ಕಾಲು ಜಾರಿ ಕೆರೆಗೆ ಬಿದ್ದು ಪುರಸಭಾ ಮಾಜಿ ಸದಸ್ಯ ಸಾವು
ಹಾಸನ

ಕಾಲು ಜಾರಿ ಕೆರೆಗೆ ಬಿದ್ದು ಪುರಸಭಾ ಮಾಜಿ ಸದಸ್ಯ ಸಾವು

August 21, 2018

ಬೇಲೂರು: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ತಾಲೂಕಿನ ಪುರಸಭಾ ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎ.ಸಾಲ್ಡಾನ್ (76) ಮೃತಪಟ್ಟಿದ್ದಾರೆ. ಭಾನುವಾರ ಜೀಪಿನಲ್ಲಿ ಲಕ್ಕುಂದದ ತಮ್ಮ ಕಾಫಿ ತೋಟಕ್ಕೆ ಹೋದವರು ಮನೆಗೆ ಸಂಜೆಯಾ ದರೂ ವಾಪಸ್ಸಾಗಿರಲಿಲ್ಲ. ಮನೆಯವರು ತೋಟದಲ್ಲಿ ಹುಡುಕಾಡಿ ಅರೇಹಳ್ಳಿ ಪೊಲೀ ಸರಿಗೆ ತಿಳಿಸಿದ್ದಾರೆ. ಪೊಲೀಸರು ಬೇಲೂರಿನಿಂದ ಮೀನುಗಾರರನ್ನು ಕರೆಸಿ ತೋಟದ ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದರು.

ಬಿ.ಎ.ಸಾಲ್ಡಾನ್ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದೇಶದಲ್ಲಿರುವ ಮೃತರ ಪುತ್ರಿ ಬರುವಿಕೆಗೆ ಕಾಯುತ್ತಿದ್ದು, ಗುರುವಾರ ಅಂತ್ಯಕ್ರಿಯೆ ನೆರವೇರಲಿದೆ. ಮೃತರ ನಿಧನಕ್ಕೆ ಶಾಸಕ ಕೆ.ಎಸ್.ಲಿಂಗೇಶ್, ಮಾಜಿ ಸಚಿವ ಬಿ.ಶಿವರಾಂ, ಮಾಜಿ ಸಚಿವ ಎ.ಮಂಜು, ಮಾಜಿ ರಾಜ್ಯಸಭಾ ಸದಸ್ಯ ಹೆಚ್.ಕೆ.ಜವರೇಗೌಡ, ಹಲವರು ಸಂತಾಪ ಸೂಚಿಸಿದ್ದಾರೆ.

Translate »