ಮಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಹಂತಕ ದಂಪತಿ ಬಂಧನ
ಮೈಸೂರು

ಮಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಹಂತಕ ದಂಪತಿ ಬಂಧನ

May 16, 2019

ಮಂಗಳೂರು: ಮಂಗಳೂರು ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಹಂತಕ ದಂಪತಿಗಳನ್ನು ಬಂಧಿಸಿದ್ದಾರೆ.

ಕರಾವಳಿ ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ (35) ಹತ್ಯೆ ಕೇಸ್ ಬೆನ್ನು ಹಿಡಿದಿದ್ದ 30 ಮಂದಿ ಪೊಲೀಸ್ ತಂಡ, ಆರೋಪಿಗಳಾದ ಜಾನ್ಸನ್ ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್ ಎಂಬುವರನ್ನು ಬಂಧಿಸಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಕಮಿಷನರ್ ಸಂದೀಪ್ ಪಾಟೀಲ್, “ಹಣಕಾಸು ವ್ಯವಹಾರದ ವೈಷಮ್ಯವು ಕೊಲೆಗೆ ಕಾರಣವಾಗಿದೆ. ಪೊಲೀಸರು ಆರೋಪಿ ಯನ್ನು ಬಂಧಿಸಲು ಹೋದಾಗ ಆತ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ, ಆತನ ಪತ್ನಿ ಈ ಕೊಲೆಗೆ ಸಹಕಾರ ನೀಡಿದ್ದಾಳೆ, ಹಾಗಾಗಿ ಆಕೆಯನ್ನೂ ವಶಕ್ಕೆ ಪಡೆಯ ಲಾಗಿದೆ. ಜತೆಗೆ ಅವರು ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದೇವೆ” ಎಂದಿದ್ದಾರೆ.

“ಶ್ರೀಮತಿ ಶೆಟ್ಟಿ ಬಳಿ ಆರೋಪಿ ಜಾನ್ಸನ್ ಸಾಲ ಪಡೆದಿದ್ದಾನೆ. ಆಕೆ ಸಾಲದ ಹಣ ಹಿಂತಿರುಗಿಸಲು ಕೇಳಿದಾಗ ಅದಕ್ಕೆ ದಂಪತಿ ಗಳು ನಿರಾಕರಿಸಿದ್ದರು. ಶನಿವಾರ ಬೆಳಿಗ್ಗೆ ಸಾಲದ ಹಣ ನೀಡುವಂತೆ ಕೇಳಿಕೊಂಡು ಶ್ರೀಮತಿ ಶೆಟ್ಟಿ ಜಾನ್ಸನ್ ಮನೆಗೆ ಬಂದಾಗ ದಂಪತಿಗಳು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ ರುಂಡ, ಮುಂಡವನ್ನು ಬೇರ್ಪ ಡಿಸಿ ಮಂಗಳೂರು ನಗರದ ಬೇರೆ ಬೇರೆ ಭಾಗಗಳಲ್ಲಿ ಎಸೆದಿದ್ದಾರೆ ಎಂದು ವಿವರಿಸಿ ದರು. ಶ್ರೀಮತಿ ಶೆಟ್ಟಿ ದೇಹದ ಭಾಗಗಳು ನಗರದ ಕದ್ರಿ ಪಾರ್ಕ್ ಹಾಗೂ ನಂದಿ ಗುಡ್ಡೆ ಯಲ್ಲಿ ಪತ್ತೆಯಾಗಿದ್ದವು. ಆಕೆಯ ದ್ವಿಚಕ್ರ ವಾಹನ ಸೋಮವಾರ ನಾಗುರಿ ಸಮೀ ಪದ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಮಂಗಳೂರು ಜನತೆಯಲ್ಲಿ ವ್ಯಾಪಕ ಭೀತಿಯನ್ನು ಹುಟ್ಟು ಹಾಕಿತ್ತು.

Translate »