ಕುಡಿಯುವ ನೀರಿಗೆ ಆದ್ಯತೆ ನೀಡಿ: ಡಿಸಿ
ಹಾಸನ

ಕುಡಿಯುವ ನೀರಿಗೆ ಆದ್ಯತೆ ನೀಡಿ: ಡಿಸಿ

May 16, 2019

ಹಾಸನ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ತಾಲೂಕು ನೋಡಲ್ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರೊಂದಿಗೆ ಬರಪರಿಸ್ಥಿತಿ ಬಗ್ಗೆ ನಡೆಸಿದ ವಿಡಿಯೋ ಸಂವಾದದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಹಲವು ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ಸರಬರಾಜಾದಂತಹ ಕುಡಿ ಯುವ ನೀರಿನ ಬಿಲ್‍ಗಳನ್ನು 15 ದಿನಗ ಳೊಳಗೆ ಸಲ್ಲಿಸಬೇಕು. ಬರದ ಸ್ಥಿತಿ-ಗತಿ ಗಳ ಬಗ್ಗೆ ನಿರಂತರ ಮಾಹಿತಿ ಪಡೆದು ಸಾರ್ವಜನಿಕರ ಹಿತ ಕಾಯಬೇಕು ಎಂದು ತಿಳಿಸಿದರು.
ಜಾನುವಾರುಗಳಿಗಾಗಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಪೂರೈಕೆಯಾಗಬೇಕು. ನೀರಿನ ಬವಣೆ ಉಂಟಾಗದಂತೆ ತಾಲೂಕು ಆಡಳಿತ ಕ್ರಮಕೈಗೊಳ್ಳಬೇಕು ಎಂದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮುಂಗಾರು ಪ್ರವೇಶವಾಗಲಿದ್ದು, ಇದ ರಿಂದ ಯಾವುದೇ ಆಪತ್ತು ಸಂಭವಿಸ ದಂತೆ ಸಂಭವನೀಯ ಅಪಾಯ ಎದು ರಾಗಬಹುದಾದ ಪ್ರದೇಶಗಳಲ್ಲಿ ಪೂರ್ವ ಭಾವಿ ನಿಯಂತ್ರಣ ಕ್ರಮಗಳ ಸಿದ್ಧತೆಗಳು ಮತ್ತಷ್ಟು ಚುರುಕಾಗಿರಬೇಕು. ಎಲ್ಲಾ ಕಂಟ್ರೋಲ್ ರೂಂಗಳು ದಿನದ 24 ಗಂಟೆ ಚಾಲ್ತಿಯಲ್ಲಿರಬೇಕು ಅಲ್ಲದೇ ಆ ಪ್ರದೇಶ ಗಳ ಬಗ್ಗೆ ಕ್ಷಣ-ಕ್ಷಣದ ಮಾಹಿತಿಗಳನ್ನು ಪಡೆಯಬೇಕು ಎಂದು ಹೇಳಿದರು.

ಮಳೆಯಲ್ಲಿ ಅನಾಹುತಕ್ಕೀಡಾಗಬಹು ದಾದ ಪ್ರದೇಶಗಳಲ್ಲಿ ಸೂಕ್ತ ತಾತ್ಕಾಲಿಕ ಆಶ್ರಯ ತಾಣಗಳ ಸ್ಥಾಪನೆಯಾಗಬೇಕಿದ್ದು, ಸಾರ್ವಜನಿಕರ ಬಗ್ಗೆ ಹೆಚ್ಚಿನ ನಿಗಾವಹಿಸ ಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ್ ಪ್ರಕಾಶ್ ಮಾತನಾಡಿ, ಎಲ್ಲಾ ಕೆರೆ-ಕಟ್ಟೆ ಗಳಲ್ಲಿ ಹೂಳೆತ್ತುವ ಕಾರ್ಯಗಳಾಗಬೇಕು, ಹಸಿರೀಕರಣಕ್ಕೆ ಹೆಚ್ಚಿನ ಗಮನಹರಿಸಬೇಕು ಎಂದರಲ್ಲದೇ ಜಲ ಮರುಪೂರ್ಣದಂತಹ ಕಾರ್ಯಗಳು ಜಿಲ್ಲೆಯಾದ್ಯಂತ ಶೀಘ್ರ ವಾಗಿ ನಡೆಯಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇರುವ ಬರ ಪರಿಹಾರಕ್ಕೆ ಪ್ರತಿ ಇಲಾಖೆಗಳು ಒಟ್ಟಾಗಿ ಸಹಕಾರ ನೀಡಬೇಕು. ಅಲ್ಲದೇ, ಮುಂಬರುವ ಮುಂಗಾರಿನಿಂದ ಯಾವುದೇ ಅನಾಹುತ ಗಳು ನಡೆಯದಂತೆ ಹೆಚ್ಚಿನ ನಿಗಾವಹಿಸ ಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುಟ್ಟ ಸ್ವಾಮಿ, ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Translate »