ವೈಭವದ ಶಂಕರಾಚಾರ್ಯರ ಆರಾಧನಾ ಮಹೋತ್ಸವ
ಹಾಸನ

ವೈಭವದ ಶಂಕರಾಚಾರ್ಯರ ಆರಾಧನಾ ಮಹೋತ್ಸವ

May 16, 2019

ಬೇಲೂರು: ಪಟ್ಟಣದ ಶ್ರೀ ಶಾರದಾ ಶೃಂಗೇರಿ ಮಠದಲ್ಲಿ ಬುಧವಾರ ಶಂಕರಜಯಂತಿ ಆರಾಧನಾ ಮಹೋ ತ್ಸವದ ಅಂಗವಾಗಿ ಶಂಕರಾಚಾರ್ಯರ ಪ್ರತಿಮೆಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಅವರ ಮೂರ್ತಿ ಯನ್ನು ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ವೇಳೆ ವೇದ ಬ್ರಹ್ಮ ಕೆ.ಆರ್.ಮಂಜು ನಾಥ್ ಮಾತನಾಡಿ, ಸನಾತನ ಹಿಂದೂ ಧರ್ಮ ಪುನರುತ್ಥಾನಕ್ಕೆ ಶಂಕರಾ ಚಾರ್ಯರ ಕೊಡುಗೆ ಅಪಾರ. ವೈದ್ಧಿಕ ಧರ್ಮದ ಪುನರುತ್ಥಾನಕ್ಕೆ 1,200 ವರ್ಷ ಗಳ ಹಿಂದೆಯೇ ಶಂಕರಾಚಾರ್ಯರು ಸುಧಾರಣೆ ತಂದರು, ಇಂತಹ ಧರ್ಮ ವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಈ ದಿನದಂದು ಶಂಕರರು ಬದ್ರಿ ಗುಹೆ ಯಿಂದ ಕೈಲಾಸಕ್ಕೆ ಹೋದರು ಎಂಬ ನಂಬಿಕೆ ಇದೆ. ಹಾಗಾಗಿ, ಈ ದಿನವನ್ನು ಆರಾಧನೆ ಮಾಡಲಾಗುತ್ತಿದೆ. ಪಾಡ್ಯದಿಂದ ಪಂಚಮಿಯವರೆಗೆ ಶಂಕರಮಠದಲ್ಲಿ ಮೊದಲು ಪೂಜೆ ಮಾಡಿ ನಂತರ ಪಂಚಮಿ ಯಿಂದ ದ್ವಾದಶಿಯವರೆಗೆ ನಂಜುಂಡೇ ಶ್ವರ ದೇವಸ್ಥಾನದಲ್ಲಿ ಸ್ಥಾಪನೆಯಾಗಿರುವ ಶಂಕರಾಚಾರ್ಯರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಅಭಿ ಷೇಕ ಮಂಗಳಾರತಿ ಪ್ರಸಾದ ವಿನಿಯೋಗ, ಹಾಗೂ ಏಳುದಿನಗಳ ಸಾಂಸ್ಕøತಿಕ ಕಾರ್ಯ ಕ್ರಮ ನಡೆಯುತ್ತದೆ ಎಂದರು.
ಶೃಂಗೇರಿ ಶಂಕರ ಮಠದ ಗುರು ಸೇವಾ ಸಮಿತಿ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಗುರು ಸೇವಾ ಸಮಿತಿ ಅಧ್ಯಕ್ಷ ರವೀಂದ್ರ, ಚಂದ್ರು ಇತರರು ಹಾಜರಿದ್ದರು.

Translate »