ಕೊಡಗು ಜಿಲ್ಲೆಯ ಪ್ರವಾಹ, ಭೂಕುಸಿತ ಪ್ರಕರಣ: ಜಿಎಸ್‍ಐ ತಂಡದಿಂದ ಪ್ರಕೃತಿ ವಿಕೋಪ ಕುರಿತು ಅಧ್ಯಯನ
ಕೊಡಗು

ಕೊಡಗು ಜಿಲ್ಲೆಯ ಪ್ರವಾಹ, ಭೂಕುಸಿತ ಪ್ರಕರಣ: ಜಿಎಸ್‍ಐ ತಂಡದಿಂದ ಪ್ರಕೃತಿ ವಿಕೋಪ ಕುರಿತು ಅಧ್ಯಯನ

February 18, 2019

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವನ್ನು ತಳ ಮಟ್ಟದಿಂದ ಅಧ್ಯಯನ ನಡೆಸಲು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿ ಯಾದ ಹಿರಿಯ ಭೂ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಿ ಸಂಶೋಧನೆ ನಡೆಸುತ್ತಿದೆ.

ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿ ರುವ ವಿಜ್ಞಾನಿಗಳು 2 ತಂಡಗಳಾಗಿ ಪ್ರಕೃತಿ ವಿಕೋಪ ಸಂಭವಿಸಿದ ಜಿಲ್ಲೆಯ 34 ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸುತ್ತಿದೆ. ಜಿಎಸ್‍ಐನ ಹಿರಿಯ ಭೂ ವಿಜ್ಞಾನಿಗಳಾದ ಇಝಾಜ್ ಅಹಮದ್, ಜಮೀರ್ ಅಹಮದ್ ಷಾ ಒಂದು ತಂಡವಾಗಿ ಸಂಶೋಧನೆ ನಡೆಸುತ್ತಿದ್ದರೆ, ಸುನಂದ ಬಸು ಮತ್ತು ಅಮರ್ ಜ್ಯೋತಿ ಎಂಬ ಮತ್ತಿಬ್ಬರು ಭೂ ವಿಜ್ಞಾನಿಗಳು ಎರಡನೇ ತಂಡವಾಗಿ ಅಧ್ಯಯನ ದಲ್ಲಿ ತೊಡಗಿದ್ದಾರೆ.

ಕೇರಳದಲ್ಲಿ ಉಂಟಾದ ಪ್ರಕೃತಿ ವಿಕೋಪವನ್ನು ಅಧ್ಯಯನ ನಡೆಸಿ ಜಿಲ್ಲೆಗೆ ಬಂದಿರುವ ವಿಜ್ಞಾನಿ ಗಳು, ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಸಂಭ ವಿಸಿದ ಗ್ರಾಮಗಳನ್ನು 4 ಭಾಗಗಳಾಗಿ ವಿಂಗಡಣೆ ಮಾಡಿ ಅಧ್ಯಯನ ಕೈಗೊಂಡಿದೆ. 1ನೇ ಭಾಗದಲ್ಲಿ ಜೋಡುಪಾಲ, ಮೊಣ್ಣಂಗೇರಿ, 1ನೇ ಮೊಣ್ಣಂ ಗೇರಿ, ಮದೆನಾಡು, ಕಾಟಕೇರಿ ವ್ಯಾಪ್ತಿಯ ಗ್ರಾಮ ಗಳನ್ನು ಸೇರ್ಪಡೆ ಮಾಡಿದ್ದರೆ, 2ನೆ ಭಾಗದಲ್ಲಿ ಮಾಂದಲ್‍ಪಟ್ಟಿ, ಕಾಲೂರು, ದೇವಸ್ತೂರು, ತಂತಿ ಪಾಲ, ಹೆಮ್ಮೆತ್ತಾಳು, ಮೇಘತ್ತಾಳು, ರಾಟೆಮನೆ ಪೈಸಾರಿ, ಮಕ್ಕಂದೂರು, ಮುಕ್ಕೋಡ್ಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳನ್ನು ಸೇರಿಸಲಾಗಿದೆ. 1ನೇ ಮತ್ತು 2ನೇ ಭಾಗದಲ್ಲಿ ವಿಂಗಡಿಸಲಾಗಿರುವ ಗ್ರಾಮಗಳು ಅತ್ಯಂತ ಅಪಾಯಕಾರಿ ವಲಯ ದಲ್ಲಿವೆ ಎಂದು ಜಿಎಸ್‍ಐ ವಿಜ್ಞಾನಿಗಳು ಗುರುತಿ ಸಿದ್ದು, ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳು, ಶಾಶ್ವತವಾಗಿ ರೂಪಿಸಬೇಕಿರುವ ಯೋಜನೆಗಳು, ಜನ ವಸತಿ ಪ್ರದೇಶಗಳ ತಾತ್ಕಾಲಿಕ ಸ್ಥಳಾಂತರ, ಶಾಶ್ವತ ಸ್ಥಳಾಂತರದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

