವಿಸ್ತರಣೆ

February 7, 2019

ನವದೆಹಲಿ: ಕಾಚೀಗೂಡ-ಬೆಂಗ ಳೂರು ನಡುವೆ ಸಂಚರಿಸುತ್ತಿರುವ ಡೈಲಿ ಎಕ್ಸ್‍ಪ್ರೆಸ್ ಟ್ರೈನನ್ನು ಮೈಸೂರುವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂಸದ ಪ್ರತಾಪ್ ಸಿಂಹ ಅವರಿಗೆ ಭರವಸೆ ನೀಡಿದ್ದಾರೆ.

ಬುಧವಾರ ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾ ಸೋದ್ಯಮ ಹಾಗೂ ಕೈಗಾರಿಕೋದ್ಯಮದ ಅಭಿವೃದ್ಧಿ ಹಾಗೂ ಪ್ರತಿನಿತ್ಯ ಪ್ರಯಾಣಿ ಸುವ ಪ್ರಯಾಣಿಕರ ಅನುಕೂಲ ದೃಷ್ಟಿ ಯಿಂದ ಕಾಚೀಗೂಡ-ಬೆಂಗಳೂರು ಟ್ರೈನ್‍ನ್ನು ಮೈಸೂರುವರೆಗೆ ವಿಸ್ತರಿಸ ಬೇಕೆಂದು ಮನವಿ ಸಲ್ಲಿಸಿದರು.

ಸಂಸದರ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಇನ್ನೆರಡು ದಿನಗಳಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅನುಮೋದನೆ ನೀಡುವುದಾಗಿ ತಿಳಿಸಿದರಲ್ಲದೆ, ಇದು ಕಾರ್ಯಗತಗೊಳ್ಳಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

Translate »