ಸಾಹಿತ್ಯ ಸೇವೆಯಲ್ಲಿರುವವರು ರಾಜಕಾರಣ ಮಾಡಬಾರದು
ಮೈಸೂರು

ಸಾಹಿತ್ಯ ಸೇವೆಯಲ್ಲಿರುವವರು ರಾಜಕಾರಣ ಮಾಡಬಾರದು

February 7, 2019

ಮೈಸೂರು: ರಾಷ್ಟ್ರಕವಿ ಕುವೆಂಪು ಹೇಳಿದ್ದ ರಮ್ಯ, ನವ್ಯ, ಬಂಡಾಯ ಸಾಹಿತ್ಯವೆಂಬುದೇ ಇಂದು ಎಡ-ಬಲ ವೆಂದು ಬದಲಾಗಿದೆ. ಸಾಹಿತ್ಯ ಸೇವೆ ಯಲ್ಲಿರುವವರು ರಾಜಕಾರಣ ಮಾಡಬಾ ರದು ಎಂದು ಹೆಸರಾಂತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಕಲಾಮಂದಿರದಲ್ಲಿ ಜನಚೇತನ ಟ್ರಸ್ಟ್ ಮತ್ತು ಗ್ರಾಮೀಣ ಟ್ರಸ್ಟ್ ಜಂಟಿ ಆಶ್ರಯ ದಲ್ಲಿ `ಕಾಲಕ್ಕೆ ಕನ್ನಡಿ-ವಿಶ್ವಕವಿ ಕುವೆಂಪು’ ಶೀರ್ಷಿಕೆಯಡಿ ಬುಧವಾರ ಹಮ್ಮಿ ಕೊಂಡಿದ್ದ ಒಂದು ದಿನದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಯಾವುದಾದರೂ ಸಮಸ್ಯೆ ಬಂದರೆ ಸಾಹಿತಿಗಳ ಮತ್ತು ಸ್ವಾಮೀಜಿಗಳ ಸಲಹೆ ಕೇಳುತ್ತೇವೆ. ಕಾರಣ ಅವರು ಸಮಾಜವನ್ನು ಅರಿತಿದ್ದಾರೆ ಎಂದು. ಆದರೆ, ಅವರೇ ಸಮಾಜದ ದಿಕ್ಕು ತಪ್ಪಿಸು ವಂತೆ ನಡೆದರೆ ಸಾಮಾನ್ಯರ ಸ್ಥಿತಿ ಶೋಚ ನೀಯವಾಗುತ್ತದೆ. ಅದರಲ್ಲಿಯೂ ಇಂದು ಗೌರವಯುತ ರಾಜಕಾರಣ ಕಣ್ಮರೆ ಯಾಗಿದೆ ಎಂದು ಹೇಳಿದರು.
20ನೇ ಶತಮಾನದ ಶ್ರೇಷ್ಠ ಕವಿ ಕುವೆಂಪು. ಅವರಷ್ಟು ಸಾರ್ವಜನಿಕ ಗೌರವವನ್ನು ಪಡೆದವರು ಮತ್ತಾರೂಇಲ್ಲ. ಅಂತಹ ಘನ ವ್ಯಕ್ತಿತ್ವಕ್ಕೆ ಪಾತ್ರರಾಗಿದ್ದರು. ಕುವೆಂಪು ಅವರ ವ್ಯಕ್ತಿತ್ವ ಅವರ ಸಾಹಿತ್ಯ ಕ್ಕಿಂತಲೂ ಮಿಗಿಲಾದುದು. ಜಗತ್ತನ್ನೇ ಪ್ರಭಾವಿಸಿದ ಚೇತನ ಕುವೆಂಪು. ಅವರ ಬಗ್ಗೆ ಓದುವ, ಅರ್ಥಮಾಡಿಕೊಳ್ಳುವ ಕೆಲಸ ವಾಗಬೇಕು. ಆದರೆ, ಜನರಿಗೆ ಓದುವ ಅಸಕ್ತಿ ಬರಬೇಕಾದರೆ ದೃಷ್ಟಿಕೋನಗಳು ಬದಲಾಗಬೇಕು ಎಂದು ಹೇಳಿದರು.