1ನೇ ಮತ್ತು 2ನೇ ಭಾಗದ ಸಂಶೋಧನಾ ವರ ದಿಯನ್ನು 2019ರ ಜೂನ್ ತಿಂಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಅಗತ್ಯ ಕ್ರಮಕ್ಕಾಗಿ ಒತ್ತಾಯಿಸಲಾಗುತ್ತದೆ.

ಈ ಸಂಶೋಧನೆಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೊಡಗು ಜಿಲ್ಲಾ ಡಳಿತದ ವಿಶೇಷ ಕೋರಿಕೆಯ ಮೇಲೆ ನಡೆಸ ಲಾಗುತ್ತಿದ್ದು, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳು ಮತ್ತು ಅವುಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಕೂಡ ವಿಸ್ತøತ ವರದಿಯಲ್ಲಿ ವಿಜ್ಞಾನಿಗಳು ಉಲ್ಲೇಖಿಸಲಿದ್ದಾರೆ.

ನಿಯಂತ್ರಣ ಶಕ್ತಿಗೆ ಶೋಧ: 4 ಮಂದಿ ಹಿರಿಯ ಭೂ ವಿಜ್ಞಾನಿಗಳ ತಂಡ ಮಡಿಕೇರಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು, ಪ್ರಕೃತಿ ವಿಕೋಪಕ್ಕೆ ಕಾರಣವಾದ ಆ ಸಂದರ್ಭದ ಪ್ರಭಾವೀ ಶಕ್ತಿ ಯಾವುದು ಎಂದು ಹುಡುಕಾಟ ನಡೆಸುತ್ತಿದ್ದಾರೆ. “ನ್ಯೂಟನ್‍ನ ಪ್ರತಿಯೊಂದು ಕ್ರಿಯೆಗೆ ಸಮವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರು ತ್ತದೆ” ಎಂಬ ನಿಯಮದಲ್ಲಿ ಸಂಶೋಧನೆ ಆರಂಭ ವಾಗಿದ್ದು, ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳದಲ್ಲಿ ಕುಸಿದು ಬಿದ್ದಿರುವ ಪ್ರತಿ ಕಲ್ಲನ್ನು ಕೂಡ ಸಂಶೋ ಧನೆಗೆ ಒಳಪಡಿಸಲಾಗುತ್ತಿದೆ. ಕಲ್ಲಿನ ಮೂಲ, ಕಲ್ಲಿನ ರಚನೆ, ಕಲ್ಲಿನ ಪದರಗಳು, ಕಲ್ಲಿನೋಳಗೆ ನೀರು ಹರಿಯಲು ಇರುವ ರಂಧ್ರಗಳು, ಮೂಲ ಕಲ್ಲಿನಿಂದ ಕಲ್ಲು ಸಿಡಿದು ಬೀಳಲು ಕಾರಣ, ಕಲ್ಲಿ ನೊಂದಿಗೆ ಅಂಟಿಕೊಂಡಿರುವ ಮಣ್ಣಿನ ವಲಯ, ಮಣ್ಣಿನ ರಚನೆ, ಕಲ್ಲಿನ ವಿಧಗಳನ್ನು ಕೂಡ ವಿಸ್ತøತ ಸಂಶೋಧನೆಗೆ ಒಳಪಡಿಸಲಾಗುತ್ತಿದೆ.

