ಚೆನ್ನೈನಲ್ಲಿ ಫೀ.ಮಾ.ಕೆ.ಎಂ ಕಾರ್ಯಪ್ಪ ಪ್ರತಿಮೆ ಅನಾವರಣ
ಕೊಡಗು

ಚೆನ್ನೈನಲ್ಲಿ ಫೀ.ಮಾ.ಕೆ.ಎಂ ಕಾರ್ಯಪ್ಪ ಪ್ರತಿಮೆ ಅನಾವರಣ

June 24, 2018

ಮಡಿಕೇರಿ: ದೇಶ ಕಂಡ ಅಪ್ರತಿಮ ವೀರ, ಕನ್ನಡನಾಡಿನ ಹೆಮ್ಮೆ, ಕೊಡಗಿನ ಕಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕಂಚಿನ ಪ್ರತಿಮೆ ಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾ ಗಿದ್ದು, ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದೆ.

ತಮಿಳುನಾಡಿನ ಚೆನ್ನೈನ ಆಫೀ ಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಕೊಡಂದೇರ ಕಾರ್ಯಪ್ಪನವರ ಆಳು ದ್ದದ ಕಂಚಿನ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ದೇಶದ ಪ್ರಥಮ ಕಮಾಂಡರ್ ಇನ್ ಚೀಫ್ ಆಫ್ ಇಂಡಿಯನ್ ಆರ್ಮಿ ಎಂಬ ಹೆಗ್ಗಳಿಕೆ ಹೊಂದಿರುವ ಕಾರ್ಯಪ್ಪನವರ ಕಂಚಿನ ಪ್ರತಿಮೆಯನ್ನು, ನಿವೃತ್ತ ಏರ್ ಮಾರ್ಷಲ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪನವರ ಪುತ್ರ ಕೆ.ಸಿ ಕಾರ್ಯಪ್ಪ, ನಿವೃತ್ತ ಮೇಜರ್ ಜನರಲ್ ಟಿ.ಕೆ ಕೌಲ್ ಹಾಗೂ ಮೇಜರ್ ಜನರಲ್ ವಿ.ಡಿ. ಚೌಗುಲೆ ಅನಾವರಣ ಗೊಳಿಸಿದರು. ಈ ಸಂದರ್ಭ ಸೇನಾ ಅಧಿಕಾರಿಗಳ ಕುಟುಂಬ ವರ್ಗ ಕೂಡ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

Translate »