ಜಗತ್ತಿನಲ್ಲಿ ಪ್ರಜ್ಞಾವಂತರ ಸಮುದಾಯ ತುಂಬಾ ಕಡಿಮೆ ಇರುತ್ತದೆ. ಆದರೆ, ನಾವು ಜಗತ್ತನ್ನೇ ಪ್ರಭಾವಿಸುತ್ತೇವೆ ಎಂದು ಅವರಿಗೇ ಗೊತ್ತಿರುವುದಿಲ್ಲ. ಅಂಥವರಲ್ಲಿ ಒಬ್ಬರಾದ ಕುವೆಂಪು ಒಂದು ಶತಮಾನದ ಕಾಲ ಸಮಾಜವನ್ನು ಪ್ರಭಾವಿಸಿದ್ದು, ಮತ್ತೊಂದು ಶತಮಾನವನ್ನೂ ಪ್ರಭಾವಿಸುವ ಚೇತನವಾಗಿದ್ದಾರೆ ಎಂದು ಬಣ್ಣಿಸಿದರು.

ಜಗತ್ತಿನಲ್ಲಿ ಒಳ್ಳೆಯದೇ ಇದೆ, ನೋಡುವ ದೃಷ್ಟಿ ಬದಲಾಗಬೇಕು ಎಂಬುದನ್ನು ಕುವೆಂಪು ತಮ್ಮ ಬರವಣಿಗೆ ಮೂಲಕ ತಿಳಿಸಿದ್ದಾರೆ. ಅವರು, ರಾಮಾಯಣದಲ್ಲಿ ಯಾವ ಮಹಿಳೆಯರೂ ಪತಿವ್ರತೆಯರಿಲ್ಲ ಎಂದು ನಂಬಿದ್ದ ರಾವಣನೂ ಸೀತೆಯಲ್ಲಿ ತಾಯಿಯನ್ನು ಕಂಡನು ಎಂದು ವರ್ಣಿ ಸಿದ್ದಾರೆ. ಕುರೂಪಿಯಾಗಿದ್ದ ಮಂಥರೆಯು ಕೈಕೆ ಹಾಗೂ ಭರತನನ್ನು ತನ್ನ ಮಕ್ಕಳಂತೆ ಸಾಕಿದ್ದರಿಂದ ರಾಮ ಅವಳ ಪ್ರಪಂಚದಲ್ಲಿ ಕಾಣಿಸಲಿಲ್ಲ. ಆದರೆ, ಮುಂದೆ ತನ್ನ ತಪ್ಪನ್ನು ಮಂಥರೆ ಅರಿಯುತ್ತಾಳೆ ಎಂಬ ಕರುಣಾಜನಕ ಸನ್ನಿವೇಶಗಳನ್ನು ಕುವೆಂಪು ಸೃಷ್ಟಿಸಿದ್ದಾರೆ ಎಂದರು.

ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ವಿಭಾಗದ ನಿರ್ದೇಶಕ ಡಾ.ಎಸ್.ತುಕಾ ರಾಮ್ ಮಾತನಾಡಿ, ಸಾಹಿತ್ಯ ಬೋಧನೆ ಮಾಡುವ ಉಪನ್ಯಾಸಕರು, ಶಿಕ್ಷಕರು ಕುವೆಂಪು ಅವರ ಲೇಖನಗಳನ್ನು ಅಧ್ಯಯನ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ ಲೇಖಕರಾದ ಡಾ.ಮಾ. ರಾಮಕೃಷ್ಣ, ಡಾ.ಡಿ.ಬೆಟ್ಟೇಗೌಡ, ಡಾ.ಪಿ. ಭಾರತೀದೇವಿ, ಡಾ.ಕೆ.ಪಿ.ಪ್ರತಿಮಾ, ಡಾ.ಸಿ.ಎಸ್.ಕೆಂಡಗಣ್ಣೇಗೌಡ, ಡಾ.ಕೆ. ಚಂದ್ರಕಾಂತ್, ಕೆ.ಎಂ.ಸವಿತ, ಡಾ.ಚಿತ್ರ ಲಿಂಗಯ್ಯ, ಡಾ.ಹೆಚ್.ಸಿ.ಭೀಮೇಶ್, ಶಿವಣ್ಣೇಗೌಡ, ಡಾ.ಎಂ.ಎಂ.ಕವಿತ, ಡಾ.ಹೆಚ್.ಉಮಾಶಂಕರ್ ಹಾಗೂ ಡಾ.ಸಿ.ಸರ್ವಮಂಗಳ ಅವರನ್ನು ಸನ್ಮಾನಿ ಸಲಾಯಿತು.

ವೇದಿಕೆಯಲ್ಲಿ ಸಾಹಿತಿ ತಾರಿಣಿ ಚಿದಾನಂದ, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ರಾಜು ಬಿ.ಕನ್ನಲಿ, ಡಾ.ಹೊಂಬಯ್ಯ ಹೊನ್ನಲಗೆರೆ ಮತ್ತಿತರರು ಉಪಸ್ಥಿತರಿದ್ದರು.

Translate »