ಸಂತೇಮರಹಳ್ಳಿ: ಇಲ್ಲಿನ ಚಾಮರಾಜನಗರ ರಸ್ತೆಯಲ್ಲಿ ಇರುವ ಸಹನ ಪಲ್ಲವಿ ದರ್ಶಿನಿ ಹೋಟೆಲ್ನಲ್ಲಿ ಇಂದು ಆಕಸ್ಮಿಕವಾಗಿ ಬೆಂಕಿ ತಗಲಿ ಹೋಟೆಲ್ ನಲ್ಲಿದ್ದ ವಸ್ತು, ಪದಾರ್ಥಗಳು ಭಸ್ಮವಾಗಿವೆ. ಸಂತೇಮರಹಳ್ಳಿ ಗ್ರಾಮದ ನಿವಾಸಿ ನಾಗಣ್ಣ ಎಂಬುವರು ಈ ಹೋಟೆಲ್ ಮಾಲೀಕರಾಗಿದ್ದು ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದ ಹಾಗೇ ಹೋಟೆಲ್ಗೆ ಬೆಂಕಿ ಬಿದ್ದಿದೆ. ಹೋಟೆಲ್ನಲ್ಲಿದ್ದ ಸಣ್ಣಪುಟ್ಟ ವಸ್ತುಗಳು ಬೆಂಕಿಗೆ ಹಾನಿಗೊಳಗಾಗಿದೆ. ಇದರಿಂದ ಸುಮಾರು 50 ಸಾವಿರ ರೂ.ನಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
