ಮುಂಗಾರು: ಜೂ.6ರಂದು ಕೇರಳ ಪ್ರವೇಶ
ಮೈಸೂರು

ಮುಂಗಾರು: ಜೂ.6ರಂದು ಕೇರಳ ಪ್ರವೇಶ

May 16, 2019

ನವದೆಹಲಿ: ಈ ಬಾರಿ ಮುಂಗಾರು ಐದು ದಿನ ವಿಳಂಬವಾಗುತ್ತಿದ್ದು, ಜೂ.6ರಂದು ಕೇರಳ ಪ್ರವೇ ಶಿಸಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಜೂ.1ರಂದು ಕೇರಳ ಕರಾವಳಿ ಪ್ರವೇಶಿ ಸುತ್ತದೆ ಮತ್ತು ಜುಲೈ ಮಧ್ಯದೊಳಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಆದರೆ ಈ ವರ್ಷ ಮುಂಗಾರು ಸ್ವಲ್ಪ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಂಡಮಾನ್ ಸಮುದ್ರದ ದಕ್ಷಿಣ ಭಾಗ, ನಿಕೋ ಬಾರ್ ದ್ವೀಪಗಳು ಮತ್ತು ಆದಕ್ಕೆ ತಾಗಿಕೊಂಡಿರುವ ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಮುಂಗಾರು ಮಾರುತಗಳು ಸಾಗಿ ಬರುವುದಕ್ಕೆ ಮೇ 18, 19ರ ಸುಮಾರಿಗೆ ಅನುಕೂಲ ಕರ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆಯಷ್ಟೇ ಜೂ.4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಈ ಬಾರಿ ಸಾಮಾನ್ಯ ಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹೇಳಿತ್ತು. 2019ರಲ್ಲಿ ದೇಶ ದಲ್ಲಿ ದೀರ್ಘಾವಧಿ ಸರಾಸರಿ ಶೇ. 93ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಫೆÇೀನಿ ಚಂಡಮಾರುತ ಸೇರಿದಂತೆ ಮತ್ತಿತರ ಹವಾಮಾನ ಬದಲಾವಣೆ ಕಾರಣಗಳಿಂ ದಾಗಿ ಈ ಬಾರಿ ರಾಜ್ಯಕ್ಕೂ ಮುಂಗಾರು ಆಗಮನ ವಿಳಂಬವಾಗಲಿದ್ದು, ವಾರ್ಷಿಕ ಮಳೆಯಲ್ಲೂ ಕೊರತೆ ಉಂಟಾಗುವ ಆತಂಕ ಎದುರಾಗುವ ಸಾಧ್ಯತೆ ಇದೆ.

Translate »