ಜೆಡಿಎಸ್ 93 ಅಭ್ಯರ್ಥಿಗಳಮೊದಲ ಪಟ್ಟಿ ಪ್ರಕಟ
News, Uncategorized

ಜೆಡಿಎಸ್ 93 ಅಭ್ಯರ್ಥಿಗಳಮೊದಲ ಪಟ್ಟಿ ಪ್ರಕಟ

December 20, 2022

ಬೆಂಗಳೂರು, ಡಿ. 19 (ಕೆಎಂಶಿ)-ರಾಷ್ಟ್ರೀಯ ಪಕ್ಷಗಳಿಗೂ ಮೊದಲೇ ಜಾತ್ಯಾ ತೀತ ಜನತಾದಳ 93 ವಿಧಾನಸಭಾ ಕ್ಷೇತ್ರ ಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿ ಸಿದೆ. 2023ರ ಏಪ್ರಿಲ್-ಮೇ ತಿಂಗಳಲ್ಲಿ ಜರುಗಲಿರುವ ಚುನಾವಣೆಗೆ ಮೊದಲ ಹಂತದ ಪಟ್ಟಿಯನ್ನು ಇಂದಿಲ್ಲಿ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ಹಿರಿಯ ಸಹೋದರ ಹೆಚ್.ಡಿ.ರೇವಣ್ಣ ಸೇರಿದಂತೆ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ.

ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟಿದ್ದರೆ, ತಾವು, ಚನ್ನಪಟ್ಟಣದಿಂದ ಮರು ಆಯ್ಕೆ ಬಯಸಿದ್ದಾರೆ. ಹಳೇ ಮೈಸೂರು ಭಾಗದ ಶೇಕಡ 70 ರಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಹಾಲಿ ನಾಲ್ವರು ಶಾಸಕರಿಗೆ ಒಂದಲ್ಲ ಒಂದು ಕಾರಣಕ್ಕೆ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿದ್ದಾರೆ. ಜೆಡಿಎಸ್ ರಾಜ್ಯಾ ಧ್ಯಕ್ಷ ಸಿ.ಎಂ.ಇಬ್ರಾಹಿಂ ಜೊತೆಗೂಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಬಿಡು ಗಡೆ ಮಾಡಿದ ಕುಮಾರಸ್ವಾಮಿ, ಪಕ್ಷದ ಹಿರಿಯ ನಾಯಕ ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದಿಂದಲೂ, ಅವರ ಪುತ್ರ ಹರೀಶ್‍ಗೌಡ ಹುಣಸೂರು ಕ್ಷೇತ್ರ ದಿಂದ ಕಣಕ್ಕಿಳಿಯಲಿದ್ದಾರೆ ಎಂದರು.

ಪಂಚರತ್ನ ಯಾತ್ರೆ ಪೂರ್ಣಗೊಳ್ಳುವ ಮುನ್ನವೇ 2ನೇ ಪಟ್ಟಿ ಬಿಡುಗಡೆ ಮಾಡುವು ದಾಗಿ ತಿಳಿಸಿದ ಕುಮಾರಸ್ವಾಮಿ ನಂತರ ಅಗತ್ಯ ಕಂಡು ಬಂದರೆ 3ನೇ ಪಟ್ಟಿಯು ಹೊರ ಬರಲಿದೆ. ಮಂಡ್ಯ, ಮೈಸೂರು, ಜಿಲ್ಲೆಯಲ್ಲಿನ ಹಾಲಿ ಪಕ್ಷದ ಎಲ್ಲಾ ಶಾಸಕರಿಗೂ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಡ ಲಾಗಿದೆ. ಮಾಜಿ ಸಚಿವ ಸಾ.ರಾಮಹೇಶ್ (ಕೆಆರ್ ನಗರ), ಕೆ.ಮಹದೇವು (ಪಿರಿಯಾ ಪಟ್ಟಣ), ಹೆಚ್.ಟಿ. ಮಂಜುನಾಥ್ (ಕೆಆರ್ ಪೇಟೆ), ಅಶ್ವಿನ್‍ಕುಮಾರ್ (ಟಿ.ನರಸೀಪುರ), ಅಭಿಷೇಕ್ (ವರುಣ), ಮಲ್ಲೇಶ್ (ಕೃಷ್ಣರಾಜ), ಮಂಜುನಾಥ್ (ಹನೂರು), ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ (ಬೀದರ್ ದಕ್ಷಿಣ) ಕ್ಷೇತ್ರದಿಂದ ಕಣಕ್ಕಿಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಉಳಿದಂತೆ ಪಟ್ಟಿ ಇಂತಿದೆ

