ಉತ್ತಮ ಕಲಿಕೆಯಿಂದ ಸಮಾಜಕ್ಕೆ ಕೀರ್ತಿ ತನ್ನಿ: ಅನಂತ್‍ಕುಮಾರ್
ಹಾಸನ

ಉತ್ತಮ ಕಲಿಕೆಯಿಂದ ಸಮಾಜಕ್ಕೆ ಕೀರ್ತಿ ತನ್ನಿ: ಅನಂತ್‍ಕುಮಾರ್

May 16, 2019

ಅರಸೀಕೆರೆ: ಗುರುಗಳ ಮಾರ್ಗ ದರ್ಶನದೊಂದಿಗೆ ವಿದ್ಯಾಭ್ಯಾಸ ಮಾಡು ವುದರ ಮೂಲಕ ಕಲಿತ ವಿದ್ಯಾಸಂಸ್ಥೆಗೆ ಮತ್ತು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಅನಂತ್ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಆರ್.ಅನಂತ್ ಕುಮಾರ್ ವಿದ್ಯಾರ್ಥಿಗಳಿಗೆ ಹೇಳಿದರು.

ನಗರದ ಅನಂತ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿಜ್ಞಾನ ವಿಭಾಗ ತರಗತಿಗಳು ಪ್ರಾರಂಭಗೊಂಡ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಮೈ ಫಸ್ಟ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಲೇಜಿನ ವ್ಯಾಸಂ ಗದ ದಿನಗಳನ್ನು ವಿದ್ಯಾರ್ಥಿಗಳು ಗಂಭೀರ ವಾಗಿ ಪರಿಗಣಿಸಬೇಕು. ಆಯಾ ತರಗತಿ ಗಳಲ್ಲಿ ಪ್ರಾಧ್ಯಾಪಕರು ನೀಡುವ ವಿಶೇಷ ಮಾಹಿತಿಗಳನ್ನು ಮನನ ಮಾಡಿಕೊಳ್ಳುತ್ತಾ ತಮ್ಮಗಳ ಜ್ಞಾನಾರ್ಜನೆಯನ್ನು ಉತ್ತಮಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ ಇಂದು ಸಾಕಷ್ಟು ಮುಂದುವರೆ ದಿದೆ ಎಂದಾದರೂ ಅದರ ಬಗ್ಗೆ ಕಲಿಕೆ ಮತ್ತು ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳು ವುದು ಅಷ್ಟೇ ಮಹತ್ವದ್ದಾಗಿದೆ. ಸಾಮಾನ್ಯ ತರಗತಿಗಳಷ್ಟೇ ಅಲ್ಲದೆ ಪಿಯುಸಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ತರಗತಿಗಳನ್ನು ಹಾಗೂ ವಾಣಿಜ್ಯ ವಿಭಾ ಗದ ವಿಷಯಗಳಿಗೆ ಸಂಬಂಧಿಸಿದಂತೆ ಕೋಚಿಂಗ್ ತರಗತಿಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ ಎಂದರು.

ಪ್ರಸಕ್ತ ವರ್ಷ ಪ್ರಥಮ ಬಾರಿಗೆ ರಾಷ್ಟ್ರೀಯ ಕಾನೂನು ಕಾಲೇಜುಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಪರೀಕ್ಷೆಗಳಿಗೆ ಕೋಚಿಂಗ್ ತರಗತಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ವಿದ್ಯಾರ್ಥಿ ಗಳ ಮುಂದಿನ ಶೈಕ್ಷಣಿಕ ಪ್ರಗತಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಕೋಚಿಂಗ್ ತರಗತಿ ಗಳು ಪರಿಣಾಮಕಾರಿಯಾಗಲಿದ್ದು, ವಿದ್ಯಾಭ್ಯಾಸದ ಕಲಿಕೆಯ ವಿಚಾರದಲ್ಲಿ ಯಾವುದೇ ಸಂಶಯಗಳನ್ನು ಇಟ್ಟು ಕೊಳ್ಳದೇ ಬೇಕಾದ ಮಾಹಿತಿಗಳನ್ನು ನುರಿತ ಪ್ರಾಧ್ಯಾಪಕರಿಂದ ಪಡೆಯವುದರ ಮೂಲಕ ವಿವಿಧ ಆವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳು ತಯಾರಾಗಿರ ಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಬಿ.ಹೆಚ್.ವಿವೇಕಾನಂದ ಮಾತನಾಡಿ, ಶಾಲೆ ಕಾಲೇಜುಗಳು ಎಂಬುದು ಅಗಾಧವಾದ ಜ್ಞಾನವನ್ನು ಹೊಂದಿದ ಭಂಡಾರವಾಗಿದೆ. ಇಂದು ಆಧುನಿಕತೆ ಹೆಸರಿನಲ್ಲಿ ಬಂದಿರುವ ನೂತನ ತಂತ್ರಜ್ಞಾನವೂ ಆದ ಮೊಬೈಲ್ ಮತ್ತು ಕಂಪ್ಯೂಟರ್‍ಗಳನ್ನು ಹೆಚ್ಚಾಗಿ ಜ್ಞಾನಾರ್ಜನೆಗೆ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು.

ಕಲಿಕೆ ಸಮಯದಲ್ಲಿ ಪ್ರಾಧ್ಯಾಪಕರು ಬೋಧಿಸುವ ವಿಷಯಗಳನ್ನು ಅವಲೋ ಕಿಸಬೇಕು. ಪ್ರಶ್ನಿಸುವ ಸಂದರ್ಭದಲ್ಲಿ ಪ್ರಶ್ನಿಸಿ ಇರುವ ಗೊಂದಲವನ್ನು ಸರಿಪಡಿಸಿಕೊಳ್ಳ ಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನು ಭವಿ ತಜ್ಷರು ಇದ್ದು, ಅವರನ್ನು ಕೂಡ ಕಾಲೇಜಿಗೆ ಆಹ್ವಾನಿಸಿ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ ಮಾಡಲು ಆಡಳಿತ ಮಂಡಳಿಯು ಮುಂದಾಗಲಿದೆ ಎಂದರು.

ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನವೇ ನಿಮಗೆ ನಿಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳುವ ಪ್ರಪ್ರಥಮ ಅವಕಾಶವನ್ನು ಪೋಷಕರು ನೀಡಿದ್ದಾರೆ. ಪೋಷಕರ ಆಸೆ ಆಕಾಂಕ್ಷೆಗಳಿಗೆ ನಿರಾಸೆ ಮಾಡದೇ ಶಿಕ್ಷಣದ ಪರಿಸರ ವ್ಯವಸ್ಥೆಯಲ್ಲಿ ಪರಿಚಯ ಮಾಡಿಕೊಳ್ಳುವುದರ ಮೂಲಕ ಕಾಲೇಜಿನ ನಿಯಮಾವಳಿಗಳು, ವಾರ್ಷಿಕ ಕಾರ್ಯ ಸೂಚಿ ಮತ್ತು ಅಧ್ಯಯನದ ಮಾರ್ಗೋ ಪಾಯಗಳೊಂದಿಗೆ ಉತ್ತಮ ಫಲಿತಾಂಶ ವನ್ನು ಪಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಹನ, ಮಾನಸ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Translate »