ಅರಮನೆ ಅಂಗಳದಲ್ಲಿ ಕಸದ ರಾಶಿ; ಸ್ವಚ್ಛತಾ ಸಿಬ್ಬಂದಿಯಿಂದ ತೆರವು ಕಾರ್ಯ
ಮೈಸೂರು, ಮೈಸೂರು ದಸರಾ

ಅರಮನೆ ಅಂಗಳದಲ್ಲಿ ಕಸದ ರಾಶಿ; ಸ್ವಚ್ಛತಾ ಸಿಬ್ಬಂದಿಯಿಂದ ತೆರವು ಕಾರ್ಯ

October 21, 2018

ಮೈಸೂರು: ವಿವಿಧ ಪಾಸ್ ಪಡೆದು ಅರಮನೆಯ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸಲು ಬಂದಿದ್ದ ಸಾವಿ ರಾರು ವೀಕ್ಷಕರು ಎಸೆದು ಹೋಗಿದ್ದ ಪ್ಲಾಸ್ಟಿಕ್, ಪೇಪರ್, ನೀರಿನ ಬಾಟಲ್ ಸೇರಿದಂತೆ ಅಪಾರ ಪ್ರಮಾಣದ ಕಸದ ರಾಶಿಯನ್ನು ಶನಿವಾರ ಅರಮನೆಯ ಸ್ವಚ್ಛತಾ ಸಿಬ್ಬಂದಿಗಳು ಸಂಗ್ರಹಿಸಿ ವಿಲೇವಾರಿ ಮಾಡಿದರು. ಆ ಮೂಲಕ ಅರಮನೆಯ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಮಾಡಲು ಶ್ರಮಿಸಿದರು.

ಪಾಸ್ ಹಾಗೂ ಗೋಲ್ಡ್‍ಕಾರ್ಡ್ ಹೊಂದಿ ರುವವರಿಗಾಗಿ ಆರಮನೆ ಆವರಣದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕರು ಜಂಬೂಸವಾರಿ ಮೆರವಣಿಗೆ ನೋಡಿದ ನಂತರ ಹಿಂದಿರುಗುವಾಗ ತಾವು ಕುಳಿತಿದ್ದ ಸ್ಥಳದಲ್ಲಿಯೇ ಚಿಪ್ಸ್, ಬಿಸ್ಕೆಟ್, ಚಾಕ ಲೇಟ್ ಕವರ್, ನೀರಿನ ಬಾಟಲ್, ಜ್ಯೂಸ್‍ನ ಖಾಲಿ ಪ್ಯಾಕೆಟ್‍ಗಳನ್ನು ಎಸೆದಿದ್ದರು.

ಇದರಿಂದ ಅರಮನೆಯ ಆವರಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಯೇ ಶನಿವಾರ ಕಂಡು ಬರುತ್ತಿತ್ತು. ಚೆಲ್ಲಾಡಿದ್ದ ಕಸವನ್ನು ಸಂಗ್ರ ಹಿಸುವ ಕೆಲಸದಲ್ಲಿ ಸ್ವಚ್ಛತಾ ಸಿಬ್ಬಂದಿ ಶನಿವಾರ ಬೆಳಗ್ಗಿನಿಂದಲೇ ಮಗ್ನರಾಗಿದ್ದರು.

ಚಿಪ್ಸ್ ಮತ್ತು ಜ್ಯೂಸ್ ಪ್ಯಾಕೆಟ್ ಹೆಚ್ಚು: ಅರ ಮನೆಯ ಆವರಣ ಪ್ರವೇಶಕ್ಕೆ ನೀಡಲಾಗಿದ್ದ ಪಾಸ್‍ನಲ್ಲಿ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ತರದಂತೆ ಸೂಚನೆ ನೀಡಲಾಗಿತ್ತು. ಈ ಸೂಚನೆ ಯನ್ನು ಅನೇಕರು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಆದರೂ ಪ್ಲಾಸ್ಟಿಕ್, ಪೇಪರ್‍ಗಳ ಕಸದ ರಾಶಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ.

ಈ ನಡುವೆ ಅರಮನೆಯ ಸಿಬ್ಬಂದಿ ಕ್ಯಾಮರಾ ದಲ್ಲಿ ಸೆರೆ ಹಿಡಿದಿರುವ ಚಿತ್ರಗಳಲ್ಲಿ ಚಿಪ್ಸ್, ಜ್ಯೂಸ್, ನೀರಿನ ಬಾಟಲ್ ಮತ್ತಿತರ ವಸ್ತು ಗಳನ್ನು ಮಾರಾಟ ಮಾಡುವವರು ಅರ ಮನೆಯ ಆವರಣದಲ್ಲಿ ಶುಕ್ರವಾರ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಅರಮನೆ ಯಲ್ಲಿ ಕೆಲಸ ಮಾಡುವವರಿಗೇ ಪ್ರವೇಶ ನೀಡುವುದಕ್ಕೆ ಹಿಂದೇಟು ಹಾಕಿದ ಪೊಲೀಸರು ವ್ಯಾಪಾರಿಗಳಿಗೆ ಹೇಗೆ ಪ್ರವೇಶ ನೀಡಿದರು ಎಂದು ಅರಮನೆಯ ಸಿಬ್ಬಂದಿ ಪ್ರಶ್ನಿಸಿದ್ದಾರೆ.

ರಸ್ತೆಗಳಲ್ಲಿಯೂ ಕಸದ ರಾಶಿ: ಅರಮನೆ ಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗಿನ ಮಾರ್ಗದಲ್ಲಿಯೂ ಎಲ್ಲೆಡೆ ಕಸ ಹರಡಿ ಬಿದ್ದಿರುವುದು ಶನಿವಾರ ಕಂಡು ಬಂದಿತು. ಕಸ ಸಂಗ್ರಹಿಸಲು ನಗರ ಪಾಲಿಕೆ ವತಿಯಿಂದ ವಿಶೇಷ ತಂಡ ರಚಿಸಲಾಗಿದೆ. ಆದರೆ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂ ದಾಗಿ ರಾತ್ರಿ ಸ್ವಚ್ಛತಾ ಕಾರ್ಯ ನಡೆಸುವುದಕ್ಕೆ ಅಡಚಣೆಯಾಯಿತು. ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವುದಕ್ಕೆ ಪೌರಕಾರ್ಮಿಕರ ದೊಡ್ಡ ತಂಡವೇ ಶ್ರಮಿಸುತ್ತಿದೆ.
ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸುವುದಕ್ಕೆ ನಿರ್ಮಿಸಲಾಗಿದ್ದ ಪೆಂಡಾಲ್ ಹಾಗೂ ವೇದಿಕೆಯನ್ನು ಬಹುತೇಕ ತೆರವು ಗೊಳಿಸಿ ಕುರ್ಚಿಗಳನ್ನು ತೆಗೆದುಕೊಂಡು ಹೋಗಲಾಗಿದೆ.

ವಿವಿಧ ಬ್ಲಾಕ್‍ಗಳಲ್ಲಿ ಅಳವಡಿ ಸಿದ್ದ ಬ್ಯಾರಿಕೇಡ್‍ಗಳು ಹಾಗೂ ನಿರ್ಮಿಸಿದ್ದ ವೇದಿಕೆಗಳ ತೆರವು ಕಾರ್ಯ ಮುಂದುವರೆ ದಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Translate »