ದಾನ ಧರ್ಮಕ್ಕೆ ಗುಂಡ್ಲುಪೇಟೆ ಪ್ರಸಿದ್ಧ
ಚಾಮರಾಜನಗರ

ದಾನ ಧರ್ಮಕ್ಕೆ ಗುಂಡ್ಲುಪೇಟೆ ಪ್ರಸಿದ್ಧ

August 4, 2018

ಗುಂಡ್ಲುಪೇಟೆ: ಹಿಂದಿನಿಂದಲೂ ತಾಲೂಕಿನಲ್ಲಿ ಹೆಚ್ಚಿನ ದಾನಿಗಳು ಸಾರ್ವಜನಿಕರಿಗೆ ಉಪಯೋಗವಾಗುವಂತಹ ರೀತಿಯಲ್ಲಿ ದಾನ ಧರ್ಮದ ಕಾರ್ಯಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಶಾಸಕ ಸಿ.ಎಸ್. ನಿರಂಜನ್‍ಕುಮಾರ್ ಹೇಳಿದರು.

ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆವ ರಣದಲ್ಲಿ ನಿರ್ಮಾಣವಾಗಿರುವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಸ್ಮರಣಾ ರ್ಥವಾಗಿ ಪ್ರಸಾದ್ ಕುಟುಂಬದವರು ನಿರ್ಮಿಸಿದ ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಮುಂತಾದ ಸಾರ್ವಜನಿಕರಿಗೆ ಉಪ ಯೋಗವಾಗುವ ರೀತಿಯಲ್ಲಿ ದಾನ ಮಾಡುವ ದಾನಿಗಳನ್ನು ನೆನೆಯಬೇಕು. ಹಿಂದಿನಿಂದಲೂ ಸಹ ದಾನ ಧರ್ಮಕ್ಕೆ ಗುಂಡ್ಲುಪೇಟೆ ತಾಲೂಕು ಹೆಸರುವಾಸಿಯಾಗಿದೆ ಎಂದರು.

ಜನರ ಒಡನಾಟದಲ್ಲಿ ಇರುವವರು ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಿ ಉತ್ತಮ ರೀತಿಯಲ್ಲಿ ಉಪ ಯೋಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್, ಕಟ್ಟ ಡದ ದಾನಿ ಎಂ.ಸಿ.ಮಲ್ಲಿಕಾರ್ಜುನ್, ಕರ್ನಾ ಟಕ ಹಾಲು ಮಹಾಮಂಡಳಿಯ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್. ರಾಜು, ಗ್ರಾಪಂ ಅಧ್ಯಕ್ಷ ಬಿ.ಎಸ್.ಚೇತನ್, ಸದಸ್ಯರಾದ ಸತೀಶ್, ದೇವಮ್ಮಣಿ, ಮಹ ದೇವಯ್ಯ, ಮಂಜುನಾಥ್, ಚಾಮುಲ್ ಸಹಾ ಯಕ ವ್ಯವಸ್ಥಾಪಕ ಸೋಮಣ್ಣ, ವಿಸ್ತರಣಾ ಧಿಕಾರಿ ಸಿದ್ದಲಿಂಗೇಶ್‍ಕೋರೆ, ಮುಖಂಡ ರಾದ ಬೆಳಚಲವಾಡಿ ಪಂಚಾಕ್ಷರಿ, ನಾಗಪ್ಪ, ಬಸವಣ್ಣ, ಮಹೇಶ್, ಪರಶಿವಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

Translate »