ಅಪಘಾತದಲ್ಲಿ ಗಾಯಗೊಂಡ ನರಿಗೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದ ನಾಗರಿಕರು
ಮೈಸೂರು

ಅಪಘಾತದಲ್ಲಿ ಗಾಯಗೊಂಡ ನರಿಗೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದ ನಾಗರಿಕರು

October 23, 2018

ಮೈಸೂರು: ರಸ್ತೆ ಅಪಘಾತದಲ್ಲಿ ಸಿಲುಕಿ ಗಾಯ ಗೊಂಡು ಅಸ್ವಸ್ಥವಾಗಿದ್ದ ನರಿಗೆ ಸಾರ್ವಜನಿಕರು ನೀರು ಕುಡಿಸಿ, ಶುಶ್ರೂಷೆ ಮಾಡಿ ಮಾನವೀಯತೆ ಮೆರೆದಿರುವ ಪ್ರಸಂಗ ಮೈಸೂ ರಿನ ವಾಲ್ಮೀಕಿ ರಸ್ತೆಯಲ್ಲಿ ನಡೆದಿದೆ. ಮುಂಜಾನೆ ಅಪರಿಚಿತ ವಾಹನವೊಂದು ವಾಲ್ಮೀಕಿ ರಸ್ತೆ ಪೆಟ್ರೋಲ್ ಬಂಕ್ ಎದುರು ಡಿಕ್ಕಿ ಹೊಡೆದ ಪರಿಣಾಮ ಆಂತರಿಕ ಗಾಯ(Iಟಿಣeಡಿಟಿಚಿಟ Iಟಿರಿuಡಿಥಿ) ವಾಗಿ ಅಸ್ವಸ್ಥಗೊಂಡ ನರಿ ನಡೆಯಲಾಗದೆ ತೆವಳುತ್ತಾ, ರಸ್ತೆ ಬದಿಯ ಮರದ ಬುಡದಲ್ಲಿ ನಡುಗುತ್ತಾ ಮಲಗಿತ್ತು.
ಬೆಳಿಗ್ಗೆಯಿಂದ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾ ಡಿವೆ. ಆದರೂ ಮರದ ಮರೆಯಲ್ಲಿದ್ದ ನರಿ ಯಾರಿಗೂ ಗೋಚ ರಿಸಿಲ್ಲ. ಕಡೆಗೆ ಅಲ್ಲಿನ ಸಣ್ಣ ಪಂಕ್ಚರ್ ಪೆಟ್ಟಿ ಅಂಗಡಿ ಮಾಲೀಕ ಬಾಗಿಲು ತೆಗೆಯಲೆಂದು ಬಂದಾಗ ನರಿ ಗಮನಿಸಿ ಸಾರ್ವಜನಿ ಕರ ಸಹಕಾರದಿಂದ ಬಟ್ಟಲೊಂದರಲ್ಲಿ ನೀರು ಕುಡಿಸಿದರು.

ಬೆಳಿಗ್ಗೆ 10.30 ಗಂಟೆ ವೇಳೆಗೆ ಆ ಮಾರ್ಗ ಬಂದ ವಕೀಲ ಪಡುವಾರಹಳ್ಳಿ ರಾಮಕೃಷ್ಣ, ಪೊಲೀಸರು ಮತ್ತು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿ ಗಳು, ನರಿಯನ್ನು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದರು. ವಾಹನ ಡಿಕ್ಕಿ ಹೊಡೆದಿರುವುದರಿಂದ ನರಿಯ ಹೊಟ್ಟೆ ಮತ್ತು ಪಕ್ಕೆ ಒಳಭಾಗದಲ್ಲಿ ಪೆಟ್ಟಾಗಿರುವುದರಿಂದ ನೋವು ತಡೆಯಲಾರದೆ ನರಳಾಡುತ್ತಿದೆ ಎಂದು ವೈದ್ಯರು ತಿಳಿಸಿದರು.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಅರಣ್ಯಾ ಧಿಕಾರಿಗಳು, ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಂಪೂರ್ಣ ಸುಧಾರಿಸಿಕೊಂಡ ನಂತರ ನರಿಯನ್ನು ಕಾಡಿಗೆ ಬಿಡುತ್ತೇವೆ ಎಂದರು. ಕುಕ್ಕರಹಳ್ಳಿ ಕೆರೆಯಿಂದ ದಿಕ್ಕು ತಪ್ಪಿ ಹುಣಸೂರು ರಸ್ತೆ ದಾಟುತ್ತಿರುವಾಗ ವಾಲ್ಮೀಕಿ ರಸ್ತೆ ಜಂಕ್ಷನ್‍ನಲ್ಲಿ ವಾಹನ ನರಿಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.

Translate »