ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಪ್ರತಿಭಟನೆ

June 24, 2018

ಯಳಂದೂರು: ವಿವಿಧ ಬೇಡಿಕೆ ಈಡೇರಿ ಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು.

ನಾಡ ಮೇಗಲಮ್ಮ ದೇವಾಲಯದಿಂದ ಮೆರವಣಿಗೆ ಆರಂಭಿಸಿದ ನೌಕರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.
ಗ್ರಾಮ ಪಂಚಾಯಿತಿ ನೌಕರರು ಕನಿಷ್ಠ ವೇತನವಿಲ್ಲದೆ ಸಂಕಷ್ಟದಲ್ಲಿ ಜೀವನ ನಡೆ ಸುತ್ತಿದ್ದಾರೆ. ತಿಂಗಳಿಗೆ ಸರಿಯಾಗಿ ಸಂಬಳ ದೊರೆಯುತ್ತಿಲ್ಲ ಎಂದು ದೂರಿದರು.

ನೌಕರರಿಗೆ ಇಎಫ್‍ಎಂಎಸ್ ಮೂಲಕ ವೇತನ ನೀಡಲು ಆದೇಶ ಹೊರಡಿಸಿರು ವುದು ಸಂತಸ ವಿಚಾರವಾಗಿದೆ. ಆದರೆ, ಈ ಆದೇಶಕ್ಕೆ ಇನ್ನೂ 17 ಸಾವಿರ ನೌಕರರು ಸೇರ್ಪಡೆಯಾಗಿಲ್ಲ. ಇಎಫ್‍ಎಂಎಸ್‍ನ ಮೂಲ ಸ್ವಚ್ಛತಾಗಾರರಿಗೂ ವೇತನವನ್ನು ಗ್ರಾಮ ಪಂಚಾಯಿತಿಯಿಂದ ನೀಡಲು ಪ್ರಸ್ತಾಪ ಮಾಡಲಾಗಿದೆ. ಹಾಗಾಗಿ 51,114 ನೌಕರನ್ನು ಪಂಚತಂತ್ರ ಇಎಫ್‍ಎಂಎಸ್‍ಗೆ ಸೇರಿಸಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಮೇಲಿನ ಬೇಡಿಕೆ ಸೇರಿದಂತೆ ಇತರೆ 7 ಬೇಡಿಕೆ ಈಡೇರಿಸಬೇಕು ಎಂದು ಒತ್ತಾ ಯಿಸಿ ತಾಪಂ ಇಓ ರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ನೌಕರ ಸಂಘದ ರಾಜ್ಯ ಕಾರ್ಯದರ್ಶಿ ಗುಂಬಳ್ಳಿ ಕೃಷ್ಣ, ನೌಕರರಾದ ಅಂಬಳೆ ನಾಗರಾಜು, ಪಳನಿ ಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

Translate »