ಹದಿನಾರಿನ ಮಿನಿ ಬೃಂದಾವನ ವೀಕ್ಷಿಸಿದ ಮಾಜಿ ಸಚಿವ ಹೆಚ್.ಸಿ.ಎಂ.
ಮೈಸೂರು

ಹದಿನಾರಿನ ಮಿನಿ ಬೃಂದಾವನ ವೀಕ್ಷಿಸಿದ ಮಾಜಿ ಸಚಿವ ಹೆಚ್.ಸಿ.ಎಂ.

September 19, 2018

ಸುತ್ತೂರು:ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ಕೆರೆ ಪಕ್ಕ ನಿಷ್ಪ್ರಯೋಜಕವಾಗಿದ್ದ ಜಾಗವನ್ನು ಈ ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪರವರು ಅಭಿವೃದ್ಧಿಪಡಿಸಿ, ಮಿನಿ ಬೃಂದಾವನ ನಿರ್ಮಾಣಕ್ಕೆ ಮುಂದಾಗಿದ್ದರು. ಅದು ಈಗ ಪೂರ್ಣಗೊಂಡಿದೆ.

ಇದನ್ನು ಇಂದು ವೀಕ್ಷಿಸಿದ ನಂತರ ಮಾತನಾಡಿದ ಡಾ.ಹೆಚ್.ಸಿ.ಮಹದೇವಪ್ಪ, ಹದಿನಾರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಈ ಕೆರೆ ಮತ್ತು ಬೃಂದಾವನ ಒಂದು ಪ್ರೇಕ್ಷಣೀಯ ಸ್ಥಳವಾಗಲಿದೆ. ಈ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಅವರ ಕುಟುಂಬಸ್ಥರು ಇಲ್ಲಿಂದಲೇ ರಾಜ್ಯವನ್ನು ಸ್ಥಾಪನೆ ಮಾಡಿದ್ದು, ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲಿಚ್ಛಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಹಿಂದಿನ ಸರ್ಕಾರದ ಸಂದರ್ಭದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಇದನ್ನು ಪ್ರೇಕ್ಷಣೀಯ ಹಾಗೂ ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ ಎಂದರು.

ಈ ಸ್ಥಳವನ್ನು ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಹೆಚ್.ಎನ್.ನಂಜಪ್ಪ, ಪ್ರಮೋದ್‍ಕುಮಾರ್, ಮುಖಂಡರಾದ ಹೆಚ್.ಸಿ.ನಿಂಗಯ್ಯ, ಎ.ಪಿ.ಎಂ.ಸಿ ಉಪಾಧ್ಯಕ್ಷ ಸಿದ್ದರಾಜನಾಯಕ, ಗ್ರಾ.ಪಂ ಅಧ್ಯಕ್ಷೆ ಸುಧಾಮಣಿ, ಗ್ರಾಮದ ಗೌ|| ಶಿವಣ್ಣ, ರಾಂಪುರ ಪ|| ಮಹದೇವಪ್ಪ, ಹುಳಿಮಾವು ಪರಶಿವಮೂರ್ತಿ, ವಜ್ರೇಗೌಡ, ಗ್ರಾಮದ ಯುವ ಮುಖಂಡ ನವೀನ್, ಕಂಟ್ರಾಕ್ಟರ್ ನಾಗರಾಜು, ಗುತ್ತಿಗೆದಾರ ಜೀವನ್, ವರುಣಾ ನಾಲಾ ಇಂಜಿನಿಯರ್ ಧರಣೇಂದ್ರ ಪ್ರಸಾದ್,

Translate »