ಈಗಾಗಲೇ 10ಕ್ಕೂ ಹೆಚ್ಚು ಬಗೆಯ ಕಲ್ಲು ಗಳನ್ನು ಸಂಗ್ರಹಿಸಲಾಗಿದ್ದು, ಭೌಗೋಳಿಕ ರಚನೆಯನ್ನು ಕೂಡ ಅಧ್ಯ ಯನ ನಡೆಸುತ್ತಿದ್ದಾರೆ. ನದಿ ಪ್ರವಾಹ ಹೊರತು ಪಡಿಸಿದಂತೆ ಬೆಟ್ಟ ಗುಡ್ಡಗಳು ಕುಸಿಯಲು ಕಾರಣವಾದ ಶಕ್ತಿಯ ಮೂಲಕ್ಕಾಗಿ ಹುಡುಕಾಟ ನಡೆಸುತ್ತಿರುವ ವಿಜ್ಞಾನಿಗಳು, 65 ದಿನಗಳವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಶೋಧನಾನಿರತರಾಗಲಿದ್ದಾರೆ.

ಅಪಾಯ ತಪ್ಪಿಲ್ಲ: ಈಗಾಗಲೇ ಬೆಟ್ಟ ಶ್ರೇಣಿಗಳು ಕುಸಿದು ಬಿದ್ದಿದ್ದು ಕೆಲವೆಡೆ ಬಿರುಕುಗಳಿವೆ. ಈ ಬಿರುಕುಗಳು ಮುಂದೊಂದು ದಿನ ಅಪಾಯ ವನ್ನು ತಂದೊಡ್ಡುತ್ತವೆ. ಈ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ. 3ನೇ ಮತ್ತು 4ನೇ ಭಾಗದಲ್ಲಿ ಗುರುತಿಸಲಾಗಿರುವ ಪ್ರಕೃತಿ ವಿಕೋ ಪಕ್ಕೆ ತುತ್ತಾದ ಇತರ ಗ್ರಾಮಗಳು ಅಪಾಯ ಸ್ಥಿತಿ ಯಿಂದ ಹೊರಗಿರುವುದರಿಂದ ಈ ಗ್ರಾಮಗಳ ವರದಿಯನ್ನು 2019-20ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುತ್ತಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಸಂಗ್ರಹಿಸಲಾಗಿರುವ ಕಲ್ಲು, ಮಣ್ಣು, ಮತ್ತು ಶಿಲೆಯನ್ನು ಪ್ರಯೋಗಾಲಯದಲ್ಲಿ ಉನ್ನತ ಮಟ್ಟದ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಈ ವರದಿ ವಿಜ್ಞಾನಿಗಳ ಕೈಸೇರಲು ಕನಿಷ್ಟ 6 ತಿಂಗಳು ಸಮಯ ಬೇಡುವುದರಿಂದ ತಡವಾಗಿ ವರದಿ ಸಲ್ಲಿಕೆಯಾಗಲಿದೆ. ಆದರೆ ಈ ಗ್ರಾಮಗಳಲ್ಲಿಯೂ ಶಾಶ್ವತ ಯೋಜನೆಗಳನ್ನು ರೂಪಿಸಲೇಬೇಕಿದೆ.

ಜಿಲ್ಲೆಯಲ್ಲಿ ಹೆದ್ದಾರಿಗಳ ನಿರ್ಮಾಣ, ಮನೆ ಗಳು, ತೋಟಗಳು, ಹೋಂ ಸ್ಟೇ, ರೆಸಾರ್ಟ್ ಮತ್ತು ನೈಸರ್ಗಿಕ ಪರಿಸರವನ್ನು ಕ್ರಮಬದ್ಧವಾಗಿ ಬಳಸ ಬೇಕು. ತಪ್ಪಿದರೆ ಪ್ರಕೃತಿ ವಿಕೋಪಗಳು ಸರಣಿ ಯಾಗಿ ಘಟಿಸುವ ಸಂಭವವೂ ಇದೆ ಎಂದು ಭೂ ವಿಜ್ಞಾನಿಗಳು ತಮ್ಮ ಪ್ರಾಥಮಿಕ ಸಂಶೋಧನೆಯ ಸಂದರ್ಭ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪ್ರಸಾದ್ ಸಂಪಿಗೆಕಟ್ಟೆ

Translate »