ನಾಗಮಂಗಲ: ಸುರೇಶ್‍ಗೌಡ

ಶ್ರೀರಂಗಪಟ್ಟಣ: ಡಾ.ರವೀಂದ್ರ ಶ್ರೀಕಂಠಯ್ಯ

ಮಂಡ್ಯ: ಎಂ.ಶ್ರೀನಿವಾಸ್

ಮೇಲುಕೋಟೆ : ಸಿ.ಎಸ್. ಪುಟ್ಟರಾಜು

ಮದ್ದೂರು: ಡಿ.ಸಿ.ತಮ್ಮಣ್ಣ

ಮಳವಳ್ಳಿ: ಡಾ.ಕೆ.ಅನ್ನದಾನಿ
ಮಾಗಡಿ: ಎ.ಮಂಜುನಾಥ್
ನೆಲಮಂಗಲ: ಶ್ರೀನಿವಾಸಮೂರ್ತಿ
ದೇವನಹಳ್ಳಿ: ನಿಸರ್ಗ ನಾರಾಯಣಸ್ವಾಮಿ
ದಾಸರಹಳ್ಳಿ: ಆರ್. ಮಂಜುನಾಥ್
ತುಮಕೂರು: ಗೌರಿಶಂಕರ್
ಪಾವಗಡ: ತಿಮ್ಮರಾಯಪ್ಪ
ಮಧುಗಿರಿ: ವೀರಭದ್ರಯ್ಯ
ಚಿಂತಾಮಣಿ: ಜೆ.ಕೆ. ಕೃಷ್ಣಾರೆಡ್ಡಿ
ಮುಳಬಾಗಿಲು: ಸಮೃದ್ದಿ ಮಂಜುನಾಥ್
ನಾಗಠಾಣ: ದೇವಾನಂದ ಚವಾನ್
ಮಾನ್ವಿ: ರಾಜಾವೆಂಕಟಪ್ಪ ನಾಯಕ
ಸಿಂಧನೂರು: ವೆಂಕಟರಾವ್ ನಾಡಗೌಡ
ಆನೇಕಲ್: ಕೆ.ಪಿ.ರಾಜು
ಬೆಂಗಳೂರು ದಕ್ಷಿಣ: ಪ್ರಭಾಕರ್ ರೆಡ್ಡಿ
ಬಸವನಗುಡಿ: ಅರಮನೆ ಶಂಕರ್
ಗೋವಿಂದರಾಜನಗರ: ಆರ್.ಪ್ರಕಾಶ್
ರಾಜಾಜಿನಗರ: ಗಂಗಾಧರ್‍ಮೂರ್ತಿ
ಗಾಂಧಿನಗರ: ವಿ.ನಾರಾಯಣಸ್ವಾಮಿ
ಹೆಬ್ಬಾಳ: ಮೊಹಿನ್ ಅಲ್ತಾಫ್
ಬ್ಯಾಟರಾಯನಪುರ : ವೇಣುಗೋಪಾಲ್
ಮಾಲೂರು: ಜೆ.ಇ.ರಾಮೇಗೌಡ
ಹೂವಿನ ಹಡಗಲಿ : ಪುತ್ರೇಶ್
ಸಂಡೂರು : ಸೋಮಪ್ಪ
ಚಳ್ಳಕೆರೆ : ರವೀಶ್
ಹೊಸದುರ್ಗ : ಎಂ. ತಿಪ್ಪೇಸ್ವಾಮಿ
ಹರಿಹರ : ಹೆಚ್.ಎಸ್. ಶಿವಶಂಕರ
ದಾವಣಗೆರೆ ದಕ್ಷಿಣ : ಅಮಾನುಲ್ಲಾ
ಚೆನ್ನಗಿರಿ : ಯೋಗೇಶ್
ಹೊನ್ನಾಳಿ : ಶಿವಮೂರ್ತಿಗೌಡ
ಶಿವಮೊಗ್ಗ (ಗ್ರಾ) : ಶಾರದಾ ನಾಯಕ್
ಭದ್ರಾವತಿ : ಶಾರದಾ ಅಪ್ಪಾಜಿಗೌಡ
ತೀರ್ಥಹಳ್ಳಿ : ರಾಜಾರಾಮ್
ಶೃಂಗೇರಿ : ಸುಧಾಕರ್ ಶೆಟ್ಟಿ
ಮೂಡಿಗೆರೆ: ಬಿ.ಬಿ. ನಿಂಗಯ್ಯ
ಚಿಕ್ಕಮಗಳೂರು : ತಿಮ್ಮಶೆಟ್ಟಿ
ಚಿಕ್ಕನಾಯಕನಹಳ್ಳಿ :ಚಿ.ಬಿ.ಸುರೇಶ್ ಬಾಬು
