ಗಾಂಧೀಜಿ ಜೀವನ, ಸಂದೇಶ ಸಾರುವ ಸಿಮೆಂಟ್ ಶಿಲ್ಪ ಕಲಾಕೃತಿಗಳ ನಿರ್ಮಾಣ
ಮೈಸೂರು

ಗಾಂಧೀಜಿ ಜೀವನ, ಸಂದೇಶ ಸಾರುವ ಸಿಮೆಂಟ್ ಶಿಲ್ಪ ಕಲಾಕೃತಿಗಳ ನಿರ್ಮಾಣ

October 23, 2018

ಮೈಸೂರು: ಮೈಸೂರಿನ ಮಾನಸ ಗಂಗೋತ್ರಿ ಗಾಂಧೀ ಭವನ ಆವರಣದಲ್ಲಿ ರುವ ಗಾಂಧೀಜಿಯವರ ಸಬರಮತಿ ಆಶ್ರಮ ಇದೀಗ ಇನ್ನಷ್ಟು ಆಕರ್ಷಣೀಯವಾಗಲಿದೆ. ಗುಜರಾತ್‍ನಲ್ಲಿರುವ ಸಬರಮತಿ ಆಶ್ರಮ ವನ್ನೇ ಹೋಲುವ ಸಬರಮತಿ ಆಶ್ರಮ ಇರುವ ಗಾಂಧೀ ಭವನದ ಸುತ್ತ ಮಹಾತ್ಮ ಗಾಂಧೀಜಿಯವರ ಆಳೆತ್ತರದ ಸಿಮೆಂಟ್ ಶಿಲ್ಪಕಲಾಕೃತಿಗಳು ಇಲ್ಲಿ ಮೂಡಲಿವೆ.
ದಕ್ಷಿಣ ಭಾರತದ ಏಕೈಕ ಸಬರಮತಿ ಆಶ್ರಮ ಎನ್ನಲಾಗಿರುವ ಮೈಸೂರಿನ ಗಾಂಧೀ ಭವನದ ಸಬರಮತಿ ಆಶ್ರಮದಲ್ಲಿ ಇನ್ನು 15 ದಿನಗಳಲ್ಲಿ ಗಾಂಧೀಜಿಯವರ ಅನೇಕ ಶಿಲ್ಪ ಕಲಾಕೃತಿಗಳು ತಲೆ ಎತ್ತಲಿವೆ. ಗಾಂಧೀಜಿ ಯವರ ಜೀವನ, ಬದುಕು ಮತ್ತು ಸಂದೇಶ ವನ್ನು ಸಾರಲು ಸಜ್ಜಾಗುತ್ತಿವೆ.

ಬಾಲಕ ಗಾಂಧೀ, ಧ್ಯಾನ ಮುದ್ರೆಯಲ್ಲಿ ಕುಳಿತ ಗಾಂಧೀ, ದಂಡಿ ಸತ್ಯಾಗ್ರಹ, ಲಾಲ್ ಬಹದ್ದೂರ್ ಶಾಸ್ತ್ರಿಯವರೊಂದಿಗೆ ಗಾಂಧೀಜಿ ಮುಂತಾದ ಸುಮಾರು 25ಕ್ಕೂ ಹೆಚ್ಚು ದೊಡ್ಡ ಶಿಲ್ಪ ಕಲಾಕೃತಿಗಳನ್ನು ಹಿರಿಯ ಶಿಲ್ಪ ಕಲಾ ವಿದರು ನಿರ್ಮಿಸುತ್ತಿದ್ದಾರೆ. 8 ಅಡಿಗೂ ಹೆಚ್ಚು ಎತ್ತರದ ಇಂತಹ ಶಿಲ್ಪ ಕಲಾಕೃತಿಗಳನ್ನು ಗಾಂಧೀ ಭವನ ಆವರಣದಲ್ಲಿರುವ ಸಬರ ಮತಿ ಆಶ್ರಮದ ಆಸುಪಾಸಿನಲ್ಲಿ ನಿರ್ಮಿಸ ಲಾಗುತ್ತಿದೆ. ಇದಕ್ಕಾಗಿ ರಾಜ್ಯದ ನಾನಾ ಭಾಗ ಗಳಿಂದ ಹಿರಿಯ ಶಿಲ್ಪ ಕಲಾವಿದರು ಮೈಸೂ ರಿಗೆ ಆಗಮಿಸಿದ್ದು, ಸೋಮವಾರದಿಂದ ಕಲಾ ಕೃತಿ ನಿರ್ಮಿಸುವ ಕಾರ್ಯ ಆರಂಭಿಸಿದ್ದಾರೆ.

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ, ಮೈಸೂರು ರಂಗಾ ಯಣ, ಗಾಂಧಿ ಅಧ್ಯಯನ ಕೇಂದ್ರ ಜಂಟಿ ಯಾಗಿ ಗಾಂಧೀಜಿ ಕುರಿತ ಸಿಮೆಂಟ್ ಶಿಲ್ಪ ಶಿಬಿರ ಆಯೋಜಿಸಿದೆ. 12 ದಿನಗಳ ಈ ಶಿಬಿರದ ನಿರ್ದೇಶಕ ನಾರಾಯಣರಾವ್, ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾ ಲಕ ಕೃಷ್ಣ ನಾಯಕ್ ನೇತೃತ್ವದಲ್ಲಿ ಈಗಾಗಲೇ ಸಿಮೆಂಟ್‍ನಲ್ಲಿ ಗಾಂಧೀ ಶಿಲ್ಪ ಕಲಾಕೃತಿ ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಶಿವಮೊಗ್ಗದ ಮಹೇಶ್ ಕೃಷ್ಣ, ಪರಶುರಾಮ್, ಮೈಸೂರಿನ ಶ್ರೀನಾಥ್ ಚಿತ್ರ ಗಾರ್, ಎನ್.ಎಸ್.ರಮೇಶ್, ಹಾಸನದ ದಿನೇಶ್, ಕೊಪ್ಪಳದ ಗಣೇಶ್ ಕಿನ್ನಾಳ, ಬಾಗಲ ಕೋಟೆಯ ಮಹಮದ್ ರಫೀಕ್, ನರ ಗುಂದದ ಹನುಮಂತ ಗಟ್ಟಿ, ಬೆಳಗಾವಿಯ ಕುಮಾರಬಾಬು ಸೇರಿದಂತೆ 35ಕ್ಕೂ ಹೆಚ್ಚು ಹಿರಿಯ ಶಿಲ್ಪ ಕಲಾವಿದರು ಶಿಲ್ಪ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಸಬರಮತಿ ಆಶ್ರಮದ ಸುತ್ತ ಪ್ರಮುಖ ಸ್ಥಳಗಳಲ್ಲಿ ಸಿಮೆಂಟ್‍ನಲ್ಲಿ ಶಿಲ್ಪಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಶ್ರಮ ಗಾಂಧೀ ಪ್ರೇಮಿಗಳ ಹಾಗೂ ಗಾಂಧೀ ಮಾರ್ಗಿಗಳ ಪ್ರಮುಖ ತಾಣವಾಗ ಲಿದೆ. ಅಲ್ಲದೆ ಪ್ರಮುಖ ಪ್ರವಾಸಿ ಕೇಂದ್ರ ವಾಗಿಯೂ ಹೊರ ಹೊಮ್ಮುವ ಸಾಧ್ಯತೆಗಳಿವೆ

Translate »