ಇಂದು ಚಾಮರಾಜನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ
ಚಾಮರಾಜನಗರ

ಇಂದು ಚಾಮರಾಜನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ

September 26, 2018

ಚಾಮರಾಜನಗರ:  ನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾ ಗಣಪತಿ ಮಂಡಳಿ ಪ್ರತಿಷ್ಠಾಪಿಸಿರುವ ಗಣಪತಿಯ ವಿಸರ್ಜನಾ ಮಹೋತ್ಸವ ನಾಳೆ (ಸೆ.26) ನಡೆಯಲಿದೆ. ಮುಂಜಾ ಗ್ರತಾ ಕ್ರಮವಾಗಿ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಶ್ರೀ ವಿದ್ಯಾಗಣಪತಿ ಮಂಡಳಿಯು ಕಳೆದ 55 ವರ್ಷಗಳಿಂದಲೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಇಲ್ಲಿನ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ 56ನೇ ವರ್ಷದ ಗಣ ಪತಿಯನ್ನು ಹಬ್ಬದ ದಿನದಂದು (ಸೆ.13) ಪ್ರತಿಷ್ಠಾಪಿಸಲಾಗಿತ್ತು. 18ರಿಂದ 25ನೇ ದಿನಾಂಕದವರೆಗೂ ಪ್ರತಿದಿನ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ವೇದಿಕೆ ಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಇಂದು ಮೆರವಣಿಗೆ: ಶ್ರೀ ವಿದ್ಯಾ ಗಣಪತಿಯ ಮೆರವಣಿಗೆ ಮಹೋತ್ಸವ ನಾಳೆ (ಸೆ.26) ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಮೆರವಣಿಗೆ ಆರಂಭವಾಗಲಿದೆ. ಗುರುನಂಜಶೆಟ್ಟರ ಛತ್ರ ವೃತ್ತದ ಮುಂಭಾಗ ದಿಂದ ಹೊರಡುವ ಮೆರವ ಣಿಗೆಯು ಖಡಕ್‍ಪುರ ಮೊಹಲ್ಲಾ, ಅಂಬೇಡ್ಕರ್ ಬೀದಿ, ಗಾಡಿಪೇಟೆ ಚೌಕ್, ಮೇಗಲ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಚಿಕ್ಕ ಅಂಗಡಿ ಬೀದಿ, ಸಂತೇ ಮರಹಳ್ಳಿ ವೃತ್ತ, ಮದಕರಿ ನಾಯಕ ಬೀದಿ, ಭಗೀರಥ ಉಪ್ಪಾರ ಬಡಾವಣೆ, ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ ಬಡಾವಣೆ, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ಚಮಾಲ್ ಬೀದಿ, ಜೈನರ ಬೀದಿ, ಕೊಳದ ಬೀದಿಯಲ್ಲಿ ಅಂತ್ಯವಾಗಲಿದೆ. ನಂತರ ದೊಡ್ಡ ಅರಸನ ಕೊಳದಲ್ಲಿ ಬಾಣ ಬಿರುಸುಗಳ ಕಾರ್ಯಕ್ರಮದೊಂದಿಗೆ ರಾತ್ರಿ ಗಣಪತಿ ಯನ್ನು ವಿಸರ್ಜಿಸಲಾಗುವುದು.

ಕಲಾ ತಂಡಗಳು: ಮೆರವಣಿಗೆಯಲ್ಲಿ ನಂದಿ ಕಂಬ, ಗೊರವರ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಪೂಜಾ ಕುಣಿತ, ಸೋಮನ ಕುಣಿತ, ಗಾಡಿಗೊಂಬೆ, ಹುಲಿ ವೇಷ, ಚೆಂಡೆ, ಮಂಗಳವಾದ್ಯ, ಬ್ಯಾಂಡ್‍ಸೆಟ್, ವೀರಗಾಸೆ, ಭಜನಾತಂಡ, ಪಟಕುಣಿತ, ನಗಾರಿ, ತಮಟೆ, ಕರಗ, ಚಿಂಗಾರಿ ಮೇಳ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಬಂದೋಬಸ್ತ್: ಗಣಪತಿಯ ವಿಸರ್ಜನಾ ಮಹೋತ್ಸವವು ಶಾಂತಿ ಯುತವಾಗಿ ನಡೆಯುವ ಸಲುವಾಗಿ ನಗರದ್ಯಾಂತ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜಿಸಲಾಗಿದೆ.

Translate »