ತುರುವೇಕೆರೆ : ಎಂ.ಟಿ. ಕೃಷ್ಣಪ್ಪ
ಕುಣಿಗಲ್ : ಡಿ. ನಾಗರಾಜಯ್ಯ
ತುಮಕೂರು ನಗರ : ಗೋವಿಂದರಾಜು
ಕೊರಟಗೆರೆ : ಸುಧಾಕರ್ ಲಾಲ್
ಗುಬ್ಬಿ : ನಾಗರಾಜ
ಗೌರಿಬಿದನೂರು : ನರಸಿಂಹಮೂರ್ತಿ
ಬಾಗೇಪಲ್ಲಿ : ನಾಗರಾಜರೆಡ್ಡಿ
ಚಿಕ್ಕಬಳ್ಳಾಪುರ : ಕೆ.ಪಿ. ಬಚ್ಚೆಗೌಡ
ಶಿಡ್ಲಘಟ್ಟ : ರವಿಕುಮಾರ್
ಶ್ರೀನಿವಾಸಪುರ : ಜಿ.ಕೆ. ವೆಂಕಟಶಿವಾರೆಡ್ಡಿ
ಕೆಜಿಎಫ್ : ರಮೇಶ್‍ಬಾಬು
ಬಂಗಾರಪೇಟೆ : ಮಲ್ಲೇಶ್ ಬಾಬು
ಕೋಲಾರ : ಸಿಎಂಆರ್ ಶ್ರೀನಾಥ್
ಖಾನಾಪುರ : ನಾಸೀರ್ ಬಿ ಸಾಬ ಭಗವಾನ
ಬೈಲಹೊಂಗಲ : ಶಂಕರ ಮಾಡಲಗಿ
ಬಾದಾಮಿ :ಮನುಮಂತಪ್ಪ ಮಾವಿನಮರದ
ಮುದ್ದೆಬಿಹಾಳ:ಷೆನ್ನಬಸಪ್ಪ ಎಸ್ ಸೋಲ್ಲಾಪುರ
ದೇವರಹಿಪ್ಪರಗಿ : ರಾಜುಗೌಡ ಪಾಟೀಲ್
ಬಸವನಬಾಗೇವಾಡಿ : ಪರಮಾನಂದ ಬಸಪ್ಪ ತನಿಖೆದಾರ
ಬಬಲೇಶ್ವರ : ಬಸವರಾಜ ಹೊನವಾಡ
ಇಂಡಿ : ಬಿ.ಡಿ. ಪಾಟೀಲ್
ಸಿಂಧಗಿ : ಶಿವಾನಂದ ಪಾಟೀಲ
ಅಪ್ಜಲ್‍ಪುರ : ಶಿವಕುಮಾರ್ ನಾಟೇಕರ್
ಸೇಡಂ : ಬಾಲರಾಜ್ ಗುತ್ತೇದಾರ್
ಚಿಂಚೊಳ್ಳಿ : ಸಂಜೀನ ಯಾಕಾಪುರ
ಆಳಂದ : ಮಹೇಶ್ವರಿ ವಾಲೆ
ಗುರುಮಿಠಕಲ್: ನಾಗನಗೌಡ ಕಂದನೂರು
ಹುಮ್ನಾಬಾದ್ : ಸಿ.ಎಂ. ಫಯಾಜ್
ಬೀದರ್ :ರಮೇಶ್ ಪಾಟೀಲ್
ಬಸವಕಲ್ಯಾಣ :ಎಸ್.ವೈ. ಖಾದ್ರಿ
ರಾಯಚೂರು (ಗ್ರಾ) :ನರಸಿಂಹ ನಾಯಕ್
ದೇವದುರ್ಗ : ಕರೆಮ್ಮಾ ಜಿ ನಾಯಕ್
ಲಿಂಗಸಗೂರು : ಸಿದ್ದು ಬಂಡಿ
ಕುಷ್ಟಗಿ :ತುಕಾರಾಮ್ ಸುರ್ವಿ
ಕನಕಗಿರಿ : ಅಶೋಕ ಉಮ್ಮಲಟ್ಟಿ
ಹಾವೇರಿ : ತುಕಾರಾಮ್ ಮಾಳಗಿ
ಹಿರೇಕೆರೂರು : ಜಯಾನಂದ ಜಾವಣ್ಣನವರ
ರಾಣೆಬೆನ್ನೂರು : ಮಂಜುನಾಥ್ ಗೌಡರ್

Translate »