ಸಂತೇಮರಹಳ್ಳಿ: ಕೊಳ್ಳೇಗಾಲ ಕ್ಷೇತ್ರದ ನೂತನ ಶಾಸಕ ಎನ್.ಮಹೇಶ್ ಅವರ 63ನೇ ಜನ್ಮದಿನದ ಅಂಗವಾಗಿ ಸಂತೇಮರಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂತೇಮರ ಹಳ್ಳಿ ಬಿಎಸ್ಪಿ ಘಟಕ ಹಾಗೂ ಎನ್.ಮಹೇಶ್ ಜನಸೇವಾ ಕೇಂದ್ರದ ವತಿಯಿಂದ ಬೃಹತ್ ಉಚಿತ ಕಣ ್ಣನ ತಪಾಸಣಾ ಶಿಬಿರವನ್ನು ನಾಳೆ (ಜೂ.1)ರಂದು ಹಮ್ಮಿಕೊಳ್ಳಲಾಗಿದೆ.
ಈ ಭಾಗದ ಅಕ್ಕಪಕ್ಕದ ಗ್ರಾಮಗಳಿಂದ ಉಚಿತ ಕಣ ್ಣನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಣ ್ಣನ ತೊಂದರೆಗಳಾದ ಸಮೀಪ ದೃಷ್ಠಿ, ದೂರದೃಷ್ಠಿ ಇನ್ನಿತರ ಸಮಸ್ಯೆಗಳನ್ನು ಗುಣಪಡಿಸಿ ಕೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ ತಿಳಿಸಿದರು. ಇದೇ ಸಂದರ್ಭದಲ್ಲಿ ಜಯಶಂಕರ್, ಉಮ್ಮತ್ತೂರು ಸೋಮಣ್ಣ, ಬಾಗಳಿ ಮಂಜು, ಗುರುರಾಜಚಾರ್, ಬ್ಲಾಕ್ ಅಧ್ಯಕ್ಷ ಮಲೇಶಪ್ಪ, ನಿಂಗರಾಜು, ಸಿದ್ದರಾಜು, ಬಸವಣ್ಣ, ಉಮ್ಮತ್ತೂರು ಶಿವಣ್ಣ, ಮಹೇಶ್ ಮತ್ತಿತರರು ಇದ್ದರು.

ಚಾಮರಾಜನಗರ